ವಲಸೆ ಹಕ್ಕಿಗಳ ಗುಟ್ಟು ರಟ್ಟು!
Team Udayavani, Jun 25, 2021, 7:10 AM IST
ಹೊಸದಿಲ್ಲಿ: ನಮ್ಮ ದೇಶದಲ್ಲಿ ಸದ್ಯದಲ್ಲೇ ಆಗಮಿಸುವ ಚಳಿಗಾಲದಲ್ಲಿ ರಾಜ್ಯದ ರಂಗನತಿಟ್ಟು ಸೇರಿದಂತೆ ದೇಶದ ಹಲವಾರು ಪಕ್ಷಿಧಾಮಗಳಲ್ಲಿ ವಲಸೆ ಹಕ್ಕಿಗಳ ಕಲರವ ಇಡೀ ಪ್ರಾಂತ್ಯದಲ್ಲೆಲ್ಲಾ ಅನುರಣಿಸುತ್ತದೆ. ದೂರದ ಆಫ್ರಿಕಾ, ಅಮೆರಿಕ ಖಂಡಗಳಿಂದ ಸಾವಿರಾರು ಮೈಲುಗಳ ದೂರ ಕ್ರಮಿಸಿ ಬರುವ ಈ ಹಕ್ಕಿಗಳಿಗೆ ದಾರಿ ತೋರುವುದಾದರೂ ಹೇಗೆ? ಪುನಃ ಹೇಗೆ ಅವು ತಮ್ಮ ನೆಲೆಗಳಿಗೆ ಕರಾರುವಾಕ್ ಆಗಿ ಹಿಂದಿರುಗುತ್ತವೆ? ಮರು ವರ್ಷ, ಪುನಃ ಹೇಗೆ ತಾವು ಹಿಂದೆ ಬಂದಿದ್ದ ಪ್ರದೇಶಗಳಿಗೆ ವಲಸೆ ಬರುತ್ತವೆ? ಎಂಬ ಪ್ರಶ್ನೆಗಳು ಮೂಡುವುದು ಸಹಜ. ಶತಮಾನಗಳಿಂದ ಚಾಲ್ತಿಯಲ್ಲಿರುವ ಇಂಥ ಸೋಜಿಗಗಳಿಗೆ ಆಕ್ಸ್‌ಫರ್ಡ್ ಹಾಗೂ ಓಲ್ಡನ್‌ಬರ್ಗ್ ವಿಶ್ವವಿದ್ಯಾನಿಲಯಗಳ ಪಕ್ಷಿ ತಜ್ಞರು ಉತ್ತರ ಕಂಡುಕೊಂಡಿದ್ದಾರೆ.
ದಿಕ್ಕು ತೋರುವ “ಕ್ರಿಪ್ಟೋಕ್ರೋಮ್ಸ್’: “ನೇಚರ್’ ಎಂಬ ವೈಜ್ಞಾನಿಕ ನಿಯತ ಕಾಲಿಕೆಯಲ್ಲಿ ಪ್ರಕಟವಾಗಿರುವ ಸಂಶೋಧನ ವರದಿಯ ಪ್ರಕಾರ, ಪಕ್ಷಿಗಳ ಕಣ್ಣಿನ ಅಕ್ಷಿಪಟಲದಲ್ಲಿ ಕ್ರಿಪ್ಟೋಕ್ರೋಮ್ಸ್ ಎಂಬ ಪ್ರೋಟೀನ್ ಇದ್ದು, ಅದು ಭೂಮಿಯ ಅಯಸ್ಕಾಂತೀಯ ಧ್ರುವಗಳ ಶಕ್ತಿಯನ್ನು ಅರಿಯಬಲ್ಲವಾಗಿವೆ. ಇದರ ಸಹಾಯದಿಂದ ತಾವಿರುವ ಕಡೆ ತಮಗೆ ಪ್ರತಿಕೂಲ ಹವಾಮಾನ ಬಂದೊದಗುವುದನ್ನು ಪಕ್ಷಿಗಳು ಮೊದಲೇ ಗ್ರಹಿಸಬಲ್ಲವು. ಅದರ ಆಧಾರದ ಮೇಲೆ, ತಾವಿರುವ ಜಾಗವನ್ನು ಯಾವಾಗ ಬಿಡಬೇಕು, ಯಾವ ದಾರಿಯನ್ನು ಆರಿಸಿಕೊಂಡು ಯಾವ ದಿಕ್ಕಿನೆಡೆಗೆ ಹಾರಿ ಎಲ್ಲಿ ಹೋಗಿ ಸೇರಬೇಕು ಎಂಬುದನ್ನೂ ಅವು ಅರಿಯುತ್ತವೆ. ಹಿಂದೆ ತಾವು ಬಂದಿದ್ದ ನೆಲೆಗಳತ್ತ ಮತ್ತೆ ಪ್ರಯಾಣ ಬೆಳೆಸಲು ಕ್ರಿಪ್ಟೋಕ್ರೋಮ್ಸ್ ನೆರವಾಗುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
Maharashtra Election: ಅಘಾಡಿ ಸೋಲಿಗೆ ಉದ್ಧವ್,ಶರದ್ ಕಾರಣ: ಕಾಂಗ್ರೆಸ್
Mann Ki Baat: ಮೈಸೂರಿನ ‘ಅರ್ಲಿ ಬರ್ಡ್’ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ
Amaravati: ತಿರುಪತಿಯಲ್ಲಿ ಮುರಿದಿದ್ದ ರಾಮನ ಬೆರಳು ದುರಸ್ತಿ!
Isro: ಡಿ.20ಕ್ಕೆ ಸ್ಪೇಡೆಕ್ಸ್ ಲಾಂಚ್‌ಗೆ ಸಿದ್ಧತೆ: ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.