ಪ್ರೇಯಸಿಯೊಂದಿಗೆ ಮಾಲ್ಡೀವ್ಸ್ ಟ್ರಿಪ್: ಪತ್ನಿಯ ಕಾಟ ತಪ್ಪಿಸಿಕೊಳ್ಳಲು ಹೋಗಿ ಜೈಲು ಸೇರಿದ!
Team Udayavani, Jul 9, 2022, 3:30 PM IST
ಮುಂಬೈ: ವಿವಾಹಿತ ವ್ಯಕ್ತಿಯೋರ್ವ ಪತ್ನಿಗೆ ಸುಳ್ಳು ಹಳಿ ಗೆಳತಿಯೊಂದಿಗೆ ಮಾಲ್ಡೀವ್ಸ್ ಗೆ ತೆರಳಿ ಇದೀಗ ಸಿಕ್ಕಿ ಬಿದ್ದಿದ್ದಾನೆ. ಇದಕ್ಕೆ ಕಾರಣ ಆತನ ಪಾಸ್ ಪೋರ್ಟ್!
ಹೌದು, 32 ವರ್ಷದ ಮುಂಬೈನ ವ್ಯಕ್ತಿ ತನ್ನ ಈ ಟ್ರಿಪ್ ನ ಮಾಹಿತಿ ಪತ್ನಿಗೆ ತಿಳಿಯಬಾರದು ಎಂಬ ಕಾರಣಕ್ಕೆ ಪಾಸ್ ಪೋರ್ಟ್ ನ ಹಾಳೆಯನ್ನೇ ಹರಿದು ಹಾಕಿದ್ದಾನೆ. ಇದೀಗ ಆತನ ಬಂಧನಕ್ಕೆ ಕಾರಣವಾಗಿದೆ.
ಎಂಎನ್ಸಿಯಲ್ಲಿ ಕೆಲಸ ಮಾಡುವ ಎಂಜಿನಿಯರ್ ತಾನು ಅಧಿಕೃತ ಕೆಲಸದ ನಿಮಿತ್ತ ವಿದೇಶ ಪ್ರವಾಸಕ್ಕೆ ತೆರಳುವುದಾಗಿ ಪತ್ನಿಗೆ ತಿಳಿಸಿ ತನ್ನ ಮತ್ತೋರ್ವ ಗೆಳತಿಯೊಂದಿಗೆ ರಜೆಯ ಮೇಲೆ ಮಾಲ್ಡೀವ್ಸ್ ಗೆ ತೆರಳಿದ್ದ. ಅಲ್ಲಿ ಗೆಳತಿಯೊಂದಿಗೆ ಮೋಜು ಮಸ್ತಿಯಲ್ಲಿ ತೊಡಗಿದ್ದ ವೇಳೆ ಪತ್ನಿ ಕರೆ ಮಾಡುತ್ತಿದ್ದಳು.
ಆದರೆ ಪತಿ ತನ್ನ ಕರೆಗಳನ್ನು ಸ್ವೀಕರಿಸದಿದ್ದಾಗ, ಹೆಂಡತಿಗೆ ಅನುಮಾನ ಬಂದು, ಅವಳು ಪದೇ ಪದೇ ವಾಟ್ಸಾಪ್ ನಲ್ಲಿ ಕರೆ ಮಾಡಿದ್ದಳು. ಇದರಿಂದ ಬೇಸತ್ತ ಆತ ಮಾಲ್ಡೀವ್ಸ್ ಪ್ರವಾಸ ಮೊಟಕುಗೊಳಿಸಲು ನಿರ್ಧರಿಸಿದ್ದ.
ಇದನ್ನೂ ಓದಿ:ಶ್ರೀಮಂತ ವರನಿಗಾಗಿ 36 ಲಕ್ಷ ರೂ. ಕಳೆದುಕೊಂಡ ಮಹಿಳೆ! ; ಆಗಿದ್ದೇನು ?
ಆದರೆ ತಾನು ಮಾಲ್ಡೀವ್ಸ್ ಗೆ ಬಂದ ವಿಚಾರ ಹೆಂಡತಿಗೆ ತಿಳಿದರೆ ಪಚೀತಿಯಾದಿತೆಂದು ಉಪಾಯ ಮಾಡಿದ್ದ. ಅದರಂತೆ ಅವನು ತನ್ನ ಪಾಸ್ಪೋರ್ಟ್ ನಲ್ಲಿನ ವೀಸಾ ಮುದ್ರೆಯ ಪುಟಗಳನ್ನು ಹರಿದು ಹಾಕಿದ್ದ.
ಇಂಜಿನಿಯರ್ ಗುರುವಾರ ರಾತ್ರಿ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದ. ಈ ವೇಳೆ ಎಮಿಗ್ರೇಶನ್ ಅಧಿಕಾರಿಗಳು ಆತನ ಪಾಸ್ ಪೋರ್ಟ್ ನ 3-6 ಮತ್ತು 31-34 ಹಾಳೆಗಳು ಇಲ್ಲಿದಿರುವುದನ್ನು ಗಮನಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಪ್ರಶ್ನಿಸಿದಾಗ ಆತ ಏನೇನೋ ಸಬೂಬು ಹೇಳಿದ್ದಾನೆ. ಹೀಗಾಗಿ ಪೊಲೀಸರು ಆತನನ್ನು ಬಂಧಿಸಿ, ವಂಚನೆ ಮತ್ತು ಫೋರ್ಜರಿ ಪ್ರಕರಣಗಳನ್ನು ದಾಖಲಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.