Revanth Reddy; ತೆಲಂಗಾಣದಲ್ಲಿ ರೇವಂತ್ ರೆಡ್ಡಿ ಕಾಂಗ್ರೆಸ್ ನಸೀಬು ಬದಲಿಸಿದ್ದು ಹೇಗೆ?
Team Udayavani, Dec 3, 2023, 2:30 PM IST
ಹೊಸದಿಲ್ಲಿ: 2014ರಲ್ಲಿ ರಚನೆಯಾದ ತೆಲಂಗಾಣ ರಾಜ್ಯ ಇದೀಗ ಮೊದಲ ಬಾರಿಗೆ ಕೆ.ಚಂದ್ರಶೇಖರ್ ರಾವ್ ಹೊರತಾದ ಮುಖ್ಯಮಂತ್ರಿಯನ್ನು ನೋಡುತ್ತಿದೆ. ಸತತ ಎರಡು ಅವಧಿಯಲ್ಲಿ ಅಧಿಕಾರ ಅನುಭವಿಸಿದ ಬಿಆರ್ ಎಸ್ (ಆಗ ಟಿಆರ್ ಎಸ್) ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸೋಲನುಭವಿಸಿದೆ. ಕಳೆದ ಚುನಾವಣೆಯಲ್ಲಿ (2018) ಕೇವಲ 19 ಸ್ಥಾನ ಗಳಿಸಿದ್ದ ಕಾಂಗ್ರೆಸ್ ಈ ಬಾರಿ ಅದ್ಭುತ ಪ್ರದರ್ಶನ ನೀಡಿ ಅಧಿಕಾರ ಪಡೆಯುವತ್ತ ಮುನ್ನುಗ್ಗುತ್ತಿದೆ.
ತೆಲಂಗಾಣ ಕಾಂಗ್ರೆಸ್ ನ ಈ ಸಾಧನೆಯಲ್ಲಿ ಪ್ರಮುಖ ಪಾತ್ರ ವಹಿಸಿದವರು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ. ಅವರ ಕಾರ್ಯದ ಶೈಲಿಯು ಅವರಿಗೆ ಪಕ್ಷದಲ್ಲಿ ಹಲವಾರು ವಿರೋಧಿಗಳನ್ನು ಗಳಿಸಿತ್ತು, ಆದರೆ 54 ವರ್ಷ ರೇವಂತ್ ದಕ್ಷಿಣದ ರಾಜ್ಯದಲ್ಲಿ ಪಕ್ಷವನ್ನು ಗೆಲುನೆಡೆ ಮುನ್ನಡೆಸಿದ್ದಾರೆ. ಇದಕ್ಕಿಂತ ಹೆಚ್ಚಾಗಿ, ರೇವಂತ್ ರೆಡ್ಡಿ ಬಿಆರ್‌ಎಸ್ ಭದ್ರಕೋಟೆ ಕಾಮರೆಡ್ಡಿಯಲ್ಲಿ ಮುಖ್ಯಮಂತ್ರಿ ಮತ್ತು ಭಾರತ ರಾಷ್ಟ್ರ ಸಮಿತಿ ಮುಖ್ಯಸ್ಥ ಕೆ ಚಂದ್ರಶೇಖರ ರಾವ್ ವಿರುದ್ಧ ಮುನ್ನಡೆ ಸಾಧಿಸಿದ್ದಾರೆ.
ತೆಲುಗು ದೇಶಂ ಪಕ್ಷದಿಂದ ಎರಡು ಬಾರಿ ಶಾಸಕರಾಗಿರುವ ರೇವಂತ್ ಸದ್ಯ ಮಲ್ಕಾಜ್ ಗಿರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದ. ಅವರು 2017ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದ್ದರು.
ಜುಲೈ 2021 ರಲ್ಲಿ ತೆಲಂಗಾಣ ಕಾಂಗ್ರೆಸ್ ಮುಖ್ಯಸ್ಥರಾಗಿ ನೇಮಕಗೊಂಡ ನಂತರ, ರೆಡ್ಡಿ ಅವರು ಹೆಚ್ಚು ತಳಮಟ್ಟದ ಕಾರ್ಯಗಳಲ್ಲಿ ಕಾಣುತ್ತಿದ್ದರು. ಆಡಳಿತಾರೂಢ ಬಿಆರ್ ಎಸ್ ಸರ್ಕಾರದ ವಿರುದ್ಧ ಹಲವಾರು ಸಮಸ್ಯೆಗಳ ಕುರಿತು ಬೀದಿ ಪ್ರತಿಭಟನೆಗಳನ್ನು ನಡೆಸಿದರು.
ಇದನ್ನೂ ಓದಿ:3 ರಾಜ್ಯಗಳಲ್ಲಿ BJP ಭರ್ಜರಿ ಜಯಭೇರಿ, ಕಾಂಗ್ರೆಸ್ ಗೆ ಮುಖಭಂಗ:ತೆಲಂಗಾಣದಲ್ಲಿ ಕೈಗೆ ಗದ್ದುಗೆ
ಸ್ಥಳೀಯ ನಾಯಕರ ಗುರುತಿಸುವಿಕೆ ಮತ್ತು ಪ್ರಾಮುಖ್ಯತೆಯು ಫಲ ನೀಡಿದ ಕರ್ನಾಟಕದ ಪಾಠ ಕಲಿತ ಕಾಂಗ್ರೆಸ್ ನಾಯಕತ್ವವು ಪಕ್ಷದೊಳಗಿನ ಅವರ ಪ್ರತಿಸ್ಪರ್ಧಿಗಳ ಪ್ರತಿಭಟನೆಯ ಹೊರತಾಗಿಯೂ ರೇವಂತ್ ರೆಡ್ಡಿ ಅವರನ್ನು ಬೆಂಬಲಿಸಿತು. ರೆಡ್ಡಿಯನ್ನು ದೊಡ್ಡ ವೇದಿಕೆಯ ನಾಯಕ ಎಂದು ಬಿಂಬಿಸಲಾಯಿತು, ಬೃಹತ್ ರ್ಯಾಲಿಗಳಲ್ಲಿ ಮತ್ತು ಪಕ್ಷದ ರಾಷ್ಟ್ರೀಯ ನಾಯಕರ ಜೊತೆಗೆ ನಿರಂತರವಾಗಿ ರೆಡ್ಡಿ ವೇದಿಕೆ ಹಂಚಿಕೊಂಡರು.
ಕೆಸಿಆರ್ ವಿರುದ್ಧದ ಸ್ಪರ್ಧಿಯಾಗಿ ರೆಡ್ಡಿಯನ್ನು ಹೈಕಮಾಂಡ್ ಆಯ್ಕೆ ಮಾಡಿರುವುದು ರಾಜ್ಯ ಚುನಾವಣೆಯ ಪೂರ್ವದಲ್ಲಿ ಅವರ ಇಮೇಜನ್ನು ವರ್ಧಿಸಿತು. ರೆಡ್ಡಿ ಅವರು ಸ್ಪರ್ಧಿಸಿದ ಎರಡನೇ ಸ್ಥಾನವಾದ ಕೊಡಂಗಲ್ ನಲ್ಲಿಯೂ ಅವರು ಜಯ ಸಾಧಿಸಿದ್ದಾರೆ.
ಮತ ಎಣಿಕೆಗೂ ಮುನ್ನ ಮಾತನಾಡಿದ ರೇವಂತ್ ರೆಡ್ಡಿ, ಕಾಂಗ್ರೆಸ್ ರಾಜ್ಯದಲ್ಲಿ ಭಾರಿ ಬಹುಮತದ ಗೆಲುವು ಕಾಣಲಿದೆ. ಪಕ್ಷವು 80ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ
Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.