ಹೇಗೆ ಬದಲಾಗಿದೆ ಜಮ್ಮು-ಕಾಶ್ಮೀರ?


Team Udayavani, Dec 2, 2020, 6:10 AM IST

ಹೇಗೆ ಬದಲಾಗಿದೆ ಜಮ್ಮು-ಕಾಶ್ಮೀರ?

ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿ ಬದಲಾದ ಅನಂತರದಿಂದ ಕಣಿವೆ ಪ್ರದೇಶ ಹಲವು ಅಭೂತಪೂರ್ವ ಸುಧಾರಣೆಗೆ ಸಾಕ್ಷಿಯಾಗುತ್ತಿದೆ. ನಮ್ಮ ಭದ್ರತಾ ಪಡೆಗಳು ಜಮ್ಮು-ಕಾಶ್ಮೀರದಲ್ಲಿ ಉಗ್ರರ ಉಪಟಳವನ್ನು ನಿರಂತರವಾಗಿ ಹತ್ತಿಕ್ಕುತ್ತಾ ಸಾಗಿವೆ. ಪ್ರತ್ಯೇಕತಾವಾದದ ಕೂಗು, ಕಲ್ಲುತೂರಾಟದಂಥ ಘಟನೆಗಳು ಗಣನೀಯವಾಗಿ ತಗ್ಗಿವೆ. ಎಲ್ಲಕ್ಕಿಂತ ಮುಖ್ಯವಾಗಿ ಕಾಶ್ಮೀರದಲ್ಲಿನ ಹಳೆಯ ಕಾನೂನುಗಳು ಬದಲಾಗಿರುವುದರಿಂದ ಕಣಿವೆ ಪ್ರದೇಶದಲ್ಲಿ ಅಭಿವೃದ್ಧಿ ಕೆಲಸಗಳೂ ನಿರ್ವಿಘ್ನವಾಗಿ ಸಾಗುತ್ತಿವೆ…ಹಾಗಿದ್ದರೆ ಈ ಒಂದು ವರ್ಷದಲ್ಲಿ ಅಲ್ಲಿ ಏನೇನು ಬದಲಾವಣೆಯಾಗಿದೆ? ಇಲ್ಲಿದೆ ಮಾಹಿತಿ.

ನವ ಕಾನೂನುಗಳ ಅನುಷ್ಠಾನ
ಈ ಹಿಂದೆ ಜಮ್ಮು ಕಾಶ್ಮೀರದಲ್ಲಿ 354 ರಾಜ್ಯ ಕಾನೂನುಗಳಿದ್ದವು, ಇವುಗಳಲ್ಲಿ ಈಗ 164 ಕಾನೂನುಗಳನ್ನು ರದ್ದುಪಡಿಸಿದ್ದಷ್ಟೇ ಅಲ್ಲದೇ, 138 ಕಾನೂನುಗಳನ್ನು ಬದಲಿಸಲಾಗಿದೆ. ಇನ್ನು ಈವರೆಗೂ ಆ ಭಾಗಕ್ಕೆ ಅನ್ವಯವಾಗದಿದ್ದ 170 ಕೇಂದ್ರೀಯ ಕಾನೂನುಗಳನ್ನೀಗ ಜಾರಿ ಮಾಡಲಾಗಿದೆ.

ಪಹಾಡಿಗಳಿಗೆ ಮೊದಲ ಬಾರಿ ಆದ್ಯತೆ
ಪಹಾಡಿ ಭಾಷಿಗ ಜನರು ಕಾಶ್ಮೀರ ಕೇಂದ್ರಿತ ರಾಜಕಾರಣಿಗಳ ಅವಗಣನೆಗೆ ಗುರಿಯಾಗುತ್ತಲೇ ಬಂದಿದ್ದರು. ಈಗ ಪಹಾಡಿ ಜನರಿಗೆ 4 ಪ್ರತಿಶತ ಮೀಸಲಾತಿ ಹಾಗೂ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ 10 ಪ್ರತಿಶತ ಮೀಸಲಾತಿ ಕಲ್ಪಿಸಲಾಗಿದೆ. ಇಲ್ಲಿಯವರೆಗೂ ವಾಸ್ತವಿಕ ಗಡಿ ನಿಯಂತ್ರಣ ರೇಖೆಯ ಗ್ರಾಮಗಳಲ್ಲಿ ವಾಸಿಸುತ್ತಿದ್ದ ಜನರಿಗಷ್ಟೇ ಮೀಸಲಾತಿ ಸಿಗುತ್ತಿತ್ತು. ಇನ್ನು ಅಲ್ಪಸಂಖ್ಯಾಕ ವರ್ಗಗಳಿಗೆ ನೀಡಲಾಗುತ್ತಿದ್ದ ಸ್ಕಾಲರ್‌ಶಿಪ್‌ಗ್ಳಲ್ಲಿ ಕಳೆದೊಂದು ವರ್ಷದಲ್ಲಿ 262 ಪ್ರತಿಶತ ಏರಿಕೆಯಾಗಿದೆ.

ನಿದ್ದೆಗೆಟ್ಟ ಉಗ್ರ ಸಂಘಟನೆಗಳು
ಸದಾ ಕಲ್ಲು ತೂರಾಟಗಳಿಂದಲೇ ಸುದ್ದಿಯಲ್ಲಿರುತ್ತಿದ್ದ ಕಣಿವೆಯಲ್ಲಿ ಈಗ ಹಿಂಸಾತ್ಮಕ ಘಟನೆಗಳು ಗಣನೀಯವಾಗಿ ತಗ್ಗಿವೆ. ಆರ್ಟಿಕಲ್‌ 370 ರದ್ದತಿಯ ಒಂದೇ ವರ್ಷದಲ್ಲಿ ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳಲ್ಲಿ 46 ಪ್ರತಿಶತ ಇಳಿಕೆಯಾಗಿದೆ. ಇದು ಕಳೆದ 4 ದಶಕಗಳಲ್ಲೇ ಅತ್ಯಧಿಕ ಇಳಿಕೆ ಎಂಬುದು ಗಮನಾರ್ಹ. ಕಳೆದ ಒಂದು ವರ್ಷದಲ್ಲಿ ಹಿಜ್ಬುಲ್‌, ಲಷ್ಕರ್‌ ಉಗ್ರ ಸಂಘಟನೆಗಳ ಅನೇಕ ಸ್ಥಳೀಯ ನಾಯಕರು, ಜೆಹಾದಿಗಳು ಭದ್ರತಾಪಡೆಗಳ ಕಾರ್ಯಾಚರಣೆಗೆ ಬಲಿಯಾಗಿದ್ದಾರೆ. ಕಳೆದ ಆಗಸ್ಟ್‌ ತಿಂಗಳಿಂದ ಇಲ್ಲಿಯವರೆಗೂ 178 ಉಗ್ರರು ಹತರಾಗಿದ್ದಾರೆ. ಇದರಲ್ಲಿ 78 ಹಿಜ್ಬುಲ್‌ ಉಗ್ರರು , 20 ಲಷ್ಕರ್‌-ಎ-ತಯ್ಯಬಾ ಉಗ್ರರು, 32 ಉಗ್ರರು ಜೈಶ್‌-ಎ-ಮೊಹಮ್ಮದ್‌ ಸಂಘಟನೆಯ ಉಗ್ರರು ಬಲಿಯಾಗಿದ್ದರೆ, ಐಎಸ್‌ಜೆಕೆ ಮತ್ತು ಬೆಳೆಯುತ್ತಿದ್ದ ಅನ್ಸರ್‌ ಗಜ್ವತ್‌-ಉಲ್‌ ಹಿಂದ್‌ನ ಪ್ರಮುಖ ಜೆಹಾದಿಗಳನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಕಳೆದೊಂದು ವರ್ಷದಲ್ಲಿ ಉಗ್ರ ಸಂಘಟನೆಗಳಿಗೆ ಸೇರುತ್ತಿದ್ದ ಯುವಕರ ಸಂಖ್ಯೆಯಲ್ಲಿ 40 ಪ್ರತಿಶತ ಇಳಿಕೆಯಾಗಿದೆ.

ಆರ್ಥಿಕ ಪ್ಯಾಕೇಜುಗಳು
ಇದೇ ವರ್ಷದ ಜನವರಿ ತಿಂಗಳಲ್ಲಿ ಮೋದಿ ಸರಕಾರ ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಅಭಿವೃದ್ಧಿ ಕಾಮಗಾರಿಗಳಿಗಾಗಿ 80 ಸಾವಿರ ಕೋಟಿ ರೂಪಾಯಿ ಗಳ ಪ್ಯಾಕೇಜ್‌ ಘೋಷಿಸಿದೆ. ಇದರಿಂದಾಗಿ ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆಗಳಿಗೆಲ್ಲ ಮರುಜೀವ ದೊರೆತಂತಾಗಿದೆ. ಈ ಅನುದಾನದಲ್ಲಿ ಐಐಟಿ, ಐಐಎಂ ಮತ್ತು ಏಮ್ಸ್‌ನಂಥ ಶೈಕ್ಷಣಿಕ ಸಂಸ್ಥೆಗಳನ್ನು ನಿರ್ಮಿಸಲಾಗುತ್ತಿದೆ. ಜಮ್ಮು-ಕಾಶ್ಮೀರದಲ್ಲಿ ಕಾನೂನು ಹಾಗೂ ನಿಯಮಗಳ ಬದಲಾವಣೆ ಯಿಂದಾಗಿ ಭಾರತದ ಇತರ ಭಾಗಗಳಿಗೆ ಸಿಗುತ್ತಿದ್ದ ಸ್ಕೀಮುಗಳ ಪ್ರಯೋಜನವೂ ಈ ಪ್ರದೇಶಕ್ಕೆ ವಿಸ್ತರಣೆಗೊಂಡಿದೆ. ಕೇಂದ್ರ ಸರಕಾರ ಪಿಎಂ- ಕಿಸಾನ್‌, ಪಿಎಂ-ಕಿಸಾನ್‌ ಪೆನ್ಶನ್‌, ಪ್ರಧಾನಮಂತ್ರಿ ಜನಧನ ಯೋಜನೆ, ಸ್ಟಾಂಡ್‌ ಅಪ್‌ ಇಂಡಿಯಾ ಸೇರಿದಂತೆ 85 ಜನಾಭಿವೃದ್ಧಿ ಸ್ಕೀಮುಗಳನ್ನು ಜಮ್ಮು-ಕಾಶ್ಮೀರಕ್ಕೆ ತಲುಪಿಸಿದೆ. ಇನ್ನು ಅಟಲ್‌ ಪೆನ್ಶನ್‌ ಯೋಜನೆ ಸೇರಿದಂತೆ ಹಲವಾರು ವಿಮಾ ಯೋಜನೆಗಳನ್ನೂ ಪರಿಚಯಿಸಲಾಗಿದೆ.

ಪ್ರವಾಸೋದ್ಯಮಕ್ಕೆ ಹೊಡೆತ
ಆರ್ಟಿಕಲ್‌ 370 ರದ್ದತಿಯ ಅನಂತರದ ಮೂರು ದಿನಗಳಲ್ಲಿ ಕೇಂದ್ರ ಸರಕಾರ, ಪ್ರವಾಸಿಗರಿಗೆಲ್ಲ ಕಾಶ್ಮೀರ ತೊರೆಯಲು ಹೇಳಿತ್ತು. ತದನಂತರ ಸುರಕ್ಷತ ದೃಷ್ಟಿಯಿಂದ ಕಣಿವೆ ಭಾಗದಲ್ಲಿ ಕಠಿನತಮ ನಿರ್ಬಂಧಗಳನ್ನು ಜಾರಿ ಮಾಡಿದ ಕಾರಣ, ಪ್ರವಾಸೋದ್ಯಮ ಕ್ಷೇತ್ರಕ್ಕೆ ಭಾರೀ ಪೆಟ್ಟು ಬಿದ್ದಿತು. ಕಳೆದ ಡಿಸೆಂಬರ್‌ ತಿಂಗಳಲ್ಲಿ ಕಾಶ್ಮೀರದ ಆರ್ಥಿಕತೆಗೆ 17,800 ಕೋಟಿ ರೂಪಾಯಿ ನಷ್ಟವಾದರೆ, ಆಗಸ್ಟ್‌ನಿಂದ ಅಕ್ಟೋಬರ್‌ 2019ರ ನಡುವೆ 4.9 ಲಕ್ಷ ಉದ್ಯೋಗಗಳು ಹಾನಿಯಾದವು. ನಿರ್ಬಂಧಗಳನ್ನು ಹಂತ ಹಂತವಾಗಿ ಸಡಿಲಿಸಿದ ಅನಂತರ 2020ರಲ್ಲಿ ಪರಿಸ್ಥಿತಿ ಸುಧಾರಣೆಯಾಗಬಹುದು ಎನ್ನುವ ನಿರೀಕ್ಷೆಯಿತ್ತಾದರೂ, ದುರ್ದೈವವಶಾತ್‌ ಕೋವಿಡ್‌ ಕಾರಣದಿಂದಾಗಿ ಕಾಶ್ಮೀರದ ಪ್ರವಾಸೋದ್ಯಮ ಇನ್ನೂ ಚೇತರಿಸಿಕೊಂಡಿಲ್ಲ.

ಅಭಿವೃದ್ಧಿ ಕಾಮಗಾರಿಗಳ ಪರ್ವ
ಮುಂದಿನ ವರ್ಷದೊಳಗೆ ಪ್ರಪಂಚದಲ್ಲೇ ಅತೀ ಎತ್ತರದ ರೈಲ್ವೇ ಸೇತುವೆ ಉದ್ಘಾಟನೆಯಾಗಲಿದೆ. ಈ ಸೇತುವೆ ಚೆನಾಬ್‌ ನದಿಯ ಮೇಲೆ ಹಾದು ಹೋಗಲಿದ್ದು, ಕಣಿವೆ ಪ್ರದೇಶವನ್ನು ಭಾರತದ ಇತರೆ ಭಾಗಗಳೊಂದಿಗೆ ರೈಲ್ವೇ ಮೂಲಕ ಬೆಸೆಯಲಿದೆ. ಇದಷ್ಟೇ ಅಲ್ಲದೇ ಗಡಿ ಭಾಗದ ಪ್ರಾಂತ್ಯಗಳಲ್ಲಿನ ಸುಗಮ ಸಂಚಾರಕ್ಕೆ ಈ ಒಂದು ವರ್ಷದಲ್ಲೇ ಆರು ಸೇತುವೆಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಕಳೆದ 50 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಶಾಹ್‌ಪುರ್‌ ಖಂಡಿ ವಿದ್ಯುತ್‌ ಮತ್ತು ಕೃಷಿ ಯೋಜನೆ ಮರು ಜೀವ ಪಡೆದುಕೊಂಡಿದೆ. ಇನ್ನು ಕಾಶ್ಮೀರ ಕಣಿವೆಯನ್ನು ಶೋಪಿಯಾಂ ಮೂಲಕ ಗಡಿ ಪ್ರದೇಶವಾದ ಪೂಂಛ…ಗೆ ಬೆಸೆಯುವ ಐತಿಹಾಸಿಕ ಮೊಘಲ್‌ ರಸ್ತೆಯ ಅಭಿವೃದ್ಧಿಯಂತೂ ಭರದಿಂದ ಸಾಗಿದೆ. ಶ್ರೀನಗರ ಮತ್ತು ಜಮ್ಮು ನಡುವೆ ಮೆಟ್ರೋ ರೈಲು ಯೋಜನೆಯೂ ನಿರ್ಮಾಣಗೊಳ್ಳುತ್ತಿದೆ. ಸೆಪ್ಟಂಬರ್‌ 2019ರಲ್ಲೇ ಕೇಂದ್ರವು 15 ವಿದ್ಯುತ್‌ ಯೋಜನೆಗಳಿಗೆ ಚಾಲನೆ ನೀಡಿದ್ದಷ್ಟೇ ಅಲ್ಲದೇ 10 ಸಾವಿರ ಕೋಟಿ ವೆಚ್ಚದ ಇನ್ನಿತರ 20 ಅಭಿವೃದ್ಧಿ ಯೋಜನೆಗಳ ಆರಂಭಕ್ಕೂ ಸಹಿ ಹಾಕಿದ್ದು, ವೇಗವಾಗಿ ಅನುಷ್ಠಾನಗೊಳ್ಳುತ್ತಿವೆ.

ಟಾಪ್ ನ್ಯೂಸ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

1-wqewq

UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Congress is taking revenge by forming SIT: Araga Jnanendra

Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ

Maharashtra Election: Election officials checked Amit Shah’s bag

Maharashtra Election: ಅಮಿತ್‌ ಶಾ ಅವರ ಬ್ಯಾಗ್‌ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು

Anmol Buffalo: The price of this Buffalo weighing 1500 kg is Rs 23 crore!

Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!

13-BBK-11

BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Maharashtra Election: Election officials checked Amit Shah’s bag

Maharashtra Election: ಅಮಿತ್‌ ಶಾ ಅವರ ಬ್ಯಾಗ್‌ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು

Anmol Buffalo: The price of this Buffalo weighing 1500 kg is Rs 23 crore!

Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಲ್ಕರ್ ಹತ್ಯೆ ಆರೋಪಿ: ಮೂಲಗಳು

Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ

6-delhi-pollution

Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್‌, ಬಸ್‌ಗಳಿಗೆ ನಿರ್ಬಂಧ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

kmc

Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ

1-wqewq

UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ

10

Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು

11(1)

Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.