ಹುಬ್ಬಳ್ಳಿ ರ‍್ಯಾಲಿ; ಹಾರ ಹಾಕಲು ಪ್ರಧಾನಿ ಮೋದಿಯವರತ್ತ ನುಗ್ಗಿ ಬಂದ ಬಾಲಕ
Team Udayavani, Jan 12, 2023, 4:52 PM IST
ಹುಬ್ಬಳ್ಳಿ : ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ನಗರದಲ್ಲಿ ನಡೆಸುತ್ತಿದ್ದ ರೋಡ್ ಶೋ ವೇಳೆ ಭದ್ರತಾ ಲೋಪ ಎನ್ನುವಂತೆ ಬಾಲಕನೊಬ್ಬ ಏಕಾಏಕಿ ಕಾರಿನತ್ತ ನುಗ್ಗಿ ಬಂದ ಘಟನೆ ನಡೆದಿದೆ.
ಪೊಲೀಸರ ಸರ್ಪಗಾವಲಿನ ನಡುವೆ ಬಾಲಕ ಹೂವಿನ ಹಾರ ಹಿಡಿದುಕೊಂಡು ಪ್ರಧಾನಿ ಮೋದಿ ಅವರಿಗೆ ಹಾಕಲು ಮುಂದಾಗಿದ್ದಾನೆ. ಈ ವೇಳೆ ಭದ್ರತಾ ಸಿಬಂದಿಗಳು ತಡೆಯಲು ಯತ್ನಿಸಿ ಹೂವಿನ ಹಾರ ಪಡೆದರು. ಆದರೆ ಪ್ರಧಾನಿ ಆ ಹಾರವನ್ನು ಕೈಯಲ್ಲಿ ಸ್ವೀಕರಿಸಿದರು.
ರೋಡ್ ಶೋ ವೇಳೆ ಭಾರಿ ಸಂಖ್ಯೆಯ ಪೊಲೀಸರನ್ನು ರಸ್ತೆಯ ಉದ್ದಗಲಕ್ಕೂ ಭದ್ರತೆಗಾಗಿ ನಿಯೋಜಿಸಲಾಗಿತ್ತು. ಭದ್ರತೆಯ ನಡುವೆಯೂ ಬಾಲಕ ಹಾರ ಹಿಡಿದುಕೊಂಡು ರಸ್ತೆಗೆ ನುಗ್ಗಿ ಬಂದಿದ್ದಾನೆ. ರಸ್ತೆಯ ಉದ್ದಕ್ಕೂ ಸಾವಿರಾರು ಮಾಡಿ ಅಭಿಮಾನಿಗಳು ನೆರೆದಿದ್ದು ಪ್ರಧಾನಿ ಮೋದಿ ಅವರು ಎಲ್ಲರತ್ತ ಕೈ ಬೀಸಿದರು. ಜನರು ಅಭಿಮಾನದಿಂದ ಹೂವಿನ ಮಳೆ ಗೆರೆದರು.
ಪ್ರಧಾನಿ ಮೋದಿ ಅವರು ಹುಬ್ಬಳ್ಳಿಯಲ್ಲಿ ಸಂಜೆ ರೈಲ್ವೇ ಮೈದಾನದಲ್ಲಿ 26ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಚಾಲನೆ ನೀಡುತ್ತಿದ್ದು,ಧಾರವಾಡದಲ್ಲಿ ಜ.12-16ರ ವರೆಗೆ ಉತ್ಸವ ನಡೆಯಲಿದ್ದು, ಅದರ ಉದ್ಘಾಟನ ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ ನಡೆಯಲಿದೆ. ಪ್ರಧಾನಿ ಮೋದಿಯವರ ಪಾಲ್ಗೊಳ್ಳುವಿಕೆ ಹಿನ್ನೆಲೆಯಲ್ಲಿ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Yellapura: ಬಸ್- ಬೈಕ್ ಡಿಕ್ಕಿ; ಟಯರ್ ತಲೆ ಮೇಲೆ ಹರಿದು ಇಬ್ಬರು ಸ್ಥಳದಲ್ಲೇ ಮೃತ್ಯು
Delhi; ಸೋಲಿನ ಭಯದಿಂದ ಬಿಜೆಪಿ ಆಪರೇಶನ್ ಕಮಲ ಆರಂಭಿಸಿದೆ: ಅರವಿಂದ ಕೇಜ್ರಿವಾಲ್
Mandya: ಅಪ್ರಾಪ್ತರ ಪ್ರೇಮ ಪ್ರಕರಣ; ಜಿಲೆಟಿನ್ ಸ್ಪೋಟಿಸಿ ಯುವಕ ಆತ್ಮಹತ್ಯೆ
Punjalkatte: ಘನತ್ಯಾಜ್ಯ ಘಟಕ ಆರಂಭಕ್ಕೆ ಇನ್ನೂ ಮೀನ ಮೇಷ ಎಣಿಕೆ
Hubli; ಹಂದಿ ಸಾಕಾಣಿಕೆದಾರ ಕೊಲೆ ಪ್ರಕರಣ; ಮೃತನ ಅಕ್ಕನ ಗಂಡ ಸೇರಿ ನಾಲ್ವರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.