ಸೇನೆಯ ಅಧಿಕಾರಿಗಳನ್ನು ಪಾಕಿಸ್ಥಾನ ಹೇಗೆ ಹನಿಟ್ರ್ಯಾಪ್ ಮಾಡುತ್ತಿದೆ?
Team Udayavani, Oct 22, 2022, 10:14 PM IST
ನವದೆಹಲಿ : ಸೇನೆಯ ಬಗ್ಗೆ ಸೂಕ್ಷ್ಮ ಮತ್ತು ಕಾರ್ಯತಂತ್ರದ ಮಾಹಿತಿಯನ್ನು ಹಂಚಿಕೊಂಡ ಆರೋಪ ಹೊತ್ತಿರುವ ದೆಹಲಿಯ ಸೇನಾ ಭವನದ 4 ನೇ ದರ್ಜೆ ಉದ್ಯೋಗಿ, ಜೈಲಿನಲ್ಲಿರುವ ರವಿ ಪ್ರಕಾಶ್ ಮೀನಾಗೆ ತಾನು ಪ್ರೀತಿಸಿದ ಮಹಿಳೆ ಪಾಕಿಸ್ಥಾನಿ ಏಜೆಂಟ್ ಎಂದು ನಂಬಲು ಸಾಧ್ಯವಾಗುತ್ತಿಲ್ಲ. ಫೇಸ್‌ಬುಕ್‌ನಲ್ಲಿ ತನ್ನೊಂದಿಗೆ ಸ್ನೇಹ ಬೆಳೆಸಿದ ಏಜೆಂಟ್‌ನೊಂದಿಗೆ “ಹುಚ್ಚು ಪ್ರೀತಿಯಲ್ಲಿ” ಇದ್ದನು ಎಂದು 31 ವರ್ಷದ ಮೀನಾ ಪ್ರಕರಣದ ತನಿಖೆಯ ನಡೆಸುತ್ತಿರುವ ಗುಪ್ತಚರ ಅಧಿಕಾರಿಯೊಬ್ಬರು ಹೇಳಿದ್ದಾರೆ.
ರಾಜಸ್ಥಾನದ ಕರೌಲಿ ಜಿಲ್ಲೆಯ ಸಪೋತಾರಾದಿಂದ, ಅಕ್ಟೋಬರ್ ಮೊದಲ ವಾರದಲ್ಲಿ ಮೀನಾರನ್ನು ಬಂಧಿಸಲಾಗಿತ್ತು. ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಸೇರಿದಂತೆ ಪಾಕಿಸ್ಥಾನಿ ಏಜೆಂಟ್‌ಗಳಿಂದ ಹನಿ ಟ್ರ್ಯಾಪ್ ಆದ ನಂತರ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡ ಆರೋಪದ ಮೇಲೆ 2017 ರಿಂದ ರಾಜ್ಯ ಪೊಲೀಸರು ಬಂಧಿಸಿದ 35 ನೇ ವ್ಯಕ್ತಿಯಾಗಿದ್ದಾರೆ.
ಮೀನಾ ಪ್ರಕರಣದಲ್ಲಿ, ಅಧಿಕಾರಿ ಅಂಜಲಿ ತಿವಾರಿ ಎಂಬ ಹೆಸರಿನಿಂದ ಬಂದ ಪಾಕಿಸ್ಥಾನಿ ಏಜೆಂಟ್, ಪಶ್ಚಿಮ ಬಂಗಾಳದಲ್ಲಿ ಭಾರತೀಯ ಸೇನಾಧಿಕಾರಿಯಾಗಿ ಪೋಸ್ ನೀಡಿದ್ದು, ಆತನನ್ನು ಬಂಧಿಸಿದ ನಂತರವೂ ಮತ್ತು ಸಾಕ್ಷ್ಯವನ್ನು ನೋಡಿದಾಗ, ಕುಮಾರ್ ಮಹಿಳೆಯನ್ನು ಒಬ್ಬ ಪಾಕಿಸ್ಥಾನಿ ಏಜೆಂಟ್ ಎಂದು ನಂಬಲು ಸಾಧ್ಯವಾಗಲಿಲ್ಲ” ಎಂದು ಹೇಳಿದ್ದಾರೆ.
ತನ್ನ ಬ್ಯಾಂಕ್ ಖಾತೆಗೆ ಜಮೆಯಾದ ಹಣಕ್ಕೆ ಬದಲಾಗಿ ಅವರು ಸಾಮಾಜಿಕ ಮಾಧ್ಯಮದ ಮೂಲಕ ಏಜೆಂಟ್‌ಗೆ ಮಾಹಿತಿ ನೀಡುತ್ತಿದ್ದರು ಎಂದು ತಿಳಿದು ಬಂದಿದೆ.
ಪಾಕಿಸ್ಥಾನ ಸೇನೆಯ ಅಧಿಕಾರಿಗಳನ್ನು ಹೇಗೆ ಹನಿಟ್ರ್ಯಾಪ್ ಮಾಡುತ್ತಿದೆ ?
ಎಲ್ಲಾ ಸಂದರ್ಭಗಳಲ್ಲಿ, ಕಾರ್ಯಾಚರಣೆಯ ವಿಧಾನ ಒಂದೇ ಆಗಿರುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಏಜೆಂಟರು ಕರೆಗಳನ್ನು ಮಾಡುತ್ತಾರೆ ನಂತರ ಮತ್ತೆ ಕರೆ ಮಾಡಿದ ನಂತರ ಸಂಭಾಷಣೆ ನಡುವೆ ಸಾಮಾಜಿಕ ಮಾಧ್ಯಮದ ಮೂಲಕ ಸಂಪರ್ಕದಲ್ಲಿರುತ್ತಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹನಿ ಟ್ರ್ಯಾಪಿಂಗ್ ಪ್ರಕ್ರಿಯೆಯಲ್ಲಿ, ಅವರು ವಿಡಿಯೋ ಮತ್ತು ವಾಯ್ಸ್ ಚಾಟ್‌ಗಳ ಮೂಲಕ ತೊಡಗಿಸಿಕೊಳ್ಳುತ್ತಾರೆ, ಭಾವನಾತ್ಮಕವಾಗಿ ಹತ್ತಿರವಾಗುತ್ತಾರೆ, ಸಂತ್ರಸ್ತರನ್ನು ಮೋಹಿಸಲು ನಗ್ನ ಕ್ಲಿಪ್‌ಗಳು ಮತ್ತು ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ ಮತ್ತು ನಂತರ ಸಾಮಾಜಿಕ ಮಾಧ್ಯಮದ ಮೂಲಕ ಗೌಪ್ಯ ಮಾಹಿತಿ ಮತ್ತು ದಾಖಲೆಗಳನ್ನು ಹಂಚಿಕೊಳ್ಳಲು ಮೋಸ ಅಥವಾ ಬ್ಲಾಕ್‌ಮೇಲ್ ಮಾಡುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ
NSE, BSE; ಷೇರು ಮಾರುಕಟ್ಟೆಗೆ ನವೆಂಬರ್ 20 ರಂದು ರಜೆ ಘೋಷಣೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.