ರಿಯಾಜ್, ಇಕ್ಬಾಲ್ ಸಹಿತ 18 ಉಗ್ರರು ಭಯೋತ್ಪಾದಕರು
ವೈಯಕ್ತಿಕ ನೆಲೆಯಲ್ಲಿ ಉಗ್ರ ಪಟ್ಟ ನೀಡಿದ ಕೇಂದ್ರ ಸರಕಾರ
Team Udayavani, Oct 28, 2020, 5:30 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಮುಂಭಾಗದ ಸ್ಫೋಟವೂ ಸೇರಿದಂತೆ ದೇಶದ ವಿವಿಧೆಡೆ ಭಯೋತ್ಪಾದನ ಚಟುವಟಿಕೆ
ನಡೆಸಿದ್ದ ರಿಯಾಜ್ ಮತ್ತು ಇಕ್ಬಾಲ್ ಭಟ್ಕಳ ಸೇರಿ 18 ಉಗ್ರರಿಗೆ ಕೇಂದ್ರ ಸರಕಾರ “ಭಯೋತ್ಪಾದಕರ’ ಪಟ್ಟ ನೀಡಿದೆ.
ದೇಶದಲ್ಲಿನ ಉಗ್ರ ಚಟುವಟಿಕೆಗಳಿಗೆ ಕಡಿವಾಣ ಹಾಕುವ ದೃಷ್ಟಿಯಿಂದ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆಗೆ 2019ರಲ್ಲಿ ತಿದ್ದುಪಡಿ ತಂದಿದ್ದ ಕೇಂದ್ರ ಸರಕಾರ ಆಗಿನಿಂದ ವೈಯಕ್ತಿಕ ನೆಲೆಗಟ್ಟಿನಲ್ಲಿ ಭಯೋತ್ಪಾದಕರೆಂದು ಘೋಷಿಸುವ ನಿರ್ಧಾರ ತೆಗೆದುಕೊಂಡಿತ್ತು. ಇದರನ್ವಯ ಕಳೆದ ವರ್ಷವೇ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸೇರಿದಂತೆ ನಾಲ್ವರಿಗೆ ಉಗ್ರ ಪಟ್ಟ ನೀಡಲಾಗಿತ್ತು. ಕಳೆದ ಜುಲೈಯಲ್ಲಿ 9 ಮಂದಿ ಖಲಿಸ್ಥಾನ್ ಪಾತಕಿಗಳಿಗೆ ಈ ಪಟ್ಟ ನೀಡಲಾಗಿತ್ತು. ಈಗ ಮೂರನೇ ಪಟ್ಟಿ ಬಿಡುಗಡೆಯಾಗಿದ್ದು, ಒಟ್ಟು 18 ಮಂದಿಯನ್ನು ಭಯೋತ್ಪಾದಕರು ಎಂದು ಗುರುತಿಸಿದೆ.
ಭಯೋತ್ಪಾದಕರು ಯಾರೆಲ್ಲ?
ಭಟ್ಕಳ ಮೂಲದವರು ಹಾಗೂ ಇಂಡಿಯನ್ ಮುಜಾಹಿದೀನ್ ಉಗ್ರ ಸಂಘಟನೆಯ ಸಂಸ್ಥಾಪಕರಾದ ರಿಯಾಜ್ ಮತ್ತು ಇಕ್ಬಾಲ್ ಭಟ್ಕಳ ಅವರನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸಲಾಗಿದೆ. ಅವರ ಮೇಲೆ ಜರ್ಮನ್ ಬೇಕರಿ (2010), ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ (2010) ಮುಂಭಾಗದ ಸ್ಫೋಟ, ಜಾಮಿಯಾ ಮಸೀದಿ (2010), ಶೀತಲ್‌ಘಾಟ್ (2010) ಮತ್ತು ಮುಂಬಯಿ (2011), ಜೈಪುರ ಸರಣಿ ಸ್ಫೋಟ (2008), ದಿಲ್ಲಿ ಸರಣಿ ಸ್ಫೋಟ (2008), ಅಹ್ಮದಾಬಾದ್ ಮತ್ತು ಸೂರತ್ ಸರಣಿ ಸ್ಫೋಟ (2008) ನಡೆಸಿದ ಆರೋಪಗಳಿವೆ.
ಎಲ್‌ಇಟಿ ಉಗ್ರರು
2008ರ ಮುಂಬಯಿ ದಾಳಿ ರೂವಾರಿಗಳಾದ ಸಾಜಿದ್ ಮಿರ್ (ಎಲ್‌ಇಟಿ), ಯೂಸುಫ್ ಮುಝಾಮಿಲ್ (ಎಲ್‌ಇಟಿ) ಮತ್ತು ಎಲ್‌ಇಟಿ ಮುಖ್ಯಸ್ಥ ಹಫೀಜ್ ಸಯೀದ್ ಅಳಿಯ ಅಬ್ದುರ್ ರೆಹಮಾನ್ ಮಕ್ಕಿ, ಶಹೀದ್ ಮೆಹಮೂದ್ ಅಲಿಯಾಸ್ ಶಹೀದ್ ಮೆಹೂ¾ದ್ ರೆಹಮತುಲ್ಲಾ ಕೂಡ ಸೇರಿದ್ದಾರೆ. ಅಕ್ಷರಧಾಮ ದೇಗುಲದ ಮೇಲಿನ ದಾಳಿ (2002) ರೂವಾರಿ ಫರ್ಹಾತುಲ್ಲಾ ಘೋರಿ ಅಲಿಯಾಸ್ ಅಬು ಸುಫಿಯಾನ್ ಕೂಡ ಇದೇ ಪಟ್ಟಿಗೆ ಸೇರ್ಪಡೆಯಾಗಿದ್ದಾನೆ.
ದಾವೂದ್ ಭಂಟರೂ ಸೇರ್ಪಡೆ
ಇನ್ನು ವಿಶ್ವಸಂಸ್ಥೆಯಿಂದಲೇ ಗುರುತಿಸಲ್ಪಟ್ಟಿರುವ ಶೇಕ್ ಶಕೀಲ್ ಅಲಿಯಾಸ್ ಛೋಟಾ ಶಕೀಲ್, ಮೊಹಮ್ಮದ್ ಅನೀಸ್ ಶೇಖ್, ಇಬ್ರಾಹಿಂ ಮೆಮೋನ್ ಅಲಿಯಾಸ್ ಟೈಗರ್ ಮೆಮೋನ್ ಮತ್ತು ಜಾವೇದ್ ಚಿಕ್ನಾ ಕೂಡ ಸೇರಿದ್ದಾರೆ.
ಜೈಶ್-ಎ-ಮೊಹಮ್ಮದ್
ಈ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‌ನ ಸಂಬಂಧಿಗಳಾದ ಅಬ್ದುಲ್ ರೌಫ್ ಅಸ^ರ್, ಇಬ್ರಾಹಿಂ ಅಥರ್ ಮತ್ತು ಯೂಸುಫ್ ಅಜರ್ ಅವರನ್ನೂ ಭಯೋತ್ಪಾದಕ ಪಟ್ಟಿಗೆ ಸೇರಿಸಲಾಗಿದೆ. ಎಲ್ಲರ ಮೇಲೆ 1999ರ ಇಂಡಿಯನ್ ಏರ್‌ಲೈನ್ಸ್ ವಿಮಾನ ಅಪಹರಣ ಕೈವಾಡದ
ಆರೋಪವಿದೆ. ಹಾಗೆಯೇ ಶಹೀದ್ ಲತೀಫ್ ಎಂಬ ಉಗ್ರನೂ ಈ ಪಟ್ಟಿಗೆ ಸೇರಿದ್ದಾನೆ.
ಹಿಜ್ಬುಲ್ ಮುಜಾಹಿದೀನ್
ಸಲಾಹುದ್ದೀನ್, ಗುಲಾಮ್ ನಬಿ ಖಾನ್, ಜಾಫರ್ ಹುಸೈನ್ ಬಟ್ ಎಂಬವರನ್ನೂ ಉಗ್ರ ಪಟ್ಟಿಗೆ ಸೇರಿಸಲಾಗಿದೆ.
ಏನಿದು ಉಗ್ರ ಪಟ್ಟಿ ?
ಮೊದಲಿಗೆ ಸಂಘಟನೆಗಳನ್ನು ಮಾತ್ರ ಭಯೋತ್ಪಾದಕರ ಪಟ್ಟಿಗೆ ಸೇರಿಸಲಾಗುತ್ತಿತ್ತು. ಆದರೆ 2019ರಲ್ಲಿ ಮೂಲ ಕಾಯ್ದೆಗೆ ತಿದ್ದುಪಡಿ ತಂದ ಕೇಂದ್ರ ಸರಕಾರ, ಇದರಡಿಯಲ್ಲಿ ವ್ಯಕ್ತಿಗಳನ್ನೂ ಭಯೋತ್ಪಾದಕ ಪಟ್ಟಿಗೆ ಸೇರಿಸಲು ಅನುವು ಮಾಡಿಕೊಟ್ಟಿತು. ಇದರ ಪ್ರಕಾರ ಎನ್‌ಐಎಗೆ ಸಂಪೂರ್ಣ ಅಧಿಕಾರ ಸಿಗಲಿದೆ. ಎನ್‌ಐಎ ಡಿಜಿ ಅವರೇ ಭಯೋತ್ಪಾದಕ ಪಟ್ಟಿಗೆ ಸೇರಿದ ಉಗ್ರರ ಆಸ್ತಿ ವಶಕ್ಕೆ ಆದೇಶ ನೀಡಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.