ಮುಸ್ಲಿಂ ಯುವತಿ ಜೊತೆ ಹಿಂದೂ ಯುವಕ ಮದುವೆ: ತಾಳಿ ಕಟ್ಟುವ ವೇಳೆ ವಧುವನ್ನು ಎಳೆದೊಯ್ದ ಪೊಲೀಸರು


Team Udayavani, Jun 21, 2023, 10:56 AM IST

tdy-2

ತಿರುವನಂತಪುರಂ: ಮುಸ್ಲಿಂ ಯುವತಿಯೊಬ್ಬಳು ಹಿಂದೂ ಯುವಕನನ್ನು ಮದುವೆ ಆಗಲು ಹೋದ ವೇಳೆ ಪೊಲೀಸರು ಮಂಟಪದಿಂದ ಯುವತಿಯನ್ನು ಬಲವಂತವಾಗಿ ಎಳೆದೊಯ್ದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಜೂ.17 ರಂದು ಆಲ್ಫಿಯಾ (18) ಅಖಿಲ್ (21) ನನ್ನು ತಿರುವನಂತಪುರಂನಲ್ಲಿರುವ ಕೋವಲಂ ದೇವಾಲಯದಲ್ಲಿ ಮದುವೆಯಾಗಲು ನಿರ್ಧರಿಸಿದ್ದಾರೆ. ಇನ್ನೇನು ಮದುವೆ ಶಾಸ್ತ್ರ ನಡೆದು ತಾಳಿ ಕಟ್ಟುವ ವೇಳೆಯೇ ಪೊಲೀಸರು ದೇವಸ್ಥಾನಕ್ಕೆ ಬಂದು ಯುವತಿಯನ್ನು ಎಳೆದುಕೊಂಡು ಹೋಗಿದ್ದಾರೆ.

ಮುಸ್ಲಿಂ ಯುವತಿ ಆಗಿರುವ ಆಲ್ಫಿಯಾ ಹಿಂದೂ ಯುವಕ ಅಖಿಲ್‌ ನನ್ನು ಕಳೆದ ಕೆಲ ಸಮಯದಿಂದ ಪ್ರೀತಿಸುತ್ತಿದ್ದಾಳೆ. ಇಬ್ಬರ ಧರ್ಮ ಬೇರೆಯಾಗಿದ್ದರಿಂದ ಎರಡೂ ಕಡೆಯಿಂದ ಸಂಬಂಧಕ್ಕೆ ವಿರೋಧವಿದೆ.

ಜೂ.16 ರಂದು ಆಲ್ಫಿಯಾ ವಿವಾಹವಾಗುವ ನಿಟ್ಟಿನಲ್ಲಿ ತಿರುವನಂತಪುರಂಕ್ಕೆ ತೆರಳಿದ್ದಾರೆ. ಮರುದಿನ ಆಲ್ಫಿಯಾ ಮನೆಯವರು ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದಾರೆ.

ಇತ್ತ ದೇವಸ್ಥಾನದಲ್ಲಿ ಇನ್ನೇನು ಅಖಿಲ್‌ – ಆಲ್ಫಿಯಾ ವಿವಾಹ ನಡೆಯಬೇಕು ಅಷ್ಟರಲ್ಲೇ ಪೊಲೀಸರು ಬಂದಿದ್ದಾರೆ. ಪ್ರಕರಣವನ್ನು ಮುಕ್ತಾಯಗೊಳಿಸಲು ಆಲ್ಫಿಯಾಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಬೇಕಾಗಿದ್ದು,  ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ನಿಟ್ಟಿನಲ್ಲಿ ನಮ್ಮೊಂದಿಗೆ ಬನ್ನಿ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಪೊಲೀಸರ ಮಾತನ್ನು ಕೇಳದಿದ್ದಕ್ಕೆ ಆಲ್ಫಿಯಾಳನ್ನು ಪೊಲೀಸರು ಎಳೆದೊಯ್ದು ವಾಹನದಲ್ಲಿ ಕೂರಿಸಿದ್ದಾರೆ.

ನಾನು ಸ್ವಇಚ್ಛೆಯಿಂದ ಅಖಿಲ್‌ ನೊಂದಿಗೆ ಮದುವೆಯಾಗಲು ಮನೆಯಿಂದ ಬಂದಿರುವುದಾಗಿ ಪೊಲೀಸರ ಬಳಿ ಜೂ.16 ರಂದು ಹೇಳಿದ್ದೆ. ಪೊಲೀಸರು ನನ್ನನು ನಡೆಸಿಕೊಂಡ ರೀತಿ ಸರಿಯಲ್ಲ. ಕೆಟ್ಟ ಶಬ್ದಗಳಿಂದ ನಿಂದಿಸಿದ್ದಾರೆ. ನನಗೆ 18 ವರ್ಷ ಆಗಿಲ್ಲ ಎಂದಿದ್ದಾರೆ. ನನ್ನ ಮನೆಯವರು ದೂರು ನೀಡಿದ ಬಳಿಕ ಈ ಘಟನೆ ನಡೆದಿದೆ ಎಂದು ಯುವತಿ ಅಲ್ಫಿಯಾ ಹೇಳಿದ್ದಾಳೆ.

ಈ ಘಟನೆಯ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಇದೀಗ ಜೂ.20 ರಂದು (ಮಂಗಳವಾರ) ಆಲ್ಫಿಯಾ ಹಾಗೂ ಅಖಿಲ್‌ ವಿವಾಹವಾಗಿದ್ದಾರೆ ಎಂದು ವರದಿ ತಿಳಿಸಿದೆ.

 

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-kashmir-msulim-IAS

Kashmir; ಮೊದಲ ಮುಸ್ಲಿಂ ಐಎಎಸ್‌ ಅಧಿಕಾರಿ ನಿಧನ

PM Modi: ವಿದೇಶದಲ್ಲಿ ನಮ್ಮ ದೇವತೆಗಳಿಗೆ ರಾಹುಲ್‌ ಅವಮಾನ

PM Modi: ವಿದೇಶದಲ್ಲಿ ನಮ್ಮ ದೇವತೆಗಳಿಗೆ ರಾಹುಲ್‌ ಅವಮಾನ

1-JSSS

TMC ರಾಜ್ಯಸಭಾ ಸದಸ್ಯತ್ವಕ್ಕೆ ಜವಾಹರ್‌ ಸರ್ಕಾರ್‌ ರಾಜೀನಾಮೆ

1-eeeeee

Train ಹಳಿಯ ಮೇಲೆ ರಾಡ್‌: ಹಳಿ ತಪ್ಪಿಸಲು ಮತ್ತೆ ಯತ್ನ, ತಪ್ಪಿದ ಅನಾಹುತ

firee

Bihar;ಜಮೀನು ವಿವಾದ: 21 ದಲಿತರ ಮನೆಗಳಿಗೆ ಬೆಂಕಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.