ನ್ಯಾಯಾಲಯದ ಕಟಕಟೆ ಏರಿದ್ದು ಹೇಗೆ?
Team Udayavani, Nov 10, 2019, 6:00 AM IST
ವಿವಾದಕ್ಕೆ ಸಂಬಂಧಿಸಿದಂತೆ ಮೊದಲ ಮೊಕದ್ದಮೆ ದಾಖಲಿಸಿದವರು ಹಿಂದೂ ಮಹಾಸಭಾದ ಉತ್ತರಪ್ರದೇಶದ ಆಗಿನ ಗೊಂಡಾ (ಈಗ ಬಲರಾಂಪುರ) ಜಿಲ್ಲಾಧ್ಯಕ್ಷ ಗೋಪಾಲಸಿಂಗ್. ಅದಕ್ಕೆ ಕಾರಣವಾದವರು ಪೊಲೀಸರು.
ಹಾಗೆ ನೋಡಿದರೆ ಇಡೀ ಅಯೋಧ್ಯಾ ನಗರವೇ ಸಾವಿರಾರು ದೇವಸ್ಥಾನಗಳ ಆಗರ. ಅವುಗಳ ಬಗ್ಗೆ ಯಾವ ವಿವಾದವೂ ಇಲ್ಲ. ಕೇವಲ 130 ಅಡಿ ಉದ್ದ 90 ಅಡಿ ಅಗಲವಿರುವ ಒಂದು ದೇವಸ್ಥಾನದ ಜಾಗಕ್ಕಾಗಿ ಮಾತ್ರ ವಿವಾದವಿತ್ತು. ಈ ವಿವಾದ ಕೋರ್ಟಿನ ಕಟಕಟೆ ಹತ್ತಿದ್ದು ಹೇಗೆ ಎಂಬುದಕ್ಕೆ ಮೊದಲು ವಿವಾ ದಿತ ಸ್ಥಳ ಹೇಗಿತ್ತು ಎಂಬುದನ್ನು ತಿಳಿದು ಕೊಂಡುಬಿಡೋಣ. ಅಲ್ಲೊಂದು ಗೋಡೆ ಇತ್ತು. ಅದರೊಳಗೊಂದು ಲೋಹದ ಬಾಗಿಲು. ಅದಕ್ಕೆ ಯಾವಾಗಲೂ ಬೀಗ. ಆ ಗೋಡೆಯ ಪಶ್ಚಿಮದಲ್ಲಿದ್ದದ್ದು ಒಳಾಂಗಣ. ಪೂರ್ವದಲ್ಲಿ ದ್ದದ್ದು ಹೊರಾಂಗಣ. ಒಳಾಂಗಣದಲ್ಲಿ ಮೂರು ಗುಂಬಜ್‌ಗಳಿದ್ದ ಕಟ್ಟಡ. ಮುಸ್ಲಿಮರು ಬಾಬ್ರಿ ಮಸೀದಿ ಎಂದು ಕರೆಯುತ್ತಿದ್ದುದು ಅದನ್ನೇ.
ಆದರೆ ಹಿಂದೂಗಳ ಪ್ರಕಾರ ಆ ಇಡೀ ಜಾಗ ರಾಮ ಜನ್ಮಭೂಮಿ. ಅದು ಮಸೀದಿಯೇ ಆಗಿ ದ್ದರೆ ಅಲ್ಲಿ ಪ್ರಾರ್ಥನೆ ಮಾಡಲು ಅಗತ್ಯವಿದ್ದ ಮಿನಾರ್ ಎಲ್ಲಿದೆ, ಕೈಕಾಲು ತೊಳೆದುಕೊಳ್ಳಲು ಇರಬೇಕಾಗಿದ್ದ ನೀರಿನ ವ್ಯವಸ್ಥೆ ಎಲ್ಲಿದೆ ಎಂಬುದು ಹಿಂದೂಗಳ ಪ್ರಶ್ನೆಯಾಗಿತ್ತು. ಹೊರಾಂಗಣದಲ್ಲಿ 20 ಅಡಿ ಉದ್ದ, 15 ಅಡಿ ಅಗಲ ಮತ್ತು 5 ಅಡಿ ಎತ್ತರದ ದೇವಸ್ಥಾನ ರೂಪದ ಮುಂಗಟ್ಟೆ ಇತ್ತು. ಅದನ್ನು ಜನ “ರಾಮ ಚಬೂತರಾ’ ಅಂತ ಕರೆಯುತ್ತಿದ್ದರು. ಅಲ್ಲಿ ರಾಮನ ಸಣ್ಣ ವಿಗ್ರಹವೂ ಇತ್ತು. ಹಿಂದೂಗಳು ಅದರ ಪೂಜೆ ಮಾಡುತ್ತಿದ್ದರು.
ವಿಗ್ರಹವನ್ನು ಗಾಳಿ, ಮಳೆ, ಬಿಸಿಲಿನಿಂದ ರಕ್ಷಿಸಲು ತಾತ್ಕಾಲಿಕ ಛಾವಣಿಯನ್ನೂ ನಿರ್ಮಿಸಲಾಗಿತ್ತು. ಅಕºರನ ಕಾಲದಿಂದಲೂ ಇದು ನಡೆದುಕೊಂಡು ಬರುತ್ತಿದೆ ಎಂಬುದು ಪ್ರತೀತಿ. ಇದರ ಬಗ್ಗೆ ಯಾವುದೇ ವಿವಾದ ಇಲ್ಲ. ವಿವಾದ ಇದ್ದದ್ದು ಆ 3 ಗುಂಬಜ್‌ಗಳಿದ್ದ ಕಟ್ಟಡದ ಬಗ್ಗೆ. ಅದು ಮೊದಲು ದೇವಸ್ಥಾನವಾಗಿತ್ತು, 1528ರಲ್ಲಿ ಬಾಬರ್‌ನ ಆದೇಶದ ಮೇರೆಗೆ ಆತನ ಸೇನಾಪತಿ ಮೀರ್‌ಬಾಕಿ ಆ ದೇವಸ್ಥಾನವನ್ನು ಕೆಡವಿ ಅದರ ಅವಶೇಷಗಳಿಂದಲೇ ಮಸೀದಿಯನ್ನು ಹೋಲುವ ಈ ಕಟ್ಟಡ ನಿರ್ಮಿಸಿದ.
ಆದರೆ ಆಗಲೂ ಹಿಂದೂಗಳ ಆಕ್ರೋಶ ಎಷ್ಟಿತ್ತೆಂದರೆ ಕೈಕಾಲು ತೊಳೆಯುವ ಸ್ಥಳ (ವಜೂ) ನಿರ್ಮಿಸಲು ಆತನಿಗೆ ಸಾಧ್ಯವಾಗಲಿಲ್ಲ ಎಂಬುದು ಹಿಂದೂಗಳ ವಾದ. ಆಗಿನಿಂದಲೂ ಆ ಜಾಗವನ್ನು ವಶಕ್ಕೆ ತೆಗೆದುಕೊಳ್ಳಲು ಹಿಂದೂಗಳು ಹೋರಾಡುತ್ತಲೇ ಇದ್ದರು. 1947ರಲ್ಲಿ ದೇಶ ಸ್ವತಂತ್ರವಾಗುತ್ತಿದ್ದಂತೆ ಅಯೋಧ್ಯೆಯ ಸಾಧುಗಳು ಮತ್ತು ಜನ ಮತ್ತೆ ಜಾಗೃತರಾದರು. 1949ರ ಡಿಸೆಂಬರ್ 22ರಂದು ಅರ್ಧರಾತ್ರಿಯಲ್ಲಿ 50- 60ಯುವಕರು ಮತ್ತು ಸಾಧುಗಳು ವಿವಾದಿತ ಕಟ್ಟಡ ಮತ್ತು ರಾಮಚಬೂತರದ ಮಧ್ಯೆ ಇದ್ದ ಗೋಡೆ ಭಗ್ನಗೊಳಿಸಿದರು.
ಮಧ್ಯದ ಗುಂಬಜ್‌ನ ಕೆಳಗೆ ರಾಮನ ವಿಗ್ರಹ ಇಟ್ಟು ಕೀರ್ತನೆ ಶುರು ಮಾಡಿದರು. ಬೆಳಗಾಗುವ ಮೊದಲೇ ಎಚ್ಚೆತ್ತುಕೊಂಡ ಉತ್ತರಪ್ರದೇಶ ಪೊಲೀಸರು ಏನೋ ಅನಾ ಹುತ ನಡೆ ದು ಹೋ ಯಿತು ಎಂಬಂತೆ ಭಯಭೀತರಾದರು. 23ರ ಬೆಳಗ್ಗೆ ಮಾತಾಪ್ರಸಾದ್ ಎಂಬ ಪೊಲೀಸ್ ಪೇದೆಯೊಬ್ಬನಿಂದ ಮೌಖೀಕ ಹೇಳಿಕೆ ಪಡೆದು ಎಫ್‌ಐಆರ್ ದಾಖಲಿಸಿದರು. ಯಾವುದೇ ಮುಸ್ಲಿಂ ವ್ಯಕ್ತಿ ದೂರು ನೀಡಲಿಲ್ಲ ಎಂಬುದು ಗಮನಾರ್ಹ.
ಆಗ ಅಲ್ಲಿ ಜಿಲ್ಲಾಧಿಕಾರಿಯಾಗಿದ್ದವರು ಕೇರಳ ಮೂಲದ ಕೆ.ಕೆ. ನಾಯರ್. ಆರು ದಿನಗಳ ಬಳಿಕ ಅಯೋಧ್ಯಾ- ಫೈಜಾಬಾದ್‌ನ ಹೆಚ್ಚುವರಿ ಸಿಟಿ ಮ್ಯಾಜಿಸ್ಟ್ರೇಟ್ ಮಾರ್ಕಂಡೇಯ ಸಿಂಹ ಎಂಬವರು ಸ್ವಯಂ ಪ್ರೇರಣೆಯಿಂದ (ಸುವೋಮೋಟೊ) ವಿಚಾರಣೆ ಕೈಗೆತ್ತಿಕೊಂಡು ವಿವಾದಿತ ಭೂಮಿಯ ಒಳಾಂಗಣವನ್ನು ವಶಕ್ಕೆ ತೆಗೆದುಕೊಂಡರು. ತಮ್ಮ ಆದೇಶದಲ್ಲಿ ಅವರು ಯಾರ ಹೆಸರನ್ನೂ ನಮೂದಿಸಲಿಲ್ಲ. ಆದರೆ ಈ ಭೂಮಿಯ ಮಾಲೀಕತ್ವ ಮತ್ತು ಪೂಜೆಯ ವಿಷಯ ವಿವಾದಗ್ರಸ್ತವಾದದ್ದು ಎಂಬುದನ್ನು ಮೊದಲ ಬಾರಿಗೆ ಕಾನೂನಾತ್ಮಕವಾಗಿ ದಾಖಲಿಸಿದರು.
ಈ ವಿಷಯ ಅತ್ಯಂತ ಸೂಕ್ಷ್ಮವಾಗಿದ್ದು, 3 ಗುಂಬಜ್‌ಗಳಿದ್ದ ಕಟ್ಟಡದ ಮಾಲೀಕತ್ವದ ಕುರಿತು ಎರಡೂ ಕಡೆಯವರು ಸಾಕ್ಷ್ಯಾಧಾರ ಒದಗಿಸಬೇಕು ಎಂದು ಆದೇಶಿಸಿದರು. ವಿವಾದ ಇತ್ಯರ್ಥವಾಗುವವರೆಗೆ ಕಟ್ಟಡದ ದೇಖರೇಖೀಯನ್ನು ಸ್ಥಳೀಯ ನಗರಪಾಲಿಕೆಯ ಅಧ್ಯಕರಾಗಿದ್ದ ಪ್ರಿಯದತ್ತ ರಾಮ್ ಅವರ ವಶಕ್ಕೆ ಒಪ್ಪಿಸಿದರಲ್ಲದೆ ಸ್ಥಳವನ್ನು ಹೇಗೆ ಬಳಸಿಕೊಳ್ಳಬೇಕೆಂಬ ಬಗ್ಗೆ ಅವರೇ ಯೋಜನೆ ತಯಾರಿಸಿಕೊಡಬೇಕೆಂದು ನಿರ್ದೇಶನ ನೀಡಿದರು. ಮಧ್ಯದ ಗುಂಬ ಜ್‌ನ ಕೆಳಗೆ ಇಟ್ಟಿದ್ದ ರಾಮನ ವಿಗ್ರಹಕ್ಕೆ ಪ್ರತಿದಿನ ಪೂಜೆ ಅರ್ಚನೆ ಮಾಡುವ ಕುರಿತು ನಗರಪಾಲಿಕೆ ಅಧ್ಯಕ್ಷ ನೀಡಿದ ಲಿಖೀತ ಪ್ರಸ್ತಾವನೆಯನ್ನು ಮ್ಯಾಜಿಸ್ಟ್ರೇಟ್ ಒಪ್ಪಿ ಅನುಮತಿ ನೀಡಿದರು. ಅಂದಿನಿಂದ ಅಲ್ಲಿ ನಿರಂತರ ಪೂಜೆ ನಡೆದಿದೆ ಎಂಬುದು ಹಿಂದೂಗಳ ವಾದವಾಗಿತ್ತು.
ಮೊದಲ ಮೊಕದ್ದಮೆ: ವಿವಾದಕ್ಕೆ ಸಂಬಂಧಿಸಿದಂತೆ ಮೊದಲ ಮೊಕದ್ದಮೆ ದಾಖಲಿಸಿದವರು ಹಿಂದೂ ಮಹಾಸಭಾದ ಉತ್ತರಪ್ರದೇಶದ ಗೊಂಡಾ (ಈಗ ಬಲರಾಂಪುರ) ಜಿಲ್ಲಾಧ್ಯಕ್ಷ ಗೋಪಾಲ ಸಿಂಗ್. ಅದಕ್ಕೆ ಕಾರಣವಾದವರು ಪೊಲೀಸರು. 1950ರ ಜ. 14ರಂದು ವಿವಾದಿತ ಸ್ಥಳಕ್ಕೆ ಪೂಜೆಗೆ ತೆರಳುತ್ತಿದ್ದ ಗೋಪಾಲ ಸಿಂಗ್ ಮತ್ತು ಇತರ ಕೆಲವರನ್ನು ಪೊಲೀಸರು ತಡೆದರು. ಆ ಹಿನ್ನೆಲೆಯಲ್ಲಿ ಅವರು ಜ. 16ರಂದು ಫೈಜಾಬಾದ್ ನ್ಯಾಯಾಲ ಯದ ಮೊರೆ ಹೋದರು.
“ರಾಮನ ವಿಗ್ರಹದ ಪೂಜೆ ಮತ್ತು ದರ್ಶನಕ್ಕೆ ಹೋಗುವವರಿಗೆ ತಡೆ ಒಡ್ಡಬಾರದು, ಯಾವುದೇ ಕಾರಣಕ್ಕೂ ವಿಗ್ರಹ ಸ್ಥಳಾಂತರಿಸಬಾರದು ಎಂದು ಸಂಬಂಧ ಪಟ್ಟವರಿಗೆ ನಿರ್ದೇಶನ ನೀಡ ಬೇ ಕು’ ಎಂಬು ದು ಅವರ ಕೋರಿಕೆಯಾಗಿತ್ತು. ಎಲ್ಲ ಪ್ರತಿವಾದಿಗಳಿಗೆ ನ್ಯಾಯಾಲಯ ನೋಟಿಸ್ ನೀಡಿತಲ್ಲದೇ ಅದೇ ದಿನ ಗೋಪಾಲಸಿಂಗ್ ಪರ ಮಧ್ಯಂತರ ತೀರ್ಪು ನೀಡಿತು. ಭಕ್ತರು ಮತ್ತೆ ನಿರಾತಂಕವಾಗಿ ರಾಮನ ಪೂಜೆಗೆ ಹೋಗತೊಡಗಿದರು.
1951ರ ಮಾರ್ಚ್ 3ರಂದು ನ್ಯಾಯಾಧೀಶರ ಅಂತಿಮ ತೀರ್ಪು ಕೂಡ ಪೂಜೆಯ ಪರವಾಗಿಯೇ ಇತ್ತು. ಕೆಲವು ಮುಸ್ಲಿಮರು ಇದರ ವಿರುದ್ಧ ಅಲಹಾಬಾದ್ ಹೈಕೋರ್ಟ್‌ಗೆ ಹೋದರು. ಮುಖ್ಯ ನ್ಯಾ. ಮುತ್ತಮ್ ಮತ್ತು ನ್ಯಾ. ರಘುವರ್ ದಯಾಳ್ ಅವರಿದ್ದ ನ್ಯಾಯಪೀಠ 1955ರ ಏ. 26ರಂದು ಕೆಳ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿಯಿತು. ಕಟ್ಟಡದ ಒಳಗೆ ಪೂಜೆ ಅರ್ಚನೆ ಅಬಾಧಿತವಾಯಿತು. ಸ್ವಾತಂತ್ರೊತ್ತರ ಭಾರತದಲ್ಲಿ ಅಯೋಧ್ಯೆ ವಿವಾದದ ಕಾನೂನು ಹೋರಾಟ ಆರಂಭವಾಗಿದ್ದು ಹೀಗೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Tragedy: ರೈಲು ಹಳಿ ಮೇಲೆ ಕೂತು PUBG ಆಡುತ್ತಿದ್ದ ಮೂವರು ಯುವಕರ ದೇಹ ಛಿದ್ರ ಛಿದ್ರ…
Fog: ಉತ್ತರ ಭಾರತದಲ್ಲಿ ದಟ್ಟ ಮಂಜು, ಶೂನ್ಯ ಗೋಚರತೆ: ವಿಮಾನ, ರೈಲು ಸಂಚಾರದ ಮೇಲೆ ಪರಿಣಾಮ
Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Bantwala: ನೇತ್ರಾವತಿ ನದಿಯ ಅಂಬಿಗ ನಾಪತ್ತೆ; ಸ್ಥಳೀಯರಿಂದ ಶೋಧ ಕಾರ್ಯ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.