Horrific! ಲಾಕ್ ಆಗಿದ್ದ ಕಾರಿನಲ್ಲಿ ಅವಳಿ ಸಹೋದರಿಯರ ದಾರುಣ ಸಾವು
Team Udayavani, Jun 15, 2017, 4:37 PM IST
ಗುರ್ಗಾಂವ್ : ಅತ್ಯಂತ ಹೃದಯ ವಿದ್ರಾವಕ ಹಾಗೂ ಭರಿಸಲಾಗದ ನಷ್ಟದ ದುರಂತದಲ್ಲಿ ಐದರ ಹರೆಯದ ಅವಳಿ ಜವಳಿ ಸಹೋದರಿಯರು ಎರಡು ತಾಸುಗಳಿಗೂ ಅಧಿಕ ಕಾಲ, ಲಾಕ್ ಆಗಿದ್ದ ಬಿಸಿಯೇರಿದ ಕಾರಿನೊಳಗೆ ಸಿಲುಕಿ ದಾರಣವಾಗಿ ಮೃತಪಟ್ಟಿದ್ದಾರೆ.
ತಮ್ಮ ಅಜ್ಜ-ಅಜ್ಜಿಯೊಂದಿಗೆ ರಜಾ ದಿನಗಳನ್ನು ಕಳೆಯಲು ಜಮಾಲ್‌ಪುರ ಗ್ರಾಮಕ್ಕೆ ಈ ಅವಳಿ ಸಹೋದರಿಯರು ಬಂದಿದ್ದರು; ನಿನ್ನೆ ಬುಧವಾರ ಈ ದುರ್ಘಟನೆ ನಡೆಯಿತು.
ಲಾಕ್ ಆಗಿದ್ದ ಬಿಸಿಯೇರಿದ್ದ ಕಾರಿನೊಳಗೆ ಸುಮಾರು ಎರಡು ತಾಸುಗಳ ಸಿಲುಕಿ, ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಹರ್ಷಾ ಮತ್ತು ಹರ್ಷಿತಾ ಎಂಬ ಹೆಸರಿನ ಈ ಅವಳಿ ಸಹೋದರಿಯರನ್ನು ಖಾಸಗಿ ಆಸ್ಪತ್ರೆಗೆ ಒಯ್ಯಲಾಯಿತಾದರೂ ಅಲ್ಲಿನ ವೈದ್ಯರು “ಬಾಲಕಿಯರು ಅದಾಗಲೇ ಮೃತಪಟ್ಟಿದ್ದಾರೆ’ ಎಂದು ಘೋಷಿಸಿದರು.
ಕಾರಿನೊಳಗೆ ಸಿಲುಕಿಕೊಂಡಿದ್ದ ಈ ಬಾಲಕಿಯರು ಹೊರ ಬರಲು ಕಾರಿನ ಬಾಗಿಲನ್ನು ತೆರೆಯುವ ಪ್ರಯತ್ನವನ್ನು ಮಾಡಿದ್ದರೆಂಬುದು ಅಲ್ಲಿನ ಲಕ್ಷಣಗಳಿಂದ ಕಂಡುಬರುತ್ತದೆ ಎಂದು ಎನ್ ಡಿ ಟಿ ವಿ ವರದಿ ಮಾಡಿದೆ.
ಈ ನತದೃಷ್ಟ ಬಾಲಕಿಯರ ತಂದೆ ಸೇನೆಯಲ್ಲಿದ್ದು ಮೀರತ್‌ನಲ್ಲಿ ಕರ್ತವ್ಯಕ್ಕೆ ನಿಯೋಜಿತರಾಗಿದ್ದಾರೆ. ನಿನ್ನೆ ಬುಧವಾರವೇ ಈ ಬಾಲಕಿಯರು ತಮ್ಮ ಹೆತ್ತವರೊಂದಿಗೆ ನಗರಕ್ಕೆ ಮರಳುವವರಿದ್ದರು.
ಕಾರಿನ ಲಾಕ್ ದೋಷಪೂರ್ಣವಾಗಿತ್ತು ಮತ್ತು ಲಿವರ್ ಕೆಟ್ಟುಹೋಗಿದ್ದುದರಿಂದ ಅದರ ಕಿಟಿಕಿ ಗಾಜನ್ನು ಮೇಲೆ-ಕೆಳಗೆ ಸರಿಸಲಾಗುತ್ತಿರಲಿಲ್ಲ. ಸಂಜೆ ಸುಮಾರು 4 ಗಂಟೆಯ ಹೊತ್ತಿಗೆ ಈ ನತದೃಷ್ಟ ಬಾಲಕಿಯರು ಕಾರಿನೊಳಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದುದು ಪತ್ತೆಯಾಗಿತ್ತು. ಇದಕ್ಕೆ ಮೊದಲು ಮನೆಯವರು ಬಾಲಕಿಯರಿಗಾಗಿ ಹುಡುಕಾಟ ನಡೆಸುತ್ತಿದ್ದರು.
ದುಃಖತಪ್ಪ ಬಾಲಕಿಯರ ತಂದೆ ಗೋವಿಂದ ಸಿಂಗ್ ಅವರು ತಮ್ಮ ಹೃದಯದಾಳದ ನೋವನ್ನು ಹೀಗೆ ತೋಡಿಕೊಂಡಿದ್ದರು : ನನ್ನ ಈ ಅವಳಿ ಹೆಣ್ಣು ಮಕ್ಕಳು ಹುಟ್ಟಿದಾಗ ನಮ್ಮ ಇಡಿಯ ಕುಟುಂಬದವರು ಆನಂದತುಂದಿಲರಾಗಿದ್ದರು. ಈ ಮಕ್ಕಳನ್ನು ನಾನು ಮೀರತ್‌ನ ಸೆಂಟ್ರಲ್ ಸ್ಕೂಲ್ ಗೆ ಸೇರಿಸಿದೆ. ಆಟ ಪಾಠಗಳಲ್ಲಿ ತುಂಬಾ ಚುರುಕಾಗಿದ್ದ ಈ ಹುಡುಗಿಯರುಬಗ್ಗೆ ಎಲ್ಲರಿಗೂ ಭಾರೀ ಭರವಸೆ ಇತ್ತು. ಈಗ ಎಲ್ಲವೂ ಮುಗಿದ ಹೋದ ವಿಷಯವಾಗಿದೆ’.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
HMP: ಮತ್ತಿಬ್ಬರು ಮಕ್ಕಳಲ್ಲಿ ಎಚ್‌ಎಂಪಿ ವೈರಸ್: ದೇಶದಲ್ಲಿ 7ಕ್ಕೇರಿದ ಕೇಸ್
Assam: ಕಲ್ಲಿದ್ದಲು ಗಣಿ ಒಳಗೆ ಪ್ರವಾಹ: 3 ಸಾವು, 6 ಕಾರ್ಮಿಕರು ನಾಪತ್ತೆ!
Life threat: ಸಲ್ಮಾನ್ ಮನೆ ಬಾಲ್ಕನಿಗೆ ಬುಲೆಟ್‌ಪ್ರೂಫ್ ಗಾಜು
GDP: ಈ ವರ್ಷ ಶೇ.6.4ರಷ್ಟು ಜಿಡಿಪಿ ಪ್ರಗತಿ ನಿರೀಕ್ಷೆ: 4 ವರ್ಷಗಳ ಕನಿಷ್ಠ
Car Crash: ಕಾರು ರೇಸ್ ತರಬೇತಿ ವೇಳೆ ನಟ ಅಜಿತ್ ಕುಮಾರ್ ಕಾರು ಅಪಘಾತ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Forest Department: ಇದ್ದಲ್ಲಿಯೇ ಅರಣ್ಯ ಅಪರಾಧಗಳ ದಾಖಲು: “ಗರುಡಾಕ್ಷಿ’ಗೆ ಚಾಲನೆ
Commission: 60 ಪರ್ಸೆಂಟ್ ಕಮಿಷನ್: ಎಚ್‌ಡಿಕೆ ವಿರುದ್ಧ ಮುಗಿಬಿದ್ದ ಆಡಳಿತ ಪಕ್ಷ
illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್ ಕಚೇರಿ ಮೇಲೆ ಇ.ಡಿ. ದಾಳಿ
Waqf Report: ಅಮಿತ್ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್ ರಿಜಿಜು ಮೂಲಕ ಸಲ್ಲಿಕೆ
Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.