ಡೇರಾದ ಹನಿಪ್ರೀತ್ ನೇಪಾಲದಲ್ಲಿ ಪತ್ತೆ?
Team Udayavani, Sep 20, 2017, 11:05 AM IST
ಹೊಸದಿಲ್ಲಿ: ಡೇರಾ ಸಚ್ಚಾ ಸೌಧ ಮುಖ್ಯಸ್ಥ ಬಾಬಾ ಗುರ್ಮೀತ್ ರಾಂ ರಹೀಂ ದತ್ತುಪುತ್ರಿ ಹನಿಪ್ರೀತ್ ಇನ್ಸಾನ್ ಪತ್ತೆ ಕಾರ್ಯ ಚುರುಕಾಗಿರುವ ಬೆನ್ನಲ್ಲೇ ಇದೀಗ ಆಕೆ ನೇಪಾಲದಲ್ಲಿ ಪೊಲೀಸರಿಗೆ ಕಾಣಿಸಿಕೊಂಡಿದ್ದಾಳೆ! ಹೀಗಂಥ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದು, ನೇಪಾಲ ಪೊಲೀಸರು ಈ ಕುರಿತು ಮಾಹಿತಿ ನೀಡಿರುವುದಾಗಿ ಹೇಳಿವೆ. ಅಷ್ಟೇ ಅಲ್ಲ ಆಕೆಯೊಂದಿಗೆ ಇನ್ನೂ ಮೂವರು ಕಾರಿನಲ್ಲಿದ್ದರು ಎಂದು ಹೇಳಲಾಗಿದೆ.
ಅತ್ಯಾಚಾರ, ಭ್ರಷ್ಟಾಚಾರ ಆರೋಪದಡಿ ಗುರ್ಮೀತ್ನನ್ನು ಬಂಧಿಸಿದ ಬೆನ್ನಲ್ಲೇ ಹನಿಪ್ರೀತ್ ಸಹಿತ ಪ್ರಮುಖ 10 ಆರೋಪಿ ಗಳು ಪೊಲೀಸರ ಕಣ್ತಪ್ಪಿಸಿಕೊಂಡು ನೇಪಾಲಕ್ಕೆ ಪರಾರಿಯಾಗಿದ್ದರು. ಮಾಧ್ಯಮ ವರದಿಯ ಪ್ರಕಾರ ಹನಿಪ್ರೀತ್ ಕಳೆದ ವಾರ ನೇಪಾಲದ ಪೊಖರಾ ಎಂಬಲ್ಲಿ ಕಾಣಿಸಿ ಕೊಂಡಿದ್ದಾರೆ ಎನ್ನಲಾಗಿದೆ. ಆ.28ರಿಂದಲೂ ಹರಿಯಾಣ ಹಾಗೂ ನೇಪಾಲ ಪೊಲೀಸರ ಕಣ್ಣು ತಪ್ಪಿಸಿಕೊಂಡು ಓಡಾಡುತ್ತಿರುವ ಈ ಆರೋಪಿಗಳ ಮೇಲೆ ಇದೀಗ ಹರಿಯಾಣ ಪೊಲೀಸರು ಇನ್ನೂ ಕೆಲ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಮೂಲಕ ಹುಡುಕಾಟ ಚುರುಕುಗೊಳಿಸಿದ್ದಾರೆ.
20 ರೂ.ಗೆ ತರಕಾರಿ ಬೆಳೆಯುತ್ತಿರುವ ಬಾಬಾ!
ಅತ್ಯಾಚಾರದಂಥ ಗಂಭೀರ ಆರೋಪದ ಮೇಲೆ ರೋಹrಕ್ ಜೈಲುಗಳ ಕಂಬಿ ಎಣಿಸುತ್ತಿರುವ ಬಾಬಾ ಗುರ್ಮೀತ್ ಈಗ ಪ್ರತಿದಿನ 20 ರೂ. ಸಂಪಾದಿಸುತ್ತಿದ್ದಾನೆ! ಅಚ್ಚರಿಯಾದರೂ ಇದು ಸತ್ಯ. ಇವನಿಗೆ ಜೈಲು ಆವರಣದಲ್ಲಿ ತರಕಾರಿ ಬೆಳೆಯುವ ಕೆಲಸ ನೀಡಲಾಗಿದೆ. ದಿನಕ್ಕೆ ಎಂಟು ಗಂಟೆ ಈ ಕೆಲಸಕ್ಕಾಗಿಯೇ ಮೀಸಲಿಡುತ್ತಿದ್ದು, ಇದಕ್ಕಾಗಿ ದಿನಕ್ಕೆ 20 ರೂ. ನೀಡಲಾಗುತ್ತದೆ ಎಂದು ಜೈಲು ಅಧಿಕಾರಿಗಳೇ ತಿಳಿಸಿದ್ದಾರೆ. ಅಷ್ಟಕ್ಕೂ ಬಾಬಾಗಾಗಿಯೇ ತರಕಾರಿ ಬೆಳೆಯಲಾಗುತ್ತಿದೆ ಅಂಥಲ್ಲ. ಕೈದಿಗಳು ಖನ್ನತೆಗೆ ಒಳಗಾಗದಂತೆ ನೋಡಿಕೊಳ್ಳಲು ಜೈಲಿನಲ್ಲೇ ಬೇರೆ ಬೇರೆ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗುತ್ತದೆ. ಹಾಗೇ, ಎಲ್ಲರಂತೆ ರಾಂ ರಹೀಂ ಕೂಡ ತರಕಾರಿ ಬೆಳೆಯುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
Protest: ಕಾಶ್ಮೀರ ಚರ್ಚೆ: ಆಕ್ಸ್ಫರ್ಡ್ನಲ್ಲಿ ಭಾರತೀಯರ ಪ್ರತಿಭಟನೆ
Chennai: ಲಾಟರಿ ಕಿಂಗ್ ಮಾರ್ಟಿನ್ನ 8.8 ಕೋಟಿ ರೂ. ಇ.ಡಿ. ವಶಕ್ಕೆ
Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು
MUST WATCH
ಹೊಸ ಸೇರ್ಪಡೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್ಗೆ ಕ್ಲೀನ್ಚಿಟ್
Protest: ಕಾಶ್ಮೀರ ಚರ್ಚೆ: ಆಕ್ಸ್ಫರ್ಡ್ನಲ್ಲಿ ಭಾರತೀಯರ ಪ್ರತಿಭಟನೆ
Chennai: ಲಾಟರಿ ಕಿಂಗ್ ಮಾರ್ಟಿನ್ನ 8.8 ಕೋಟಿ ರೂ. ಇ.ಡಿ. ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.