Tax: ಹೆಚ್ಚು ವೇತನ ಇರುವವರಿಗೆ ಮನೆ ಭತ್ಯೆ ತೆರಿಗೆ ಇಳಿಕೆ
Team Udayavani, Aug 20, 2023, 12:07 AM IST
ಹೊಸದಿಲ್ಲಿ: ನಿಯಮಿತವಾಗಿ ವೇತನ ಪಡೆಯುವ ಉದ್ಯೋಗಿಗಳಿಗೆ ಆದಾಯ ತೆರಿಗೆ ಇಲಾಖೆ ಸಿಹಿ ಸುದ್ದಿ ನೀಡಿದೆ. ಸಂಸ್ಥೆಯ ವತಿಯಿಂದಲೇ ಬಾಡಿಗೆ ರಹಿತ ವಸತಿ ವ್ಯವಸ್ಥೆ ಪಡೆಯುವವರಿಗೆ ಮುಂದಿನ ದಿನಗಳಲ್ಲಿ ಪ್ರತಿ ತಿಂಗಳು ಹೆಚ್ಚಿನ ಮೊತ್ತ ಸಿಗುವಂತಾಗಲಿದೆ. ಅದಕ್ಕೆ ಸಂಬಂಧಿಸಿದ ಮೌಲ್ಯಮಾಪನ ನಿಯಮಗಳನ್ನು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಬದಲಾವಣೆ ಮಾಡಿದೆ. ಸೆ.1ರಿಂದ ಅನ್ವಯವಾಗುವಂತೆ ಜಾರಿಗೆ ಬರಲಿದೆ.
ಕೇಂದ್ರ ಅಥವಾ ರಾಜ್ಯ ಸರ್ಕಾರಿ ಉದ್ಯೋಗಿಗಳಿಗಿಂತ ಹೊರತಾಗಿರುವ ಸಂಸ್ಥೆಗಳಲ್ಲಿ ಕೆಲಸದಲ್ಲಿ ಇರುವವರಿಗೆ ನೀಡುವ ಯಾವುದೇ ಪೀಠೊಪಕರಣ ಮತ್ತು ಇತರ ವ್ಯವಸ್ಥೆಗಳು ಇಲ್ಲದ ಮನೆಗೆ ಉದ್ಯೋಗಿಗಳ ವೇತನದ ಶೇ.10ನ್ನು ಮೀಸಲಾಗಿ ಇರಿಸಲಾಗಿದೆ. ಸದ್ಯ ಅದರ ಮಿತಿ ಶೇ.15 ಇದೆ. 2011ರ ಜನಗಣತಿಯ ಪ್ರಕಾರ 40 ಲಕ್ಷ ಜನಸಂಖ್ಯೆ ಇರುವ ನಗರಗಳಿಗೆ ಈ ನಿಯಮ ಅನ್ವಯವಾಗಲಿದೆ. 15 ಲಕ್ಷದಿಂದ 40 ಲಕ್ಷವರೆಗೆ ಜನಸಂಖ್ಯೆ ಇರುವ ನಗರಗಳಲ್ಲಿ ಉದ್ಯೋಗದಲ್ಲಿ ಇರುವವರಿಗೆ ವೇತನದ ಶೇ.7.5ನ್ನು ಈಗ ಮೀಸಲಾಗಿ ಇರಿಸಲಾಗುತ್ತದೆ (ಸದ್ಯದ ಮಿತಿ ಶೇ.10) ಎಂದು ಪರಿಷ್ಕರಿಸಿದ ನಿಯಮಗಳಲ್ಲಿ ಪ್ರಸ್ತಾಪಿಸಲಾಗಿದೆ. ಹೊಸ ನಿಯಮಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಎಕೆಎಂ ಗ್ಲೋಬಲ್ ಟ್ಯಾಕ್ಸ್ ಪಾರ್ಟ್‌ನರ್ ಅಮಿತ್ ಮಾಹೇಶ್ವರಿ “ಸಂಸ್ಥೆಗಳ ವತಿಯಿಂದ ವಸತಿ ವ್ಯವಸ್ಥೆ ಪಡೆಯುವವರಿಗೆ ಮತ್ತು ಹೆಚ್ಚಿನ ವೇತನ ಪಡೆಯುವವರಿಗೆ ಹೊಸ ನಿಯಮದಿಂದ ಉಳಿತಾಯವಾಗಲಿದೆ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
ವಕ್ಫ್ ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.