ವಿಮಾ ಏಜೆಂಟ್‌ಗಳಾಗಿ 25 ವರ್ಷಗಳ ಹಿಂದಿನ ಕೊಲೆ ಕೇಸ್ ಭೇದಿಸಿದ ಪೊಲೀಸರು

ಹಠಕ್ಕೆ ಬಿದ್ದ ಪೊಲೀಸರು... ಇನ್ನೇನು ಆಗಲಿಕ್ಕಿಲ್ಲ ಎಂದಿದ್ದ ಹಂತಕನಿಗೆ ಶಾಕ್ !

Team Udayavani, Sep 18, 2022, 6:42 PM IST

1-dsdsd

ನವದೆಹಲಿ: 1997 ರಲ್ಲಿ ನಡೆದ ಹತ್ಯೆ ಪ್ರಕರಣದ ಆರೋಪಿಯನ್ನು 25 ವರ್ಷಗಳ ಬಳಿಕ ಹಠಕ್ಕೆ ಬಿದ್ದ ದೆಹಲಿ ಪೊಲೀಸರು ಬಂಧಿಸಿದ ಸಿನಿಮೀಯ ಘಟನೆ ನಡೆದಿದೆ.

ದೆಹಲಿಯ ತುಘಲಕಾಬಾದ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಕಿಶನ್ ಲಾಲ್ 1997 ರ ಫೆಬ್ರವರಿ ರಾತ್ರಿ ಚೂರಿಯಿಂದ ಇರಿದು ಹತ್ಯೆಗೀಡಾಗಿದ್ದರು, ಪೊಲೀಸರಿಗೆ ಹಂತಕನನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಸಾವಿನ ಪ್ರಕರಣದಲ್ಲಿ ತನಿಖೆ ಪ್ರಾರಂಭವಾಗಿ ಪಟಿಯಾಲ ಹೌಸ್ ನ್ಯಾಯಾಲಯವು ಶಂಕಿತ ಆರೋಪಿ ಲಾಲ್ ಅವರ ನೆರೆಹೊರೆಯಲ್ಲಿ ವಾಸಿಸುತ್ತಿದ್ದ ದಿನಗೂಲಿ ಕಾರ್ಮಿಕ ರಾಮುನನ್ನು ಪತ್ತೆ ಹಚ್ಚಲಾಗುದಿಲ್ಲಎಂದು ಘೋಷಿಸಿತ್ತು.

ಇದನ್ನೂ ಓದಿ: ಯು.ಪಿ ಸರ್ಕಾರ ಮದರಸಾಗಳನ್ನು ಸರ್ವೆ ಮಾಡಬಹುದು..: ಜಮೀಯತ್ ಉಲಮಾ-ಎ-ಹಿಂದ್ ಅಧ್ಯಕ್ಷ

ಹಳೆಯ ಪ್ರಕರಣಗಳನ್ನು ನಿರ್ವಹಿಸಲು ತರಬೇತಿ ಪಡೆದ ದೆಹಲಿ ಪೋಲೀಸ್‌ನ ಉತ್ತರ ಜಿಲ್ಲೆಯ ತಂಡವು ಆಗಸ್ಟ್ 2021 ರಲ್ಲಿ ಪ್ರಕರಣವನ್ನು ಮರು ತನಿಖೆಗೆ ಕೈ ಹಾಕುವವರೆಗೂ ಡಿಜಿಟಲ್ ಪೂರ್ವ ಯುಗದಿಂದ ಕೇಸ್ ನ ಫೈಲ್ ಎರಡು ದಶಕಗಳಿಂದ ಧೂಳು ತಿನ್ನುತ್ತಲೇ ಇತ್ತು.

ಒಂದು ವರ್ಷದ ನಂತರ, ಸುನೀತಾಗೆ ಪೊಲೀಸರಿಂದ ಕರೆ ಬಂದಿತು ಮತ್ತು ತಕ್ಷಣವೇ ಲಕ್ನೋಗೆ ಬರುವಂತೆ ಕೇಳಿಕೊಳ್ಳಲಾಯಿತು. ದೆಹಲಿ ಪೊಲೀಸರು 50 ವರ್ಷದ ವ್ಯಕ್ತಿಯನ್ನು ಹಿಡಿದಿದ್ದರು, ಆತ ಆಕೆಯ ಪತಿಯ ಹಂತಕ ಎಂದು ಅವರು ನಂಬಿದ್ದರು. ಶಂಕಿತನ ಗುರುತನ್ನು ಅವಳು ಖಚಿತಪಡಿಸಲು ಅವರು ಬಯಸಿದ್ದರು.

ತನ್ನ ಮಗ ಸನ್ನಿ (24) ಜತೆಯಲ್ಲಿದ್ದ ಸುನೀತಾ ಪ್ರಜ್ಞೆ ತಪ್ಪುವ ಮುನ್ನವೇ ಆ ವ್ಯಕ್ತಿ ರಾಮು ಎಂದು ಪೊಲೀಸರಿಗೆ ಖಚಿತಪಡಿಸಿದ್ದರು. ಅವರು ನ್ಯಾಯ ಪಡೆಯುವ ಎಲ್ಲಾ ಭರವಸೆಗಳನ್ನು ಕಳೆದುಕೊಂಡಿದ್ದರು ಮತ್ತು ಕಳೆದ ವರ್ಷ ಅವರು ಈ ಹಳೆಯ ಪ್ರಕರಣದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದಾಗ ಅವರನ್ನು ಭೇಟಿಯಾಗಲು ಹೋದ ಪೊಲೀಸ್ ತಂಡಕ್ಕೆ ಬಾಗಿಲು ಮುಚ್ಚಿದ್ದರು. ಆದರೆ ಸಾಕಷ್ಟು ಸಮಯ ಕಳೆದುಹೋಗಿದ್ದರಿಂದ ಅವರ ಕಡೆಯಿಂದ ಆ ರೀತಿಯ ಪ್ರತಿಕ್ರಿಯೆ ಬಂದದ್ದು ನಮಗೆ ಅರ್ಥವಾಗಿತ್ತು” ಎಂದು ಉಪ ಪೊಲೀಸ್ ಆಯುಕ್ತ ಸಾಗರ್ ಸಿಂಗ್ ಕಲ್ಸಿ ಪಿಟಿಐಗೆ ತಿಳಿಸಿದ್ದಾರೆ.

ಕಾಲು ಶತಮಾನದ ಹಳೆಯ ಪ್ರಕರಣವನ್ನು ಭೇದಿಸುವುದಕ್ಕಾಗಿ ನಾಲ್ವರು ಸದಸ್ಯರ ತಂಡವನ್ನು ಶ್ಲಾಘಿಸಿದ ಅಧಿಕಾರಿ, ಅದರಲ್ಲಿ ಕೊಲೆಯ ಪ್ರತ್ಯಕ್ಷದರ್ಶಿಗಳಿಲ್ಲ, ಆರೋಪಿಯ ಛಾಯಾಚಿತ್ರಗಳು ಅಥವಾ ಅವನ ಇರುವಿಕೆಯ ಸುಳಿವು ಇರಲಿಲ್ಲ ಎಂದು ತಿಳಿಸಿದ್ದಾರೆ. ಕಿಶನ್ ಲಾಲ್ ಆ ಸಮಯದಲ್ಲಿ ತಮ್ಮ ಮೊದಲ ಮಗುವಿಗೆ ಗರ್ಭಿಣಿಯಾಗಿದ್ದ ಪತ್ನಿ ಸುನೀತಾ ಅವರನ್ನು ಆಗಲಿದ್ದರು.

ತಂಡವು ಸಬ್ ಇನ್ಸ್‌ಪೆಕ್ಟರ್ ಯೋಗೇಂದರ್ ಸಿಂಗ್, ಹೆಡ್-ಕಾನ್ಸ್‌ಟೇಬಲ್‌ಗಳಾದ ಪುನೀತ್ ಮಲಿಕ್ ಮತ್ತು ಓಂಪ್ರಕಾಶ್ ದಾಗರ್ ಅವರು ಇನ್‌ಸ್ಪೆಕ್ಟರ್ ಸರೆಂದರ್ ಸಿಂಗ್ ಅವರ ನೇತೃತ್ವದಲ್ಲಿ ಸಹಾಯಕ ಪೊಲೀಸ್ ಕಮಿಷನರ್ ಧರ್ಮೇಂದರ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಪ್ರಕರಣ ಭೇದಿಸಿದ್ದಾರೆ ಎಂದು ಕಲ್ಸಿ ಹೇಳಿದರು.

“ಇದು ತಂಡಕ್ಕೆ ಬಹುಮಟ್ಟಿಗೆ ದೊಡ್ಡ ಸವಾಲಾಗಿತ್ತು. ಅವರು ಹಲವಾರು ತಿಂಗಳುಗಳವರೆಗೆ ಒಂದು ಗಣನೀಯ ಸುಳಿವನ್ನು ಪಡೆಯಲು ಆಶಿಸುತ್ತಿದ್ದರು. ಈ ಅವಧಿಯಲ್ಲಿ, ತಂಡವು ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ತನಿಖೆಗಾಗಿ ಹಲವಾರು ಸಂದರ್ಭಗಳಲ್ಲಿ ರಹಸ್ಯವಾಗಿ ಹೋಗಿತ್ತು ”ಎಂದು ಡಿಸಿಪಿ ಹೇಳಿದರು.

ತಂಡವು ದೆಹಲಿಯ ಉತ್ತಮ್ ನಗರಕ್ಕೆ ಹೋದಾಗ ಜೀವ ವಿಮಾ ಏಜೆಂಟ್‌ಗಳಂತೆ ಪೋಸ್ ನೀಡಿ, ಅಲ್ಲಿ ಅವರು ಸತ್ತವರ ಸಂಬಂಧಿಕರಿಗೆ ಹಣವನ್ನು ಸಹಾಯ ಮಾಡುವ ನೆಪದಲ್ಲಿ ರಾಮು ಅವರ ಸಂಬಂಧಿಯನ್ನು ಪತ್ತೆಹಚ್ಚಿದ್ದಾರೆ ಎಂದು ಕಲ್ಸಿ ಹೇಳಿದರು.

ರಾಮುವಿನ ಸಂಬಂಧಿಕರನ್ನು ಭೇಟಿಯಾದಾಗ ಅದೇ ನೆಪದಲ್ಲಿ ಉತ್ತರ ಪ್ರದೇಶದ ಫರೂಕಾಬಾದ್ ಜಿಲ್ಲೆಯ ಖಾನ್ಪುರ್ ಗ್ರಾಮವನ್ನು ತಲುಪುವಲ್ಲಿ ತಂಡ ಯಶಸ್ವಿಯಾಗಿದೆ. ಫರೂಕಾಬಾದ್‌ನಲ್ಲಿ ರಾಮು ಅವರ ಮಗ ಆಕಾಶ್‌ಗೆ ಸೇರಿದ ಮೊಬೈಲ್ ಸಂಖ್ಯೆಯನ್ನು ಪೊಲೀಸರು ಆಕಸ್ಮಿಕವಾಗಿ ಪಡೆದರು. ಹೆಚ್ಚಿನ ಪ್ರಯತ್ನಗಳಿಂದ ಪೊಲೀಸ್ ತಂಡವು ಆಕಾಶ್‌ನ ಫೇಸ್‌ಬುಕ್ ಖಾತೆ ಮೂಲಕ ಅವನು ಲಕ್ನೋದ ಕಪುರ್ತಲಾ ಪ್ರದೇಶದಲ್ಲಿ ಪತ್ತೆಯಾಗಿದ್ದಾನೆ ಎಂದು ಅಧಿಕಾರಿ ಹೇಳಿದರು.

ಪೊಲೀಸರು ಆಕಾಶ್ ಅವರನ್ನು ಭೇಟಿಯಾಗಿ ಅವರ ತಂದೆ ರಾಮು ಅವರು ಈಗ ಅಶೋಕ್ ಯಾದವ್ ಹೆಸರಿನಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿದುಕೊಂಡರು. ಆಕಾಶ್ ತಮ್ಮ ತಂದೆಯನ್ನು ಬಹಳ ಸಮಯದಿಂದ ಭೇಟಿಯಾಗಲಿಲ್ಲ ಮತ್ತು ಅವರು ಈಗ ಲಕ್ನೋದ ಜಾಂಕಿಪುರಂ ಪ್ರದೇಶದಲ್ಲಿ ಜೀವನಕ್ಕಾಗಿ ಇ-ರಿಕ್ಷಾವನ್ನು ನಡೆಸುತ್ತಿದ್ದಾರೆಂದು ಮಾತ್ರ ತಿಳಿದಿದೆ ಎಂದು ತಂಡಕ್ಕೆ ತಿಳಿಸಿದರು.

” ಪ್ರಕರಣವು ಇದ್ದಕ್ಕಿದ್ದಂತೆ ವೇಗವನ್ನು ಪಡೆದುಕೊಂಡಿತು. ಈತನ ಬಗ್ಗೆ ಯಾರೋ ವಿಚಾರಿಸುತ್ತಿರುವ ಮಾಹಿತಿ ರಾಮುವಿಗೆ ತಲುಪುವ ಸಾಧ್ಯತೆಯಿದ್ದು, ಆತ ಮತ್ತೆ ತಲೆಮರೆಸಿಕೊಳ್ಳುವ ಸಾಧ್ಯತೆ ಇದೆ ಎಂದು ಗೌಪ್ಯವಾಗಿದ್ದ ಪೊಲೀಸ್ ತಂಡ ಶಂಕಿಸಿ ಕೊಲೆಗಾರನ ಅನ್ವೇಷಣೆಗೆ ನಿರತವಾದ ತಂಡವು ಇ-ರಿಕ್ಷಾ ಕಂಪನಿಯ ಏಜೆಂಟ್‌ಗಳ ಸೋಗಿನಲ್ಲಿ ಜಾಂಕಿಪುರಂ ಪ್ರದೇಶದಲ್ಲಿ ಹಲವಾರು ಚಾಲಕರನ್ನು ಸಂಪರ್ಕಿಸಿತು. ಅವರು ಕೇಂದ್ರ ಸರ್ಕಾರದ ಅಡಿಯಲ್ಲಿ ಹೊಸ ಇ-ರಿಕ್ಷಾದಲ್ಲಿ ಅವರಿಗೆ ಸಹಾಯಧನವನ್ನು ಒದಗಿಸುವ ನೆಪದಲ್ಲಿ ಅವರೊಂದಿಗೆ ಸಂವಾದ ನಡೆಸಿದರು.

ಸೆಪ್ಟೆಂಬರ್ 14 ರಂದು ರೈಲ್ವೆ ನಿಲ್ದಾಣದ ಬಳಿ ತಂಗಿದ್ದ ಅಶೋಕ್ ಯಾದವ್ (ರಾಮು) ಬಳಿಗೆ ಹೋಗಿ, ಆತನನ್ನು ವಿಚಾರಣೆಗಾಗಿ ಬಂಧಿಸಲಾಗಿದೆ. ಆತ ಮೊದಲು ರಾಮು ಎಂದು ನಿರಾಕರಿಸಿದ ಎಂದು ಅಧಿಕಾರಿ ಹೇಳಿದರು.

ರಾಮು ಗುರುತನ್ನು ಖಚಿತಪಡಿಸಿಕೊಳ್ಳಲು ಫರೂಕಾಬಾದ್‌ನಲ್ಲಿರುವ ಅವರ ಸಂಬಂಧಿಕರನ್ನು ಸಂಪರ್ಕಿಸಿದ ಪೊಲೀಸ್ ತಂಡವು ದೆಹಲಿಯಿಂದ ಸುನೀತಾ ಅವರನ್ನು ಕರೆಸಿಕೊಂಡು ಆ ವ್ಯಕ್ತಿ ನಿಜವಾಗಿಯೂ ತನ್ನ ಗಂಡನ ಹಂತಕನೇ ಎಂದು ಖಚಿತಪಡಿಸಿಕೊಂಡರು.

ಅಂತಿಮವಾಗಿ ಅವರ ಗುರುತು ದೃಢಪಡಿಸಿದಾಗ, ರಾಮು (50) ಫೆಬ್ರವರಿ 1997 ರಲ್ಲಿ ಒಂದು ಸಣ್ಣ ಗುಂಪಿನಲ್ಲಿರುವ ಚಿಟ್-ಫಂಡ್ ಮಾದರಿಯ ಹಣಕ್ಕಾಗಿ ಲಾಲ್‌ನ ಹತ್ಯೆಯನ್ನು ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ.

ಟಾಪ್ ನ್ಯೂಸ್

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

1-sidd-nirmala

NABARD ಸಾಲ ಮಿತಿ ಹೆಚ್ಚಿಸಿ: ನಿರ್ಮಲಾಗೆ ಸಿಎಂ ಮನವಿ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾCourt: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!

adani (2)

Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ

Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್‌ ಬಗ್ಗೆ ಸುಪ್ರೀಂ ಹೇಳಿದ್ದೇನು?

Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್‌ ಬಗ್ಗೆ ಸುಪ್ರೀಂ ಹೇಳಿದ್ದೇನು?

Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ

Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ

Viral Video: ನೀರಿನಿಂದ ಜಿಗಿದು ಹಾವನ್ನೇ ಬೇಟೆಯಾಡಲು ಹೋದ ಮೀನು… ಕೊನೆಗೆ ಆಗಿದ್ದೇನು?

Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Hejamadi: ವಿಷದ ಹಾವು ಕಚ್ಚಿ ವ್ಯಕ್ತಿ ಸಾವು

Hejamadi: ವಿಷದ ಹಾವು ಕಚ್ಚಿ ವ್ಯಕ್ತಿ ಸಾವು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Shirva: ಮಲಗಿದಲ್ಲೇ ವ್ಯಕ್ತಿ ಸಾವು; ಪ್ರಕರಣ ದಾಖಲು

Shirva: ಮಲಗಿದಲ್ಲೇ ವ್ಯಕ್ತಿ ಸಾ*ವು; ಪ್ರಕರಣ ದಾಖಲು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.