ಉಗ್ರರ ನಿಗ್ರಹದಲ್ಲಿ ಸಹಕಾರದ ಆಶಾವಾದ
Team Udayavani, Aug 5, 2017, 9:45 AM IST
ಚೀನ ಅಡ್ಡಗಾಲಿಗೆ ಭಾರತದ ತೀವ್ರ ಅಸಮಾಧಾನ
ಹೊಸದಿಲ್ಲಿ: ಪಾಕಿಸ್ಥಾನ ಮೂಲದ ಉಗ್ರ ಸಂಘಟನೆ, ಜೈಶ್ ಎ ಮೊಹಮ್ಮದ್‌ನ ಮುಖ್ಯಸ್ಥ ಮಸೂದ್ ಅಜರ್‌ನನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಭಾರತದ ಯತ್ನಕ್ಕೆ ಚೀನ ಮತ್ತೆ ಅಡ್ಡಗಾಲು ಹಾಕಿದ ಬೆನ್ನಲ್ಲೇ ಭಾರತ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಮಸೂದ್ ಅಜರ್ ಭಾರತದ ವಿರುದ್ಧ ಭಯೋತ್ಪಾದನೆ ಚಟುವಟಿಕೆಗಳನ್ನು ನಡೆಸುತ್ತಿದ್ದಾನೆ ಎಂಬುದು ಗೊತ್ತಿರುವ ವಿಚಾರವೇ. ಈ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಭಯೋತ್ಪಾದನೆ ನಿಗ್ರಹಕ್ಕೆ ದೇಶಗಳು ಸಹಕಾರ ನೀಡುತ್ತವೆ ಎಂಬ ಆಶಾವಾದವಷ್ಟೇ ನಮ್ಮದಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಖಾತೆ ವಕ್ತಾರ ಗೋಪಾಲ್ ಬಗ್ಲೆ ಹೇಳಿದ್ದಾರೆ.
ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆ ಈಗಾಗಲೇ ನಿಷೇಧಿತ ಭಯೋತ್ಪಾದಕ ಸಂಘಟನೆ ಪಟ್ಟಿಯಲ್ಲಿದ್ದು, ಅಜರ್‌ನನ್ನು ಜಾಗತಿಕ ಉಗ್ರನೆಂದು ಘೋಷಿಸುವುದಕ್ಕೆ ಪಾಕ್‌ನ ಪರಮಾಪ್ತ ಗೆಳೆಯ, ಭದ್ರತಾ ಮಂಡಳಿ ಖಾಯಂ ಸದಸ್ಯ ರಾಷ್ಟ್ರ ಚೀನ ಮಾತ್ರ ವಿಶ್ವಸಂಸ್ಥೆಯಲ್ಲಿ ತನ್ನ ವಿಟೋ ಹಕ್ಕು ಬಳಸಿ ತಡೆಯೊಡ್ಡುತ್ತಿದೆ. ಆ.2ರಂದು ಚೀನ ಈ ಹಿಂದೆ ನೀಡಿದ್ದ ತಡೆಯ ಅವಧಿ ಮುಕ್ತಾಯಗೊಂಡಿದ್ದು, ಮತ್ತೆ ಅಡ್ಡಗಾಲು ಹಾಕಿತ್ತು. ಇದರೊಂದಿಗೆ ಡೋಕ್ಲಾಂ ವಿಚಾರದಲ್ಲಿ ಚೀನದೊಂದಿಗೆ ಮಾತುಕತೆ ಮುಂದುವರಿದಿದ್ದು, ಭೂತಾನ್ ಜೊತೆ ಸಹಕಾರ ನೀಡುತ್ತಿದ್ದೇವೆ ಎಂದು ಬಗ್ಲೆ ಹೇಳಿದ್ದಾರೆ.
ಅರುಣಾಚಲ ಪ್ರದೇಶ ನಮ್ಮದು ಎನ್ನುವುದಕ್ಕೆ ಅರ್ಥವೇ ಇಲ್ಲ
ಅರುಣಾಚಲ ಪ್ರದೇಶ ನಮ್ಮದು ಎಂದು ಚೀನ ಹೇಳಿಕೊಳ್ಳುವುದಕ್ಕೆ ಏನೂ ಅರ್ಥವಿಲ್ಲ ಅದರಿಂದ ಏನೂ ಪ್ರಯೋಜನವಿಲ್ಲ. ಅದು ಕೋಳಿಯ ಪಕ್ಕೆಲುಬಿನಂತೆ. ದೇಶಕ್ಕೆ ಅದು ಆಸ್ತಿಯಾಗಲಾರದು ಎಂದು ಚೀನದ ವ್ಯೂಹಾತ್ಮಕ ತಜ್ಞ ವಾಂಗ್ ತಾವೋ ಹೇಳಿದ್ದಾರೆ. ಚೀನ ದಕ್ಷಿಣ ಟಿಬೆಟ್ ಎಂದು ಅರುಣಾಚಲ ಪ್ರದೇಶವನ್ನು ಹೇಳುತ್ತಿದ್ದು, ಟಿಬೆಟ್‌ನ ಭಾಗ, ಭಾರತ ಅತಿಕ್ರಮಿಸಿದೆ ಎನ್ನುತ್ತಿದೆ. ಆದರೆ ಇದರಿಂದ ಪ್ರಯೋಜನವಾಗಲಾರದು ಎಂದಿದ್ದಾರೆ.
ಡೋಕ್ಲಾಂ ವಿಚಾರದಲ್ಲಿ ಸಂಯಮಕ್ಕೂ ಕೊನೆಯಿದೆ!
ಡೋಕ್ಲಾಂನಲ್ಲಿ ಚೀನ ಭೂಭಾಗವನ್ನು ಭಾರತ ಅತಿಕ್ರಮಿಸಿಕೊಂಡಿದ್ದರೂ, ನಾವು ಅತ್ಯಂತ ಸಂಯಮ ವಹಿಸಿದ್ದೇವೆ. ಆದರೂ ಅದಕ್ಕೊಂದು ಕೊನೆಯಿದೆ ಎಂದು ಚೀನ ರಕ್ಷಣಾ ಇಲಾಖೆ ವಿತಂಡ ಹೇಳಿಕೆಗಳನ್ನು ಮುಂದುವರಿಸಿದೆ. ಡೋಕ್ಲಾಂ ವಿವಾದ ಉದ್ಭವವಾದ ಬಳಿಕ ನಾವು ವಿದೇಶಾಂಗ ಇಲಾಖೆ ಮೂಲಕ ಸಮಸ್ಯೆ ಪರಿಹಾರಕ್ಕೆ ಯತ್ನಿಸಿದ್ದೇವೆ. ಪ್ರಾದೇಶಿಕ ಶಾಂತಿಯನ್ನು ಗಮನದಲ್ಲಿರಿಸಿ ಚೀನ ಸಶಸ್ತ್ರ ಪಡೆಗಳು ಅತೀವ ಸಂಯಮ ವಹಿಸಿದೆ ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.