ಒಂದೇ ಬೆಡ್ ರೂಂನಲ್ಲಿ ಬಾಬಾ ಮತ್ತು ಹನಿಪ್ರೀತ್ ಮಲಗುತ್ತಿದ್ದರು!
Team Udayavani, Sep 22, 2017, 4:44 PM IST
ನವದೆಹಲಿ:ಹನಿಪ್ರೀತ್ ಇನ್ಸಾನ್ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ರಾಮ್ ರಹೀಂ ಸಿಂಗ್ ನ ದತ್ತು ಪುತ್ರಿ ಅಲ್ಲ. ಕಾನೂನು ಪ್ರಕಾರ ಹನಿಪ್ರೀತ್ ಅವಳನ್ನು ದತ್ತು ಪಡೆದುಕೊಂಡಿಲ್ಲ ಎಂದು ಹನಿಪ್ರೀತ್ ಮಾಜಿ ಪತಿ ವಿಶ್ವಾಸ್ ಗುಪ್ತಾ ಬಹಿರಂಗಪಡಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಗುಪ್ತಾ, ಹನಿಪ್ರೀತ್ ಬಾಬಾನ ದತ್ತುಪುತ್ರಿಯೇ ಅಲ್ಲ, ಇದೆಲ್ಲಾ ಸಾರ್ವಜನಿಕರ ಕಣ್ಣಿಗೆ ಮಣ್ಣೆರಚುವ ಬಾಬಾನ ನಾಟಕವಾಗಿತ್ತು ಎಂದು ಆರೋಪಿಸಿದ್ದಾರೆ.
ನಾನು ಹಾಗೂ ನನ್ನ ಕುಟುಂಬ ಡೇರಾ ಬಾಬಾನಿಗೆ ತುಂಬಾ ನಿಕಟವಾಗಿತ್ತು. ಹೀಗಾಗಿ 1999ರಲ್ಲಿ ನಾನು ಹನಿಪ್ರೀತ್ ಜತೆ ವಿವಾಹವಾಗಿದ್ದೆ. ನಾನು ಅವಳನ್ನು ನೋಡದೆಯೇ ಮದುವೆ ಆಗಿದ್ದೆ. ಗುರ್ಮಿತ್ ನನ್ನ ಮಗ ಎಂಬಂತೆ ಉಪಚರಿಸುತ್ತಿದ್ದ. ಆದರೆ ಡೇರಾ ಪೂರ್ಣಪ್ರಮಾಣದಲ್ಲಿ ಬಾಬಾನ ನಿಯಂತ್ರಣದಲ್ಲಿಯೇ ಇರುತ್ತಿತ್ತು ಎಂದು ಹೇಳಿದರು.
ಅಷ್ಟೇ ಅಲ್ಲ ಡೇರಾದೊಳಗಿನ ಗುಹೆಯಲ್ಲಿ ಬಿಗ್ ಬಾಸ್ ರೀತಿಯಲ್ಲಿ ದೊಡ್ಡ ಮಟ್ಟದ ಗೇಮ್ ಅನ್ನು ನಡೆಸುತ್ತಿದ್ದ, ಅಲ್ಲಿ ನಾವು 6 ಮಂದಿ (ಗಂಡ -ಹೆಂಡತಿ) ಸುಮಾರು 28 ದಿನಗಳ ಕಾಲ ಕಳೆಯಬೇಕಾಗಿತ್ತು. ಈ ಗೇಮ್ ನಲ್ಲಿ ಸೋತವರು ಬಾಬಾನ ಜತೆ ಗುಹೆಯಲ್ಲಿ ಕಾಲ ಕಳೆಯಬೇಕಾಗಿತ್ತು. ಹಾಗಾಗಿ ಹನಿಪ್ರೀತ್ ಬೇಕಂತಲೇ ಗೇಮ್ ನಲ್ಲಿ ಸೋಲುತ್ತಿದ್ದಳು.
ಬಾಬಾ ಮತ್ತು ಹನಿಪ್ರೀತ್ ಅಪ್ಪ, ಮಗಳಂತೆ ಇರಲಿಲ್ಲ, ಅವರು ಗಂಡ ಹೆಂಡತಿ ರೀತಿ ಇದ್ದರು. ಒಂದೇ ಬೆಡ್ ನಲ್ಲಿ ರಾಮ್ ರಹೀಂ ಮತ್ತು ಹನಿಪ್ರೀತ್ ಮಲಗುತ್ತಿದ್ದರು ಎಂದು ವಿಶ್ವಾಸ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.