ಅಗ್ನಿವೀರರ ಮೊದಲ ತಂಡ ಸೇವೆಗೆ ಸಿದ್ಧ; 273 ಮಹಿಳೆಯರೂ ಸೇರಿ 2,600 ನೌಕಾ ಅಗ್ನಿವೀರರು
ಐಎನ್‌ಎಸ್ ಚಿಲ್ಕಾದಲ್ಲಿ 4 ತಿಂಗಳ ತರಬೇತಿ ಪೂರ್ಣ; 28ರಂದು ಪಾಸಿಂಗ್ ಔಟ್ ಪರೇಡ್
Team Udayavani, Mar 26, 2023, 7:15 AM IST
ನವದೆಹಲಿ:ಭಾರತೀಯ ಸೇನೆಯ ಹಲವು ದಶಕಗಳಷ್ಟು ಹಳೆಯ ನೇಮಕಾತಿ ಪ್ರಕ್ರಿಯೆಗೆ ಅಂತ್ಯಹಾಡಿ, “ಅಗ್ನಿವೀರ’ ಯೋಜನೆಯನ್ನು ಘೋಷಿಸಿದ ಬಳಿಕ ದೇಶದ ಮೊತ್ತಮೊದಲ “ಅಗ್ನಿವೀರ’ರ ತಂಡ ಸೇವೆಗೆ ಸಿದ್ಧವಾಗಿದೆ.
ಒಡಿಶಾದ ಐಎನ್‌ಎಸ್ ಚಿಲ್ಕಾದಲ್ಲಿ 273 ಮಹಿಳೆಯರೂ ಸೇರಿದಂತೆ 2,600 ನೌಕಾ ಅಗ್ನಿವೀರರ ಮೊದಲ ತಂಡ ಸತತ 4 ತಿಂಗಳ ಕಠಿಣ ತರಬೇತಿಯನ್ನು ಪೂರ್ಣಗೊಳಿಸಿದೆ. ಇದೇ 28ರಂದು ಅವರ “ಪಾಸಿಂಗ್ ಔಟ್ ಪರೇಡ್’ ನಡೆಯಲಿದೆ ಎಂದು ನೌಕಾಪಡೆ ತಿಳಿಸಿದೆ.
ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್.ಹರಿಕುಮಾರ್ ಅವರು ಈ ಪರೇಡ್‌ನಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ಯಶಸ್ವಿಯಾಗಿ ತರಬೇತಿ ಪೂರ್ಣಗೊಳಿಸಿರುವ ಅಗ್ನಿವೀರರನ್ನು ನಿರ್ಗಮನ ಪಥಸಂಚಲನದ ಬಳಿಕ, ಸಾಗರ ತರಬೇತಿಗಾಗಿ ಮುಂಚೂಣಿ ಯುದ್ಧ ನೌಕೆಗಳಲ್ಲಿ ನಿಯೋಜಿಸಲಾಗುತ್ತದೆ. ಪಾಸಿಂಗ್ ಔಟ್ ಪರೇಡ್ ಅನ್ನು ಸಾಮಾನ್ಯವಾಗಿ ಹಗಲು ಹೊತ್ತಲ್ಲಿ ನಡೆಸಲಾಗುತ್ತದೆ. ಆದರೆ, ಈ ಬಾರಿ ಸಶಸ್ತ್ರ ಪಡೆಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಮಾ.28ರಂದು ಸೂರ್ಯಾಸ್ತದ ಬಳಿಕ ಪರೇಡ್ ನಡೆಸುತ್ತಿರುವುದು ವಿಶೇಷ.
ತರಬೇತಿ ಪೂರ್ಣಗೊಳಿಸಿರುವ ಅಗ್ನಿವೀರರು- 2,600
ಈ ಪೈಕಿ ಮಹಿಳೆಯರ ಸಂಖ್ಯೆ- 273
ತರಬೇತಿ ಆರಂಭವಾಗಿದ್ದು – ನವೆಂಬರ್ 2022
ಐಎನ್‌ಎಸ್ ಚಿಲ್ಕಾದಲ್ಲಿ ಎಷ್ಟು ವಾರಗಳ ತರಬೇತಿ?- 16
ಏನೇನು ತರಬೇತಿ?- ದೈಹಿಕ ತರಬೇತಿ, ಸ್ವಿಮ್ಮಿಂಗ್, ಸಣ್ಣ ಶಸ್ತ್ರಾಸ್ತ್ರಗಳು, ಸೈಬರ್ ಭದ್ರತೆ, ನೌಕಾಪಡೆ ಕೇಂದ್ರಿತ ತರಬೇತಿ ಇತ್ಯಾದಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.