ತಿಂಗಳ ಬಳಿಕ ಪೊಲೀಸ್ ಬಲೆಗೆ ಹನಿಪ್ರೀತ್
Team Udayavani, Oct 4, 2017, 9:53 AM IST
ಚಂಡೀಗಢ: ಬಾಬಾ ಗುರ್ಮೀತ್ ರಾಮ್ ರಹೀಂ ದತ್ತುಪುತ್ರಿ ಹನಿಪ್ರೀತ್ ಇನ್ಸಾನ್ ಕಡೆಗೂ ಪೊಲೀಸ್ ಬಲೆಗೆ ಬಿದ್ದಿದ್ದಾಳೆ. ಪಂಜಾಬ್ನಲ್ಲಿ ಇದ್ದಾಳೆನ್ನುವ ಖಚಿತ ಮಾಹಿತಿ ಆಧರಿಸಿ ಹರಿಯಾಣ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಆಕೆ ಶರಣಾ ಗತಿಗೆ ಮುಂದಾದ ಸಂದರ್ಭದಲ್ಲಿ ಬಂಧಿಸ ಲಾಗಿದೆ ಎಂದು ಮೂಲಗಳು ಹೇಳಿವೆ.
ಪ್ರಿಯಾಂಕಾ ತನೇಜಾ ಅಲಿಯಾಸ್ ಹನಿಪ್ರೀತ್, ಪಂಜಾಬ್ನ ಜಿರಕ್ಪುರ- ಪಟಿ ಯಾಲ ಮಾರ್ಗದಲ್ಲಿ ಹಿಂಸಾಕೃತ್ಯ ನಡೆಸಿದವರ ಜತೆ ಸಂಪರ್ಕದಲ್ಲಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಬಂಧಿಸಲಾ ಗಿದೆ ಎಂದು ಹರಿಯಾಣ ಡಿಜಿಪಿ ಬಿ.ಎಸ್. ಸಂಧು ತಿಳಿಸಿದ್ದಾರೆ. ಗುರ್ಮೀತ್ ವಿರುದ್ಧದ ಆರೋಪ ಸಾಬೀ ತಾದ ಅನಂತರ ನಡೆದ ಹಿಂಸಾಚಾರದಲ್ಲಿ 41 ಮಂದಿ ಮೃತಪಟ್ಟಿದ್ದರು. ಹಿಂಸೆಗೆ ಪ್ರಚೋ ದನೆ ನೀಡಿದ ಹಾಗೂ ದೇಶ ದ್ರೋಹದ ಆರೋಪ ಹನಿಪ್ರೀತ್ ಮೇಲಿದೆ.
ಸದ್ಯ ಹನಿಪ್ರೀತ್ಳನ್ನು ವಿಶೇಷ ತನಿಖಾ ತಂಡದ ವಶಕ್ಕೆ ನೀಡಲಾಗಿದ್ದು, ನ್ಯಾಯಾಲ ಯಕ್ಕೆ ಹಾಜರುಪಡಿಸುವುದಕ್ಕೂ ಮೊದಲು ಪೊಲೀಸರು ಇನ್ನೊಮ್ಮೆ ವಿಚಾ ರಣೆ ನಡೆಸಲಿ ದ್ದಾರೆ. ಬುಧವಾರ ಕೋರ್ಟ್ ಗೆ ಹಾಜರು ಪಡಿಸುವ ಸಾಧ್ಯತೆ ಇದೆ. ಹನಿಪ್ರೀತ್ ಜತೆ ಇದ್ದ ಇನ್ನೊಬ್ಟಾಕೆಯನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
ಅಪ್ಪ-ನನ್ನ ನಡುವೆ ಅಕ್ರಮ ಸಂಬಂಧವಿಲ್ಲ
“”ತಂದೆ ಮುಗ್ಧ. ಅವರ ಮೇಲೆ ಅತ್ಯಾಚಾರ ಆರೋಪ ಹೊರಿಸಿ ಬಂಧಿಸಲಾಯಿತು. ಇದರಿಂದ ಖನ್ನಳಾಗಿದ್ದೆ. ತಂದೆಯೊಬ್ಬ ಮಗಳನ್ನು ಪ್ರೀತಿಯಿಂದ ಮುಟ್ಟಲೇ ಬಾರದೇನು? ವಿನಾಕಾರಣ, ನನ್ನ ಮತ್ತು ಅವರ ವಿರುದ್ಧ ಅಕ್ರಮ ಸಂಬಂಧ ಕಲ್ಪಿಸಲಾಗಿದೆ. ಅಂಥ ಯಾವುದೇ ಅಕ್ರಮ ಸಂಬಂಧ ನನ್ನ ಮತ್ತು ಅವರ ಮಧ್ಯೆ ಇಲ್ಲ.” ಹೀಗೆಂದು ಕಿಡಿಕಾರಿದ್ದು ಹನಿಪ್ರೀತ್. ಪೊಲೀಸರಿಂದ ತಲೆಮರೆಸಿಕೊಂಡು ಇದ್ದ ಹನಿಪ್ರೀತ್, ಬಂಧನಕ್ಕೂ ಮುನ್ನ ಸ್ಥಳೀಯ ಸುದ್ದಿವಾಹಿನಿಗೆ ಸಂದರ್ಶನ ನೀಡಿದ್ದರು. ಈ ವೇಳೆ ತಮ್ಮ ಮೇಲಿನ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, “”ಹೇಗೆ ನನ್ನ ಮೇಲೆ ಆರೋಪ ಹೊರಿಸುತ್ತಾರೆ? ನನ್ನ ತಂದೆಯ ಜತೆ ವಾಸಿಸುವುದು ತಪ್ಪಾ? ಮಗಳನ್ನು ಪ್ರೀತಿಯಿಂದ ಕಾಣುವುದು ತಂದೆಯ ಕರ್ತವ್ಯವಲ್ಲವೇ? ಅಷ್ಟಕ್ಕೂ ತಂದೆ ನಿರಪರಾಧಿಯಾಗಿ ಬರುತ್ತಾರೆ ಎಂಬ ನಂಬಿಕೆ ನನಗಿದೆ” ಎಂದಿದ್ದಾಳೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ಮದುವೆ ಸಂಭ್ರಮದಲ್ಲಿದ್ದ ವರನಿಗೆ ಹೃದಯಾಘಾತ… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು
Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್ ಭೀತಿ!
Election: ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆ ಪ್ರಚಾರಕ್ಕೆ ತೆರೆ: ನಾಳೆ ಮತದಾನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.