ಮಸೀದಿಯಲ್ಲಿ ಹಿಂದೂ ಮದುವೆ : ಕೋಮು ಸೌಹಾರ್ದತೆಗೆ ಸಾಕ್ಷಿಯಾದ ಕೇರಳದ ಅಲೆಪ್ಪಿ
Team Udayavani, Jan 19, 2020, 8:25 PM IST
– ಚೆರುವಲ್ಲಿ ಮುಸ್ಲಿಂ ಜಮಾತ್ ಮಸೀದಿ ಆಡಳಿತ ಮಂಡಳಿಯೇ ಆಯೋಜಿಸಿದ್ದ ಮದುವೆ
– ಹಿಂದೂ ಸಂಪ್ರದಾಯದ ಮದುವೆಯಲ್ಲಿ ದಾಂಪತ್ಯಕ್ಕೆ ಕಾಲಿಟ್ಟ ಅಂಜು-ಶರತ್
– ವಧುವಿನ ಕುಟುಂಬದ ಬಡತನಕ್ಕೆ ಕರಗಿ ಮಸೀದಿಯಲ್ಲಿ ಮದುವೆಗೆ ಅನುವು
– ನವಜೋಡಿಗೆ ಮಸೀದಿ ವತಿಯಿಂದ 8 ಸವರನ್ ಚಿನ್ನ ಉಡುಗೊರೆ
ಅಲೆಪ್ಪಿ (ಕೇರಳ): ಕೋಮು ಸೌಹಾರ್ದತೆಗೆ ಹೊಸ ಉದಾಹರಣೆ ಎಂಬಂತೆ, ಕೇರಳದ ಅಲೆಪ್ಪಿಯ ಚೆರುವಲ್ಲಿ ಮುಸ್ಲಿಂ ಜಮಾತ್ ಮಸೀದಿಯಲ್ಲಿ ಹಿಂದೂ ಜೋಡಿಯ ವಿವಾಹವೊಂದು ಭಾನುವಾರ ಜರುಗಿದೆ.
ಮಸೀದಿಯ ಆಡಳಿತ ಮಂಡಳಿಯೇ ಆಯೋಜಿಸಿದ್ದ ಈ ಮದುವೆಯಲ್ಲಿ ಅಂಜು ಮತ್ತು ಶರತ್ ಎಂಬ ಯುವಜೋಡಿ, ತಮ್ಮ ಬಂಧುಮಿತ್ರರ ಸಮ್ಮುಖದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದೆ.
ನವಜೋಡಿಗೆ ಮಸೀದಿ ಆಡಳಿತ ಮಂಡಳಿ 8 ಸವರನ್ ಚಿನ್ನವನ್ನು ಉಡುಗೊರೆಯಾಗಿ ನೀಡಿದೆ.
ವಧು ಅಂಜುವಿನ ಮನೆಯವರು ಮದುವೆಯ ಖರ್ಚನ್ನೂ ನಿಭಾಯಿಸದಷ್ಟು ಬಡವರಾಗಿದ್ದ ಹಿನ್ನೆಲೆಯಲ್ಲಿ, ಅವರ ಕಷ್ಟಕ್ಕೆ ಸ್ಪಂದಿಸಿರುವ ಮಸೀದಿಯ ಆಡಳಿತ ಮಂಡಳಿ ಈ ಮದುವೆ ನೆರವೇರಿಸಿಕೊಟ್ಟಿದೆ.
ಪಿಣರಾಯಿ ಶ್ಲಾಘನೆ:
ಮದುವೆಯ ಫೋಟೋ ಟ್ವೀಟ್ ಮಾಡಿರುವ ಕೇರಳ ಸಿಎಂ ಪಿಣರಾಯಿ ವಿಜಯನ್, “”ಕೇರಳ ರಾಜ್ಯದ ಜನತೆ ಯಾವತ್ತೂ ಒಗ್ಗಟ್ಟಿನಿಂದ ಬಾಳುವಂಥವರಾಗಿದ್ದು ಯಾವುದೇ ಅನ್ಯ ಶಕ್ತಿ ಈ ಒಗ್ಗಟ್ಟನ್ನು ಒಡೆಯಲು ಸಾಧ್ಯವಿಲ್ಲ” ಎಂದಿದ್ದಾರೆ.
An example of unity from Kerala.
The Cheravally Muslim Jamat Mosque hosted a Hindu wedding of Asha & Sharath. The Mosque came to their help after Asha's mother sought help from them.
Congratulations to the newlyweds, families, Mosque authorities & the people of Cheravally. pic.twitter.com/nTX7QuBl2a
— Pinarayi Vijayan (@pinarayivijayan) January 19, 2020
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.