ಸೂಜಿ ಶರೀರ… ಈತನ ದೇಹದಲ್ಲಿತ್ತು 150 ಪಿನ್!
Team Udayavani, Jul 11, 2017, 10:27 AM IST
ಹೊಸದಿಲ್ಲಿ: ಆ ವ್ಯಕ್ತಿಯ ದೇಹದಲ್ಲಿದ್ದದ್ದು ಒಂದಲ್ಲ, ಎರಡಲ್ಲ 150 ಗುಂಡುಪಿನ್ಗಳು! ಅವುಗಳನ್ನು ಹೊರತೆಗೆಸಲು ಆತ ಆರು ಆಸ್ಪತ್ರೆಗಳನ್ನು ಸುತ್ತಿದ್ದ. ಆದರೆ ಅಷ್ಟೊಂದು ಪಿನ್ಗಳು ತನ್ನ ದೇಹ ಸೇರಿದ್ದು ಹೇಗೆ ಎಂಬುದು ಮಾತ್ರ ಆತನಿಗೆ ಗೊತ್ತಿಲ್ಲವಂತೆ!
ಇದು ರಾಜಸ್ಥಾನದ ಕೋಟಾ ನಗರ ನಿವಾಸಿ, 56ರ ಹರೆಯದ ಬದ್ರಿಲಾಲ್ ಮೀನಾ ಅವರ ವ್ಯಥೆ. ಮಧುಮೇಹಿಯಾಗಿರುವ ಮೀನಾ ಅವರಿಗೆ ಮೊದಲು ಹಿಮ್ಮಡಿ ನೋವು ಕಾಣಿಸಿಕೊಂಡಿತ್ತು. ವೈದ್ಯರ ಬಳಿ ಹೋದಾಗ, ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಮೀನಾ ದೇಹದಿಂದ 75 ಪಿನ್ಗಳನ್ನು ಹೊರತೆಗೆದಿದ್ದರು. ಆ ನಂತರವೂ ದೇಹದ ವಿವಿಧ ಭಾಗಗಳಲ್ಲಿ ನೋವು ಕಾಣಿಸಿಕೊಂಡಾಗ ಮೀನಾ ಮತ್ತೆ ಸರ್ಜರಿ ಮಾಡಿಸಿಕೊಳ್ಳಲು ಐದು ಆಸ್ಪತ್ರೆ ಸುತ್ತಿದರು. ಕಡೆಗೆ ಫರೀದಾ ಬಾದ್ನ ಏಷ್ಯನ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಮೀನಾರ ಕುತ್ತಿಗೆ, ಕೈ, ಹಿಮ್ಮಡಿ ಮತ್ತು ಕಾಲುಗಳಿಂದ ಮತ್ತೆ 75 ಪಿನ್ಗಳನ್ನು ಹೊರತೆಗೆದರು. ಕೆಲ ಪಿನ್ಗಳು ಅವರ ಶ್ವಾಸನಾಳ, ಅನ್ನನಾಳ, ಅಪಧಮನಿಯಲ್ಲಿ ಸಿಲುಕಿದ್ದವು ಎಂದು ಡಾ| ಲಲಿತ್ ಮೋಹನ್ ಪರಾಶರ್ ಹೇಳಿದ್ದಾರೆ. ಇದೇ ವೇಳೆ, ಆತನನ್ನು ಮಾನಸಿಕ ಚಿಕಿತ್ಸೆಗೆ ಒಳಪಡಿಸಬೇಕೆಂದೂ ಸೂಚಿಸಿದ್ದಾರೆ. ಏಕೆಂದರೆ, ಕೆಲ ಮಾನಸಿಕ ರೋಗಿಗಳು ತಾವಾಗಿಯೇ ಸೂಜಿಯಂಥ ವಸ್ತುಗಳನ್ನು ತಮ್ಮ ದೇಹದೊಳಕ್ಕೆ ಸೇರಿಸಿರುತ್ತಾರೆ. ಆದರೆ, ತಾವು ಅಂಥದ್ದನ್ನು ಮಾಡಿಲ್ಲ ಎನ್ನುತ್ತಾರೆ ಎಂದೂ ವೈದ್ಯರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್ ವಿಧಿವಶ
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.