ದಕ್ಷಿಣ ಭಾರತ ಹೊರತು ಪಡಿಸಿ ಉಳಿದೆಡೆ ಬಿಸಿಲ ಬೇಗೆ ಇನ್ನಷ್ಟು ಏರಿಕೆ ಸಾಧ್ಯತೆ : ಐ ಎಮ್ ಡಿ
ಈ ಬಾರಿ ಬೇಸಿಗೆ ಮತ್ತಷ್ಟು ಗರಮ್ : ಐ ಎಮ್ ಡಿ
Team Udayavani, Mar 2, 2021, 2:10 PM IST
ಸಾಂದರ್ಭಿಕ ಚಿತ್ರ
ನವ ದೆಹಲಿ : ಉತ್ತರ, ಈಶಾನ್ಯ, ಪೂರ್ವ ಮತ್ತು ಪಶ್ಚಿಮ ಭಾರತದ ಕೆಲವು ಭಾಗಗಳಲ್ಲಿ ಸೋಮವಾರದಿಂದ ಮೇ ತಿಂಗಳವರೆಗೆ ದಿನದ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಬೇಸಿಗೆಯ ಮುನ್ಸೂಚನೆಯಲ್ಲಿ(summer forecast ) ಭಾರತ ಹವಾಮಾನ ಇಲಾಖೆ (ಐ ಎಮ್ ಡಿ) ತಿಳಿಸಿದೆ.
ಮುಂಬರುವ ಬೇಸಿಗೆಯ ಕಾಲದಲ್ಲಿ(ಮಾರ್ಚ್ ನಿಂದ ಮೇ ತನಕ ) ದಿನದ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗಲಿದೆ, ಭಾರತದ ದಕ್ಷಿಣ ಹಾಗೂ ವಾಯುವ್ಯ ಭಾಗಗಳಲ್ಲಿ ಹಾಗೂ ಪೂರ್ವ ಹಾಗೂ ಪಶ್ಚಿಮದ ಕೆಲವು ಭಾಗಗಳಲ್ಲಿ ಬೆಸಿಗೆಯ ದಿನದ ತಾಪಮಾನ ಅತಿರೇಕಕ್ಕೆ ತಿರುಗುವ ಸಾಧ್ಯತೆಯಿದೆ, ಹಾಗೂ ಇದು ಕರಾವಳಿ ಭಾಗಕ್ಕೂ ಪರಿಣಾಮ ಬೀಳುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಓದಿ : ಶಿವಮೊಗ್ಗ: ಜಿ.ಪಂ ಚುನಾವಣೆ ಒಳಗೆ ‘ಒಂದು ದೃಢ ನಿರ್ಧಾರ’ ಮಾಡುತ್ತೇನೆ: ಮಧು ಬಂಗಾರಪ್ಪ
ಛತ್ತೀಸ್ ಗಡ್, ಒಡಿಶಾ, ಗುಜರಾತ್, ಕರಾವಳಿ ಮಹಾರಾಷ್ಟ್ರ, ಗೋವಾ, ಕರಾವಳಿ ಆಂಧ್ರ ಪ್ರದೇಶ ಭಾಗಗಳಲ್ಲಿ ಸಾಮನ್ಯ ತಾಪಮಾನಕ್ಕಿಂತ ಹೆಚ್ಚಿನ ತಾಪಮಾನ ಏರುವ ಸಂಭಾವ್ಯತೆ ಜಾಸ್ತಿ ಇದೆ ಎಂದು ಕೂಡ ಐ ಎಮ್ ಡಿ ಹೇಳಿದೆ.
ಇನ್ನು, ಇಂಡೋ ಗಂಗಾ ಬಯಲು ಪ್ರದೇಶಗಳಾದ ಪಂಜಾಬ್, ಹರಿಯಾಣ, ಚಂಡಿಗಢ್, ದೆಹಲಿ, ಪೂರ್ವ ಹಾಗೂ ಪಶ್ಚಿಮ ಉತ್ತರ ಪ್ರದೇಶ, ಛತ್ತೀಸ್ ಗಡ್ ಜಾರ್ಖಾಂಡ್ ನಿಂದ ಒಡಿಶಾದ ತನಕವೂ ದಾಖಲೆ ಪ್ರಮಾಣದಲ್ಲಿ ತಾಪಮಾನ ಹೆಚ್ಚಳವಾಗುವ ಸಾಧ್ಯತೆಯಿದ್ದು, 0.5 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚು ತಾಪಮಾನ ಏರಿಕೆಯಾಗಬಹುದೆಂದು ಅಂದಾಜಿಸಲಾಗಿದೆ ಎಂದು ಐ ಎಮ್ ಡಿ ನಿರ್ದೇಶಕ ಮೃತ್ಯುಂಜಯ ಮೊಹಪಾತ್ರ ವಿವರಿಸಿದ್ದಾರೆ.
ಛತ್ತಿಸ್ ಗಡ್ ಮತ್ತು ಒಡಿಶಾ ಭಾಗಗಳಲ್ಲಿ ಸಾಮಾನ್ಯ ತಾಪಮಾನ ಶೇಕಡಾ 75% ಕ್ಕಿಂತ ಹೆಚ್ಚಾಗುವ ಸಂಭವನೀಯತೆ ಇದೆ, ಈ ಭಾಗಗಳಲ್ಲಿ ಪಾದರಸದ ಪ್ರಮಾಣ ಸಾಮಾನ್ಯಕ್ಕಿಂತ ಹೆಚ್ಚಿರುವ ಕಾರಣದಿಂದಾಗಿ ಈ ಎರಡು ರಾಜ್ಯಗಳಲ್ಲಿ ತಾಪಮಾನವು ಕ್ರಮವಾಗಿ 0.86 ಡಿಗ್ರಿ ಸೆಲ್ಸಿಯಸ್ ಮತ್ತು 0.66 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.
ಹರಿಯಾಣ, ಚಂಡಿಗಢ್ ಹಾಗೂ ದೆಹಲಿ ಭಾಗಗಳಲ್ಲಿ ಸಾಮಾನ್ಯ ತಾಪಮಾನಕ್ಕಿಂತ 60% ಕ್ಕಿಂತ ಹೆಚ್ಚಾಗುವ ಸಾಧ್ಯತೆಯಿದೆ. ಈ ಎರಡೂ ರಾಜ್ಯಗಳಲ್ಲಿ 0.5 ಡಿಗ್ರಿ ಸೆಲ್ಸಿಯಸ್ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಓದಿ : ಅನಿವಾಸಿ ಭಾರತೀಯರಲ್ಲಿ ಮೋದಿ ಬಗ್ಗೆ ಮಿಶ್ರ ಅಭಿಪ್ರಾಯ : ಅಧ್ಯಯನ ವರದಿ
ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ಸ್ವಲ್ಪ ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸ್ವಲ್ಪ ಮಟ್ಟಿಗೆ ಸುಧಾರಣೆಯಾಗುವ ಸಾಧ್ಯತೆಯಿದೆ. “ದಕ್ಷಿಣ ಪರ್ಯಾಯ ದ್ವೀಪ ಮತ್ತು ಪಕ್ಕದ ಮಧ್ಯ ಭಾರತದ ಹೆಚ್ಚಿನ ಉಪ ವಿಭಾಗಗಳಲ್ಲಿ ಸಾಮಾನ್ಯ ಗರಿಷ್ಠ ತಾಪಮಾನಕ್ಕಿಂತ ಹೆಚ್ಚಾಗಿರುತ್ತದೆ” ಎಂದು ಬೇಸಿಗೆಯ ಮುನ್ಸೂಚನೆ (summer forecast) ತಿಳಿಸಿದೆ.
ಹಿಮಾಲಯ, ಈಶಾನ್ಯ ಭಾರತ, ಮಧ್ಯ ಭಾರತದ ಪಶ್ಚಿಮ ಭಾಗ ಮತ್ತು ಪರ್ಯಾಯ ದ್ವೀಪ ಭಾರತದ ದಕ್ಷಿಣ ಭಾಗದ ಬೆಟ್ಟಗಳ ಉದ್ದಕ್ಕೂ ಉತ್ತರ ಭಾರತದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯ ಕಾಲೋಚಿತ ಕನಿಷ್ಠ (ರಾತ್ರಿ)ತಾಪಮಾನಕ್ಕಿಂತ ಹೆಚ್ಚಾಗಿರುತ್ತದೆ ಎಂದು ಹೇಳಿದೆ.
“ಆದಾಗ್ಯೂ, ಪೂರ್ವ ಭಾಗದ ಹೆಚ್ಚಿನ ಉಪವಿಭಾಗಗಳು ಮತ್ತು ದೇಶದ ಉತ್ತರ ಭಾಗದ ಕೆಲವು ಉಪ ವಿಭಾಗಗಳಿಗಿಂತ ಸಾಮಾನ್ಯ ತಾಪಮಾನಕ್ಕಿಂತ ಕಡಿಮೆ ತಾಪಮಾನವು ಕಂಡುಬರುತ್ತದೆ” ಎಂದು ಐ ಎಮ್ ಡಿ ಮಾಹಿತಿ ನೀಡಿದೆ.
ಎರಡನೇ ಬೇಸಿಗೆ ಮುನ್ಸೂಚನಾ ವರದಿಯನ್ನು, ಅಂದರೇ ಏಪ್ರಿಲ್ ಹಾಗೂ ಜೂನ್ ನಡುವಿನ ತಾಪಮಾನದ ಬಗೆಗಿನ ಮಾಹಿತಿಯನ್ನು ಏಪ್ರಿಲ್ ನಲ್ಲಿ ನೀಡಲಿದೆ ಎಂದು ಐ ಎಮ್ ಡಿ ತಿಳಿಸಿದೆ.
ಕಳೆದ ಜನವರಿಯಲ್ಲಿ ಕಳೆದ 62 ವರ್ಷಗಳ ಹಿಂದಿನ ಇತಿಹಾಸದಲ್ಲೆ ಮೊಟ್ಟ ಮೊದಲ ಬಾರಿಗೆ ದೇಶದಲ್ಲಿ ಕನಿಷ್ಠ ತಾಪಮಾನ ಕಂಡಿದೆ ಎಂದು ಐ ಎಮ್ ಡಿ ಮಾಹಿತಿ ನೀಡಿದೆ.
ಓದಿ : ಈ ಅಂಗಡಿಯಲ್ಲಿ ಒಂದು ಕಪ್ ಟೀ ಬೆಲೆ ಬರೋಬ್ಬರಿ 1000ರೂ..!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.