ಚಳಿ, ಗಾಳಿಯ ಹೇಗೆ ಎದುರಿಸುತ್ತದೆ ಸೇನೆ?

Team Udayavani, Dec 3, 2020, 6:25 AM IST

ಚಳಿ ಗಾಳಿಯ ಹೇಗೆ ಎದುರಿಸುತ್ತದೆ ಸೇನೆ?

ಚೀನದೊಂದಿಗೆ ಬಿಕ್ಕಟ್ಟು ಮುಂದುವರಿದಿರುವ ಕಾರಣ ಭಾರತೀಯ ಸೇನೆಯು ಸುಮಾರು 50 ಸಾವಿರ ಯೋಧರನ್ನು ಎಲ್‌ಎಸಿಯ ಎತ್ತರದ ಪ್ರದೇಶದಲ್ಲಿ ನಿಯೋಜಿಸುತ್ತಿದೆ. ಡಿಸೆಂಬರ್‌ ತಿಂಗಳಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯ ಪ್ರದೇಶಗಳಲ್ಲಿ ತಾಪಮಾನ -15ರಿಂದ 3 ಡಿಗ್ರಿಯಷ್ಟಿರುತ್ತದೆ ಜನವರಿಯಲ್ಲಂತೂ -40 ಡಿಗ್ರಿ ಸೆಲ್ಸಿಯಸ್‌ ತಲುಪುವುದೂ ಉಂಟು. ಈ ಸವಾಲನ್ನು ಸೇನೆ ಹೇಗೆ ಎದುರಿಸುತ್ತದೆ ಎನ್ನುವ ಮಾಹಿತಿ ಇಲ್ಲಿದೆ…

ಮೂರು ರೀತಿಯ ಸವಾಲು
1962ರಲ್ಲಿ ಪ್ರಕಟವಾದ ಹಿಸ್ಟರಿ ಆಫ್ ದ ಕಾನ್‌ಫ್ಲಿಕ್ಟ್ ವಿತ್‌ ಚೀನ ಪುಸ್ತಕವು, ಲಡಾಖ್‌ನಲ್ಲಿ ವಾತಾವರಣ ಹೇಗಿರುತ್ತದೆ ಎನ್ನುವುದನ್ನು ಬಣ್ಣಿಸುತ್ತದೆ: “”ಮಧ್ಯಾಹ್ನದ ವೇಳೆಗೆ ಜೋರಾಗಿ ಶೀತಗಾಳಿ ಬೀಸಲಾರಂಭಿಸಿ ಮರುದಿನ ಬೆಳಗ್ಗೆಯವರೆಗೂ ಮುಂದುವರಿಯುತ್ತದೆ.

ಎಷ್ಟು ಚಳಿ ಇರುತ್ತದೆಂದರೆ ಬರಿಗೈಯಿಂದ ಲೋಹವನ್ನು ಮುಟ್ಟಿದರೂ ಅಪಾಯ ಎದುರಾಗುತ್ತದೆ. ಬಿಸಿಯಿಂದ ಗಾಯ ಹೇಗಾಗುತ್ತದೋ, ಚಳಿಯಿಂದಲೂ ಅಷ್ಟೇ ಗಾಯವಾಗಬಲ್ಲದು” ಎನ್ನುತ್ತದೆ ಆ ಪುಸ್ತಕ. ಈ ವಿಚಾರವಾಗಿ ನಿವೃತ್ತ ಮೇಜರ್‌ ಜನರಲ್‌ ಎ.ಪಿ ಸಿಂಗ್‌ ಹೇಳುವುದು ಹೀಗೆ: “”ಆ ಎತ್ತರದ ಪ್ರದೇಶಗಳಲ್ಲಿ ಯೋಧರು ಮೂರು ರೀತಿಯ ಸವಾಲು ಎದುರಿಸುತ್ತಾರೆ. ಒಂದು ಅತ್ಯಂತ ಚಳಿ ಹಾಗೂ ವೇಗದ ಗಾಳಿಯಿಂದ. ಎರಡನೆಯದು ಆಮ್ಲಜನಕದ ಕೊರತೆಯಿಂದ ಹಾಗೂ ಮೂರನೆಯದು ಶತ್ರುಗಳಿಂದ”

ಸೂಕ್ತ ತಯಾರಿ
ಎತ್ತರದ ಶೀತಲ ಪ್ರದೇಶಗಳಿಗೆ ನಿಯೋಜಿತವಾಗುವ ಸೈನಿಕರು ಆಮ್ಲಜನಕ, ಚಳಿ, ಗಾಳಿಯ ಸವಾಲಿನ ನಡುವೆಯೇ ಏನಿಲ್ಲವೆಂದರೂ 20-45 ಕೆ.ಜಿ ಭಾರವನ್ನು ಹೊತ್ತು ಸಾಗುತ್ತಾರೆ. ಆ ಕಾರಣಕ್ಕಾಗಿ ಅವರಿಗೆ ವಿಶೇಷ ತರಬೇತಿ ನೀಡಲಾಗುತ್ತದೆ. ಲೇಹ್‌ ಹಾಗೂ ಮುಖ್‌ಪರಿಯಂಥ ಅತಿ ಎತ್ತರದ ಪ್ರದೇಶಗಳಲ್ಲಿ ಆಮ್ಲಜನಕದ ಮಟ್ಟ 25ರಿಂದ 65 ಪ್ರತಿಶತ ಕಡಿಮೆ ಇರುತ್ತದೆ. ಇದನ್ನು ಎದುರಿಸಲು ಸೈನಿಕರಿಗೆ ಮೂರು ಹಂತದ ತರಬೇತಿ ನೀಡಲಾಗುತ್ತದೆ. ಮೊದಲ ಹಂತದಲ್ಲಿ ಆರು ದಿನಗಳವರೆಗೆ 9000-12000 ಅಡಿ ಎತ್ತರದ ಪ್ರದೇಶಗಳಲ್ಲಿ ತರಬೇತಿ ನೀಡಲಾಗುತ್ತದೆ. ಇದರಲ್ಲಿ ಸೈನಿಕರು ಎರಡು ದಿನಗಳ ವಿಶ್ರಾಂತಿಯ ಅನಂತರ, ನಾಲ್ಕು ದಿನಗಳವರೆಗೆ ಚಿಕ್ಕ ಭಾರಹೊತ್ತು ನಡೆಯುವುದು ಹಾಗೂ ಬೆಟ್ಟಗಳನ್ನು ಏರವುದು ಮಾಡುತ್ತಾರೆ. ಎರಡನೇ ಹಂತದ ತರಬೇತಿ 4 ದಿನಗಳವರೆಗೆ 15 ಸಾವಿರ ಅಡಿ ಎತ್ತರದಲ್ಲಿ ನಡೆಯುತ್ತದೆ. ಆಗಲೂ ನಡಿಗೆ, ಭಾರ ಹೊರುವುದು, ಬಂಡೆಗಲ್ಲುಗಳನ್ನು ಏರುವ ತರಬೇತಿ ನೀಡಲಾಗುತ್ತದೆ. ಇವರೆಲ್ಲರ ಜತೆಗೆ ಸಿಯಾಚಿನ್‌ನಂಥ ಪ್ರದೇಶ ಹಾಗೂ ಲಡಾಖ್‌ನಲ್ಲಿ ವರ್ಷಗಳಿಂದ ಚಳಿಗಾಲದ ಸಂದರ್ಭ ಕಾವಲು ಕಾಯುವ ವಿಶೇಷ ತರಬೇತಿ ಹೊಂದಿರುವ ಪಡೆಗಳೂ ಇರುತ್ತವೆ.

ಸುರಕ್ಷತ ಪರಿಕರಗಳು
ಚಳಿಯಿಂದ ರಕ್ಷಣೆ ನೀಡುವುದಕ್ಕಾಗಿ ಸೂಕ್ತ ಬಟ್ಟೆಗಳು, ಬಹುಲೇಯರ್‌ಗಳ ಜಾಕೆಟ್‌, ಮುಖಗವಸು, ಹೆಲ್ಮೆಟ್‌ ಮತ್ತು ವಿಶೇಷ ಕನ್ನಡಕ ನೀಡಲಾಗುತ್ತದೆ. ಇನ್ನು ಅವರ ಬಳಿ ಇರುವ ಸಸ್ಟೇನೆನ್ಸ್‌ ಕಿಟ್‌ನಲ್ಲಿ ಸ್ಲಿàಪಿಂಗ್‌ ಬ್ಯಾಗ್‌, ಹೆಚ್ಚುವರಿ ಸಾಕ್ಸ್‌ಗಳು ಹಾಗೂ ಪ್ರತಿ ಸೈನಿಕನ ಬಳಿಯೂ ನಿತ್ಯ ಆಹಾರದ ಜತೆಗೆ ಕನಿಷ್ಠ 24 ಗಂಟೆಯವರೆಗೆ ಸಾಕಾಗುವಷ್ಟು ಹೆಚ್ಚುವರಿ ತುರ್ತು ಆಹಾರ ಪದಾರ್ಥಗಳು ಇರುತ್ತವೆ.ಇವೆಲ್ಲ ಟಿನ್‌ಕ್ಯಾನ್‌ಗಳಲ್ಲಿ ಇರುತ್ತವೆ. ಇನ್ನು ಅತ್ಯಂತ ಚಳಿಯೂ ಒಳನುಸುಳದಂಥ ಬೆಚ್ಚಗಿನ ಸುರಕ್ಷತ ಟೆಂಟ್‌ಗಳನ್ನೂ ಸೇನೆಗೆ ಒದಗಿಸಲಾಗಿದೆ.

ಟಾಪ್ ನ್ಯೂಸ್

E-Khata ಇದ್ದರಷ್ಟೇ ಆಸ್ತಿ ನೋಂದಣಿ: ಸಚಿವ ಕೃಷ್ಣ ಬೈರೇಗೌಡ

E-Khata ಇದ್ದರಷ್ಟೇ ಆಸ್ತಿ ನೋಂದಣಿ: ಸಚಿವ ಕೃಷ್ಣ ಬೈರೇಗೌಡ

illegal sand mining ಸಹಕಾರ ಮಾಡಿರುವ ಆರೋಪ: ಕಾಪು ಎಸ್‌ಐ ಅಮಾನತು

illegal sand mining ಸಹಕಾರ ಮಾಡಿರುವ ಆರೋಪ: ಕಾಪು ಎಸ್‌ಐ ಅಮಾನತು

Kaniyoor: ಮರಳುಗಾರಿಕೆಯ ಬೋಟ್‌ ಅನ್ನು ಕಟ್ಟಿ ಹಾಕಿದರು

Kaniyoor: ಮರಳುಗಾರಿಕೆಯ ಬೋಟ್‌ ಅನ್ನು ಕಟ್ಟಿ ಹಾಕಿದರು

Ullal; ಉಳ್ಳಾಲ: ಹಲ್ಲೆ; ದೂರು-ಪ್ರತಿದೂರು

Ullal; ಉಳ್ಳಾಲ: ಹಲ್ಲೆ; ದೂರು-ಪ್ರತಿದೂರು

Bantwal: ಬಿ.ಸಿ.ರೋಡ್; ರೈಲು ಢಿಕ್ಕಿಯಾಗಿ ವ್ಯಕ್ತಿ ಮೃತ್ಯು

Bantwal: ಬಿ.ಸಿ.ರೋಡ್; ರೈಲು ಢಿಕ್ಕಿಯಾಗಿ ವ್ಯಕ್ತಿ ಮೃತ್ಯು

Sullia: ವಿದ್ಯುತ್‌ ಕಂಬದಿಂದ ಬಿದ್ದಿದ್ದ ವ್ಯಕ್ತಿ ಸಾವು

Sullia: ವಿದ್ಯುತ್‌ ಕಂಬದಿಂದ ಬಿದ್ದಿದ್ದ ವ್ಯಕ್ತಿ ಸಾವು

ಕುಲಕಸುಬನ್ನು ಉಳಿಸಿ ಬೆಳೆಸಬೇಕಿದೆ: ಕಾಳಹಸ್ತೇಂದ್ರ ಶ್ರೀ

Barkur Shri Kallikamba Temple: ಕುಲಕಸುಬನ್ನು ಉಳಿಸಿ ಬೆಳೆಸಬೇಕಿದೆ: ಕಾಳಹಸ್ತೇಂದ್ರ ಶ್ರೀ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

IND VS PAK

Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA

1-aaa

PM Modi ಭೇಟಿಯಾಗಿ ವಿಶೇಷ ಮನವಿ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

Maharstra: ಬೈಕ್‌ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ: 10ಮಂದಿ ಮೃತ್ಯು

Maharashtra: ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ… 10 ಮಂದಿ ಮೃತ್ಯು

Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು

Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

E-Khata ಇದ್ದರಷ್ಟೇ ಆಸ್ತಿ ನೋಂದಣಿ: ಸಚಿವ ಕೃಷ್ಣ ಬೈರೇಗೌಡ

E-Khata ಇದ್ದರಷ್ಟೇ ಆಸ್ತಿ ನೋಂದಣಿ: ಸಚಿವ ಕೃಷ್ಣ ಬೈರೇಗೌಡ

illegal sand mining ಸಹಕಾರ ಮಾಡಿರುವ ಆರೋಪ: ಕಾಪು ಎಸ್‌ಐ ಅಮಾನತು

illegal sand mining ಸಹಕಾರ ಮಾಡಿರುವ ಆರೋಪ: ಕಾಪು ಎಸ್‌ಐ ಅಮಾನತು

Kaniyoor: ಮರಳುಗಾರಿಕೆಯ ಬೋಟ್‌ ಅನ್ನು ಕಟ್ಟಿ ಹಾಕಿದರು

Kaniyoor: ಮರಳುಗಾರಿಕೆಯ ಬೋಟ್‌ ಅನ್ನು ಕಟ್ಟಿ ಹಾಕಿದರು

Ullal; ಉಳ್ಳಾಲ: ಹಲ್ಲೆ; ದೂರು-ಪ್ರತಿದೂರು

Ullal; ಉಳ್ಳಾಲ: ಹಲ್ಲೆ; ದೂರು-ಪ್ರತಿದೂರು

Bantwal: ಬಿ.ಸಿ.ರೋಡ್; ರೈಲು ಢಿಕ್ಕಿಯಾಗಿ ವ್ಯಕ್ತಿ ಮೃತ್ಯು

Bantwal: ಬಿ.ಸಿ.ರೋಡ್; ರೈಲು ಢಿಕ್ಕಿಯಾಗಿ ವ್ಯಕ್ತಿ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.