ಕಾಂಗ್ರೆಸ್ ಅಧ್ಯಕ್ಷನಾಗುವ ಭರವಸೆ ಇದೆ: ನಾಮಪತ್ರ ಸಲ್ಲಿಸಿ ಮಲ್ಲಿಕಾರ್ಜುನ ಖರ್ಗೆ
ನಾನು ಪಕ್ಷದಲ್ಲಿ ಬದಲಾವಣೆ ತಂದು ವಿಭಿನ್ನ ರೀತಿಯಲ್ಲಿ ಮುನ್ನಡೆಸುತ್ತೇನೆ ಎಂದ ತರೂರ್
Team Udayavani, Sep 30, 2022, 3:00 PM IST
ನವದೆಹಲಿ : ಕಾಂಗ್ರೆಸ್ ಅಧ್ಯಕ್ಷ ಹುದ್ದೆಯ ಚುನಾವಣೆ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಹಿರಿಯ ನಾಯಕ ಮತ್ತು ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ”ಇಂದು ನನ್ನ ಬೆಂಬಲಕ್ಕೆ ಬಂದ ಎಲ್ಲಾ ನಾಯಕರು, ಕಾರ್ಯಕರ್ತರು, ಪ್ರತಿನಿಧಿಗಳು ಮತ್ತು ಸಚಿವರು ಬಂದು ನನ್ನನ್ನು ಪ್ರೋತ್ಸಾಹಿಸಿದರು, ಅವರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅಕ್ಟೋಬರ್ 17 ರಂದು ಫಲಿತಾಂಶಗಳು ಏನೆಂದು ನಾವು ನೋಡುತ್ತೇವೆ. ನಾನು ಗೆಲ್ಲುವ ಭರವಸೆ ಇದೆ” ಎಂದರು.
ಇದನ್ನೂ ಓದಿ : ಉತ್ತರಪ್ರದೇಶ:ಕಚೇರಿಗೆ ಹಾಜರಾಗದೇ 6 ತಿಂಗಳಿಂದ ಸಂಬಳ ಪಡೆಯುತ್ತಿದ್ದ ಮಹಿಳಾ ಅಧಿಕಾರಿ ಅಮಾನತು
”ನಾನು ಬಾಲ್ಯದಿಂದಲೂ ಕಾಂಗ್ರೆಸ್ ಸಿದ್ಧಾಂತದೊಂದಿಗೆ ಸಂಪರ್ಕ ಹೊಂದಿದ್ದೇನೆ, ನಾನು 8, 9 ನೇ ತರಗತಿಯಲ್ಲಿದ್ದಾಗ ಗಾಂಧಿ, ನೆಹರು ಸಿದ್ಧಾಂತದ ಪ್ರಚಾರ ಮಾಡುತ್ತಿದ್ದೆ” ಎಂದರು.
ಖರ್ಗೆ ಅವರ ಹೆಸರನ್ನು ಒಟ್ಟು 30 ಕಾಂಗ್ರೆಸ್ ನಾಯಕರು ಪ್ರಸ್ತಾಪಿಸಿದ್ದಾರೆ. ಜಿ-23 ಗುಂಪಿನ ನಾಯಕ ಮನೀಶ್ ತಿವಾರಿ ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ಖರ್ಗೆ ಅವರಿಗೆ ಬೆಂಬಲ ನೀಡಿದ್ದಾರೆ.
ಖರ್ಗೆ ಪಕ್ಷದ ಭೀಷ್ಮ: ತರೂರ್ ಪ್ರತಿಕ್ರಿಯೆ
”ನಾವು ಶತ್ರುಗಳಲ್ಲ, ಪ್ರತಿಸ್ಪರ್ಧಿಗಳಲ್ಲ, ನಾವು ಸಹೋದ್ಯೋಗಿಗಳು ಮತ್ತು ಪಕ್ಷವು ಮುಂದುವರಿಯುವುದನ್ನು ನೋಡಲು ನಮಗೆ ಆಸಕ್ತಿ ಇದೆ. ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ಪಕ್ಷದ ‘ಭೀಷ್ಮ ಪಿತಾಮಹ’. ಪಕ್ಷದ ಕಾರ್ಯಕರ್ತರು ಹೇಗೆ ಮುಂದುವರಿಯಬೇಕು ಎಂಬುದನ್ನು ನಿರ್ಧರಿಸಲಿ. ಖರ್ಗೆ, ದಿಗ್ವಿಜಯ ಸಿಂಗ್, ತ್ರಿಪಾಠಿ ಬಗ್ಗೆ ನಾನು ನಕಾರಾತ್ಮಕವಾಗಿ ಏನನ್ನೂ ಹೇಳುವುದಿಲ್ಲ” ಎಂದು ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಿರುವ ಶಶಿ ತರೂರ್ ಪ್ರತಿಕ್ರಿಯೆ ನೀಡಿದ್ದಾರೆ.
ಗಾಂಧಿ ಕುಟುಂಬ ತಟಸ್ಥ
”ಪಕ್ಷಕ್ಕೆ ಅಧಿಕೃತ ಅಭ್ಯರ್ಥಿ ಇಲ್ಲ, ಗಾಂಧಿ ಕುಟುಂಬ ಈ ರೇಸ್‌ನಲ್ಲಿ ತಟಸ್ಥವಾಗಿರುತ್ತದೆ ಮತ್ತು ಸಾಧ್ಯವಾದಷ್ಟು ಅಭ್ಯರ್ಥಿಗಳನ್ನು ಅವರು ಸ್ವಾಗತಿಸುತ್ತಾರೆ ಎಂದು ಕಾಂಗ್ರೆಸ್ ಅಧ್ಯಕ್ಷರು ನನಗೆ ಭರವಸೆ ನೀಡಿದರು. ಆ ಉತ್ಸಾಹದಲ್ಲಿ ನಾನು ನನ್ನ ಉಮೇದುವಾರಿಕೆಯನ್ನು ಮುಂದಿಟ್ಟಿದ್ದೇನೆ. ಇದು ಯಾರನ್ನೂ ಅಗೌರವಿಸಲು ಅಲ್ಲ. ನಮ್ಮದು ಸೌಹಾರ್ದ ಸ್ಪರ್ಧೆ” ಎಂದು ಶಶಿ ತರೂರ್ ಹೇಳಿದ್ದಾರೆ.
”ಯಥಾಸ್ಥಿತಿಯನ್ನು ಮುಂದುವರಿಸಲು ಬಯಸುವವರು ನನಗೆ ಮತ ಹಾಕಲು ಒಲವು ತೋರುವುದಿಲ್ಲ. ಏಕೆಂದರೆ ನಾನು ಬದಲಾವಣೆ, ವಿಭಿನ್ನ ವಿಧಾನ ಮತ್ತು ಪಕ್ಷವನ್ನು ವಿಭಿನ್ನ ರೀತಿಯಲ್ಲಿ ಮುನ್ನಡೆಸುವ ದೃಷ್ಟಿಕೋನವನ್ನು ಪ್ರತಿನಿಧಿಸುತ್ತೇನೆ ಏಕೆಂದರೆ ಕೆಲವು ವರ್ಷಗಳಿಂದ ನಾವು ಹಿನ್ನಡೆ ಅನುಭವಿಸುತ್ತಿದ್ದೇವೆ” ಎಂದೂ ತರೂರ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಡಿ. 26: ಶಬರಿಮಲೆಯಲ್ಲಿ ಮಂಡಲ ಪೂಜೆ
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.