ನನ್ನ ಬಹುದಿನಗಳ ಕನಸು ನನಸಾಗುತ್ತಿದೆ: ಅಡ್ವಾಣಿ ಮನದಾಳದ ಮಾತು
Team Udayavani, Aug 4, 2020, 10:24 PM IST
ಹೊಸದಿಲ್ಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಲು ಪ್ರಮುಖ ಕಾರಣವಾಗಿದ್ದವರು ಎಲ್.ಕೆ. ಅಡ್ವಾಣಿ ಅವರು.
ಬಿಜೆಪಿಯ ರಥದ ಸಾರಥಿಯಾಗಿದ್ದ ಅವರು ಮಂಗಳವಾರ ಅಯೋಧ್ಯೆಯ ಕುರಿತಾಗಿ ಮಾತನಾಡಿದ್ದಾರೆ.
ಅಯೋಧ್ಯೆಯಲ್ಲಿ ರಾಮ ದೇವಾಲಯದ ಅಡಿಪಾಯ ಹಾಕಲು ಕ್ಷಣಗಣನೆ ಶುರುವಾಗಿರುವ ಸಂದರ್ಭದಲ್ಲಿ ದೇವಾಲಯದ ಆಂದೋಲನಕ್ಕೆ ಅಡಿಪಾಯ ಹಾಕಿದ ಅಡ್ವಾಣಿ ಅವರು ಭಾವುಕರಾಗಿ ವೀಡಿಯೋ ಮೂಲಕ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಅವರು ಏನು ಹೇಳಿದ್ದಾರೆ ಇಲ್ಲಿದೆ ಒದಿ.
ʼಜೀವನದ ಕೆಲವು ಕನಸುಗಳು ಈಡೇರಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಆದರೆ ಅವು ಮುಖ್ಯವಾದಾಗ ನಾವು ಕಾಯಲೇಬೇಕಾಗಿದೆ. ಆದೇ ರೀತಿ ಅಯೋಧ್ಯೆಗಾಗಿ ನಾನು ಕಾಯುತ್ತಿದ್ದ ದಿನಗಳು ಸಾರ್ಥಕವಾಗಿದೆ ಎಂದು ತೋರುತ್ತದೆ. ನನ್ನ ಹೃದಯದ ಸಮೀಪವಿದ್ದ ಅಂತಹ ಒಂದು ಕನಸು ಈಗ ಈಡೇರುತ್ತಿದೆ. ಖಂಡಿತವಾಗಿಯೂ ಈ ಕ್ಷಣ ಐತಿಹಾಸಿಕ ಮಾತ್ರವಲ್ಲದೇ ಭಾವನಾತ್ಮಕವಾಗಿದೆ. ಅಂದಹಾಗೆ ಇದು ನನಗೆ ಮಾತ್ರ ಭಾವನಾತ್ಮಕ ಎಲ್ಲ ಇಡೀ ಸಮುದಾಯಕ್ಕೆ ಎಂದಿದ್ದಾರೆ.
ಮುಂದುವರಿದು ಮಾತನಾಡಿರುವ ಅವರು, ರಾಮನ ಭವ್ಯ ದೇವಾಲಯದ ನಿರ್ಮಾಣ ಕಾರ್ಯ ಭಾರತೀಯ ಜನತಾ ಪಕ್ಷದ ಕನಸು ಹಾಗೂ ಮಿಷನ್ ಆಗಿದೆ. 1990ರಲ್ಲಿ ನಡೆದ ರಾಮ ಜನ್ಮಭೂಮಿ ಚಳವಳಿಯ ಸಂದರ್ಭದಲ್ಲಿ ಸೋಮನಾಥದಿಂದ ಅಯೋಧ್ಯೆಯ ವರೆಗಿನ ರಾಮ ರಥಯಾತ್ರೆಯ ಜವಾಬ್ದಾರಿಯನ್ನು ನಾನು ಹೊತ್ತುಕೊಂಡಿದ್ದೆ. ಈ ಕ್ಷಣ ನಾನು ಅದಕ್ಕೆ ವಿನಮ್ರನಾಗಿದ್ದೇನೆ. ಈ ರಥಯಾತ್ರೆಗೆ ಸಹಸ್ರಾರು ಸಂಖ್ಯೆಯಲ್ಲಿ ಜನರು ಬೆಂಬಲ ನೀಡಿದ್ದರು. ಇದು ಈ ಮಹತ್ಕಾರ್ಯಕ್ಕೆ ಹೆಚ್ಚಿನ ಶಕ್ತಿ ಮತ್ತು ಪ್ರೇರಣೆ ನೀಡಿತ್ತು.
ಈ ಶುಭ ಸಂದರ್ಭದಲ್ಲಿ ರಾಮ ಜನ್ಮಭೂಮಿ ಚಳವಳಿಗೆ ಸಹಕರಿಸಿದ ದೇಶದ ಮತ್ತು ವಿದೇಶದ ಎಲ್ಲ ಸಂತರು, ಮುಖಂಡರು ಹಾಗೂ ಜನರಿಗೆ ನನ್ನ ಕೃತಜ್ಞತೆಯನ್ನು ಅರ್ಪಿಸುತ್ತೇನೆ. 2019ರ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ರಾಮ ಮಂದಿರದ ನಿರ್ಮಾಣ ಕಾರ್ಯಗಳು ಶಾಂತಿಯುತ ವಾತಾವರಣದಲ್ಲಿ ಪ್ರಾರಂಭವಾಗುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ.
ಭಾರತೀಯ ನಾಗರಿಕತೆ ಮತ್ತು ಸಂಸ್ಕೃತಿಯಲ್ಲಿ ಶ್ರೀರಾಮನಿಗೆ ಅಗ್ರಸ್ಥಾನವಿದೆ. ಈ ದೇವಾಲಯವು ಶ್ರೀ ರಾಮ ನ ಎಲ್ಲಾ ಗುಣಗಳನ್ನು ಅಳವಡಿಸಿಕೊಳ್ಳಲು ಭಾರತೀಯರೆಲ್ಲರಿಗೂ ಪ್ರೇರಣೆ ನೀಡುತ್ತದೆ ಎಂದು ಭಾವಿಸುತ್ತೇನೆ. ರಾಮ ಮಂದಿರ ಶಾಂತಿಯುತ ಭಾರತವನ್ನು ಪ್ರತಿನಿಧಿಸಲಿದೆ, ಇಲ್ಲಿ ಎಲ್ಲರಿಗೂ ನ್ಯಾಯ ಇರುತ್ತದೆ. ಪ್ರತಿಯೊಬ್ಬರೂ ರಾಮನಿಂದ ಆಶೀರ್ವದಿಸಲಿ.ʼ
ಜೈ ಶ್ರೀರಾಮ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.