ಫೇಸ್ ಆ್ಯಪ್ ಎಷ್ಟು ಸುರಕ್ಷಿತ
Team Udayavani, Jul 20, 2019, 6:21 PM IST
ಮಣಿಪಾಲ: ಜನರಿಗೆ ಕುತೂಹಲಗಳು ಸಾವಿರ. ಅವುಗಳನ್ನು ನೀಗಿಸಲು ಹೊಸ ತಂತ್ರಜ್ಞಾನಗಳೂ ಹುಟ್ಟಿಕೊಳ್ಳುತ್ತವೆ. ಇತ್ತೀಚೆಗೆ ಸಮಾಜಿಕ ಜಾಲತಾಣಗಳಲ್ಲಿ “ಫೇಸ್ ಆ್ಯಪ್’ ತೀವ್ರ ಸಂಚಲನ ಹುಟ್ಟಿಸಿದೆ. ಟ್ವೀಟರ್, ಇನ್‌ಸ್ಟಾಗ್ರಾಂ, ವಾಟ್ಸ್ಯಾಪ್ ಹಾಗೂ ಫೇಸ್‌ಬುಕ್‌ಗಳಲ್ಲಿ ಹೆಚ್ಚು ಚಿತ್ರಗಳನ್ನು ಹರಿಯ ಬಿಡಲಾಗುತ್ತದೆ.
ಏನಿದು ಫೇಸ್ ಆ್ಯಪ್?
ಫೇಸ್ ಆ್ಯಪ್ ರಷ್ಯಾ ಮೂಲದ ಸಂಸ್ಥೆಯಾಗಿದೆ. ಇದರ ಸರ್ವರ್‌ಗಳು ರಷ್ಯಾದಲ್ಲೇ ಇದ್ದು, ಆ್ಯಪ್ ಮೂಲಕ ಅಪ್‌ಲೋಡ್ ಆಗುವ ಚಿತ್ರಗಳು ಹಲವು ವಯೋಮಿತಿಯ ಚಿತ್ರಗಳನ್ನು ನೀಡುತ್ತದೆ. ಹಾಗಂತ ಇದು 2017ರಲ್ಲಿ ಬಿಡುಗಡೆಯಾದ ಆ್ಯಪ್ 2 ವರ್ಷದ ಬಳಿಕ ಸುದ್ದಿಯಲ್ಲಿದೆ.
ಇದು ತೋರಿಸುವ ಚಿತ್ರ ಎಷ್ಟು ಸತ್ಯ?
ಫೇಸ್ ಆ್ಯಪ್ ಗಳು ತೋರಿಸುವ ಚಿತ್ರ ಬರೀ ಊಹೆ ಮಾತ್ರ. ಇದರಲ್ಲಿ ಮಜಾ ತೆಗೆದುಕೊಳ್ಳುವ ಯುವ ಜನರು ಆ ಆ್ಯಪ್‌ನ ಸತ್ಯಾಸತ್ಯತೆಯ ಕುರಿತು ಪ್ರಶ್ನೆ ಮಾಡುವುದಿಲ್ಲ. ನಾವು ಅಪ್‌ಲೋಡ್ ಮಾಡಿದ ಚಿತ್ರ ಸರ್ವರ್‌ನಲ್ಲಿ ಸ್ಟೋರ್ ಆಗಿರುತ್ತದೆ. ನಾವು ಕ್ಲಿಕ್ಕಿಸಿದ ಚಿತ್ರವನ್ನು ಸ್ವತಃ ನಾವೇ ಡಿಲೀಟ್ ಮಾಡಿದರೂ ಅದು ಅವರಲ್ಲಿ ಸಂಗ್ರಹವಾಗಿರುತ್ತದೆ.
ನಿಮ್ಮ ಡಾಟಾ ಬಗ್ಗೆ ಎಚ್ಚರಿಕೆ!
ಫೇಸ್ ಆ್ಯಪ್ ಬಳಸಿ ಸೃಷ್ಟಿಸುವ ಫೋಟೋಗಳು ಕ್ಲೌಡ್ ಸ್ಟೋರೇಜ್‌ನಲ್ಲಿ ಶೇಖರವಾಗಿರುತ್ತದೆ. ಹೀಗಾಗಿ ಫೇಸ್ ಆ್ಯಪ್ ಮಾತ್ರವಲ್ಲದೆ, ಅಂತಹ ಯಾವುದೇ ಆ್ಯಪ್ ಇನ್‌ಸ್ಟಾಲ್ ಮಾಡುವ ಮುನ್ನ ಎಚ್ಚರಿಕೆ ವಹಿಸುವುದು ಸೂಕ್ತ. ಇಲ್ಲವಾದರೆ, ಡಾಟಾ ಸೋರಿಕೆಗೆ ನಾವೇ ಜವಾಬ್ದಾರರಾಗಿರುತ್ತೀರಿ. ಚಿತ್ರಗಳು ನೋಡುವಾಗ ಆಕರ್ಷಕವಾಗಿ ಮತ್ತು ತಮಾಷೆಯಾಗಿ ಕಾಣುತ್ತದೆ. ಆದರೆ ಅವುಗಳು ನಿಮ್ಮ ಫೋನಿನ ಗೌಪ್ಯ ಮಾಹಿತಿಗಳನ್ನು ಸೋರಿಕೆ ಮಾಡುವ ಅಪಾಯ ಇದೆ. ಯಾಕೆಂದರೆ ವಿವಿಧ ಸಂಸ್ಥೆಗಳು ನಡೆಸಿದ ಅಧ್ಯಯನದಲ್ಲಿ ಅವುಗಳು ಸಾಭೀತಾಗಿದೆ.
ಏನೆಲ್ಲಾ ಮಾಹಿತಿ ಸೋರಿಕೆ
-ನಿಮ್ಮ ವೆಬ್ ಸರ್ಚ್ ಮಾಹಿತಿ
-ಇಂಟರ್‌ನೆಟ್ ಪ್ರೊಟೋಕಾಲ್ (ಐಪಿ) ಅಡ್ರೆಸ್
-ಬೌಸರ್ ಮಾಹಿತಿ
-ಪೇಜ್‌ಗಳು, ಖಾತೆಗಳ ಮಾಹಿತಿ
-ನೀವು ಇಂಟರ್‌ನೆಟ್ ಮೂಲಕ ಮಾಡುವ ವ್ಯವಹಾರಗಳು
-ಡೋಮಿನ್ ಹೆಸರು
ಮೊದಲಾದ ಮಾಹಿತಿಗಳು ಸೋರಿಕೆಯಾಗುವ ಅಪಾಯ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
MUST WATCH
ಹೊಸ ಸೇರ್ಪಡೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.