ಎಲ್‌ಎಸಿ ಕಣ್ಗಾವಲಿಗೆ ಸುಧಾರಿತ ಡ್ರೋನ್ ಅಸ್ತ್ರ; ಬೆಂಗಳೂರಿನ ಎಚ್‌ಎಎಲ್‌ನಲ್ಲಿ ಅಭಿವೃದ್ಧಿ
ಕೃತಕ ಬುದ್ಧಿಮತ್ತೆ ಚಾಲಿತ 60 ಡ್ರೋನ್ ತಯಾರಿಕೆ ಗುರಿ
Team Udayavani, Aug 8, 2022, 7:15 AM IST
ನವದೆಹಲಿ: ವಾಸ್ತವಿಕ ಗಡಿ ನಿಯಂತ್ರಣ ರೇಖೆ(ಎಲ್‌ಎಸಿ) ಸೇರಿದಂತೆ ಪರ್ವತಪ್ರದೇಶಗಳಲ್ಲಿ ಶತ್ರು ರಾಷ್ಟ್ರಗಳ ಚಲನವಲನಗಳ ಮೇಲೆ ನಿಗಾ ಇಡುವ “ಅಸ್ತ್ರ’ವೊಂದು ನಮ್ಮ ರಾಜ್ಯದಲ್ಲೇ ತಯಾರಾಗುತ್ತಿದೆ!
ಹೌದು, ಕೃತಕ ಬುದ್ಧಿಮತ್ತೆ ಚಾಲಿತ, ಸುಧಾರಿತ ಮತ್ತು ದೀರ್ಘಾವಧಿಗೆ ಸಂಚರಿಸಬಲ್ಲ, ವ್ಯೂಹಾತ್ಮಕ ಕಾರ್ಯಯೋಜನೆಗಳಿಗೆ ತಕ್ಕುದಾದ ಡ್ರೋನ್‌ಗಳನ್ನು ಬೆಂಗಳೂರಿನ ಸರ್ಕಾರಿ ಸ್ವಾಮ್ಯದ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್‌ಎಎಲ್) ಅಭಿವೃದ್ಧಿಪಡಿಸುತ್ತಿದೆ.
ಎಲ್‌ಎಸಿಯಲ್ಲಿ ನೆರೆರಾಷ್ಟ್ರ ಚೀನದ ಚಟುವಟಿಕೆಗಳು ಹೆಚ್ಚುತ್ತಿರುವಂಥ ಈ ಹೊತ್ತಲ್ಲಿ ಭಾರತದ ಸಶಸ್ತ್ರಪಡೆಗಳಿಗೆ ಈ ಡ್ರೋನ್‌ಗಳು ವರವಾಗಿ ಪರಿಣಮಿಸಲಿವೆ ಎಂದು ಮೂಲಗಳು ಹೇಳಿವೆ.
ವೈಶಿಷ್ಟ್ಯವೇನು?:
ಕ್ಷಿಪಣಿಗಳು, ಸೆನ್ಸರ್‌ಗಳು ಸೇರಿದಂತೆ 40 ಕೆ.ಜಿ. ತೂಕದ ಲೋಡ್ ಹೊರುವ ಸಾಮರ್ಥ್ಯ ಈ ರೋಟರಿ-ವಿಂಗ್ ಡ್ರೋನ್‌ಗಿದೆ. ಕೃತಕ ಬುದ್ಧಿಮತ್ತೆ ಚಾಲಿತ ಆಪರೇಟಿಂಗ್ ಸಿಸ್ಟಂ ಈ ಡ್ರೋನ್‌ಗಳಲ್ಲಿ ಇರಲಿವೆ. ಮುಂದಿನ ವರ್ಷದ ಮಧ್ಯಭಾಗದಲ್ಲಿ ಈ ಡ್ರೋನ್‌ನ ಪ್ರಾಯೋಗಿಕ ಹಾರಾಟ ನಡೆಸಲು ಎಚ್‌ಎಎಲ್ ನಿರ್ಧರಿಸಿದ್ದು, ಇಂತಹ 60 ಡ್ರೋನ್‌ಗಳನ್ನು ಅಭಿವೃದ್ಧಿಪಡಿಸುವ ಗುರಿ ಹಾಕಿಕೊಳ್ಳಲಾಗಿದೆ. ಕ್ಷಿಪಣಿಗಳು, ಸೆನ್ಸರ್‌ಗಳು ಮತ್ತಿತರ ಅಗತ್ಯ ವಸ್ತುಗಳ ಸಾಗಣೆ ಸೇರಿದಂತೆ ಹಲವು ಉದ್ದೇಶಗಳಿಗಾಗಿ ಸೇನೆಯು ಈ ಡ್ರೋನ್‌ಗಳನ್ನು ಬಳಸಬಹುದಾಗಿದೆ.
ಪೂರ್ವ ಲಡಾಖ್‌ನಲ್ಲಿ ಚೀನದೊಂದಿಗೆ ಸಂಘರ್ಷ ಹಾಗೂ ಕಳೆದ ವರ್ಷ ಜಮ್ಮು ಏರ್‌ಬೇಸ್‌ನಲ್ಲಿ ನಡೆದ ಡ್ರೋನ್ ದಾಳಿಯ ಬಳಿಕ ಭಾರತದ ಸೇನಾ ಪಡೆಗಳು ಶಸ್ತ್ರಸಜ್ಜಿತ ಡ್ರೋನ್‌ಗಳ ಖರೀದಿಯತ್ತ ಹೆಚ್ಚು ಆಸಕ್ತಿ ವಹಿಸಿವೆ. ಅದರ ಭಾಗವಾಗಿಯೇ ಈಗ ಎಚ್‌ಎಎಲ್ ಈ ಡ್ರೋನ್‌ಗಳ ಅಭಿವೃದ್ಧಿಯಲ್ಲಿ ತೊಡಗಿದೆ. ಇದಲ್ಲದೇ, ಅಮೆರಿಕದಿಂದ ಸುಮಾರು 3 ಶತಕೋಟಿ ಡಾಲರ್ ವೆಚ್ಚದಲ್ಲಿ ಮಲ್ಟಿ-ಮಿಷನ್ ಪ್ರಿಡೇಟರ್ ಡ್ರೋನ್‌ಗಳನ್ನು ಖರೀದಿಸಲೂ ಭಾರತ ಚಿಂತನೆ ನಡೆಸಿದೆ. 2020ರ ನವೆಂಬರ್‌ನಲ್ಲಿ ಭಾರತೀಯ ನೌಕಾಪಡೆಯು ಅಮೆರಿಕದಿಂದ ಎರಡು ಎಂಕ್ಯೂ-9ಬಿ ಸೀ ಗಾರ್ಡಿಯನ್ ಡ್ರೋನ್‌ಗಳನ್ನು ಖರೀದಿಸಿದೆ.
ಸೇನೆಗೆ ಆಗುವ ಅನುಕೂಲತೆಗಳು
– ಪರ್ವತ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ಇಡಲು
– ಅವಶ್ಯಕ ಸಾಮಗ್ರಿಗಳ ಸಾಗಾಟ ಮಾಡಲು
– ಸೆನ್ಸರ್‌ಗಳು, ಕ್ಷಿಪಣಿಗಳು, ಇತರೆ ಶಸ್ತ್ರಾಸ್ತ್ರ ಸೇರಿ ಸೇನಾ ಸಂಬಂಧಿ ವ್ಯವಸ್ಥೆಗಳ ಹೊತ್ತೂಯ್ಯಲು
ಚೊಚ್ಚಲ ಪರೀಕ್ಷಾರ್ಥ ಹಾರಾಟ ಯಾವಾಗ?- 2023ರಲ್ಲಿ
ಎಷ್ಟು ಲೋಡ್ ಹೊರಬಲ್ಲದು?- 40 ಕೆ.ಜಿ.
ಮೊದಲ ಹಂತದಲ್ಲಿ ಒಟ್ಟು ಎಷ್ಟು ಡ್ರೋನ್‌ಗಳ ಅಭಿವೃದ್ಧಿ? – 60
ಹೆರಾನ್ ತಯಾರಿಕೆಯ ಗುರಿ
ಇದಷ್ಟೇ ಅಲ್ಲದೆ, ಇಸ್ರೇಲಿ ಹೆರಾನ್ ಟಿಪಿ ಡ್ರೋನ್‌ಗಳನ್ನು ತಯಾರಿಸುವ ಮತ್ತೂಂದು ಮಹತ್ವಾಕಾಂಕ್ಷಿ ಯೋಜನೆಯನ್ನೂ ಎಚ್‌ಎಎಲ್ ಹಾಕಿಕೊಂಡಿದೆ. ಹೆರಾನ್ ಡ್ರೋನ್‌ಗಳು 35 ಸಾವಿರ ಅಡಿ ಎತ್ತರದಲ್ಲಿ ಸುಮಾರು 45 ಗಂಟೆಗಳ ಕಾಲ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತವೆ. ಅವುಗಳಲ್ಲಿ ಸ್ವಯಂಚಾಲಿತ ಟ್ಯಾಕ್ಸಿ ಟೇಕಾಫ್ ಮತ್ತು ಲ್ಯಾಂಡಿಂಗ್ ವ್ಯವಸ್ಥೆ, ಉಪಗ್ರಹ ಸಂವಹನ ವ್ಯವಸ್ಥೆಯನ್ನೂ ಅಳವಡಿಸಿರಲಾಗಿರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ
Parliament Winter Session: ಇಂದಿನಿಂದ ಸಂಸತ್ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
Maharashtra Election: ಅಘಾಡಿ ಸೋಲಿಗೆ ಉದ್ಧವ್,ಶರದ್ ಕಾರಣ: ಕಾಂಗ್ರೆಸ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.