ಬಿಜೆಪಿ ವಿರುದ್ಧ ತಿರುಗಿ ಬಿದ್ದ ಶಾಸಕ
Team Udayavani, Jul 15, 2022, 6:22 AM IST
ಭೋಪಾಲ್: ಮಧ್ಯಪ್ರದೇಶದ ಬಿಜೆಪಿ ಶಾಸಕರೊಬ್ಬರು ಇದೀಗ ಸರಕಾರದ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಮೈಹಾರ್ ವಿಧಾನಸಭಾ ಕ್ಷೇತ್ರದ ಶಾಸಕ ನಾರಾಯಣ ತ್ರಿಪಾಠಿ ಅವರು ಸ್ಥಳೀಯ ಚುನಾವಣೆಯಲ್ಲಿ ಸರಕಾರ ನಡೆದುಕೊಂಡ ರೀತಿಯನ್ನು ಖಂಡಿಸಿದ್ದಾರೆ.
“ನಾನು ಬಿಜೆಪಿಯ ವಿರೋಧಿಯಲ್ಲ. ಆದರೆ ಪಕ್ಷ ಮಾಡುತ್ತಿರುವುದು ನನಗೆ ನೋವುಂಟು ಮಾಡಿದೆ. ಮೈಹಾರ್ ಪೂರ್ತಿ ಸುತ್ತಾಡಿ ನೋಡಿದೆ. ಇಲ್ಲಿ ಎಲ್ಲ ಸರಕಾರಿ ಅಧಿಕಾರಿಗಳು ಪಕ್ಷಕ್ಕೆ ಪ್ರಚಾರ ಮಾಡುವ ರೀತಿಯಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಶಾಸಕನಾಗಿದ್ದರೂ ನನಗಿದು ನೋವುಂಟು ಮಾಡಿದೆ. ಇದು ನಿಜಕ್ಕೂ ಸರಿಯಲ್ಲ’ ಎಂದು ಅವರು ದೂರಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.