ಆಫ್ರಿಕಾ ಖಂಡದಿಂದ ಗೋವಾ ನದಿಗಳಿಗೆ ಬಂದಿವೆ ಬೃಹತ್ ಮೀನು : ಡಾ. ಬಬನ್
Team Udayavani, May 26, 2021, 1:36 PM IST
ಪಣಜಿ: ಆಫ್ರಿಕಾ ಖಂಡದಿಂದ ಗೋವಾದ ನದಿಗಳಿಗೆ ಬಂದಿರುವ ಮೀನುಗಳಿಂದಾಗಿ ನದಿಗಳಲ್ಲಿರುವ ಜೈವಿಕ ಸಂಪತ್ತು ನಷ್ಟವಾಗುವ ಭೀತಿ ಎದುರಾಗಿದೆ. ಆಫ್ರಿಕಾದಿಂದ ಬಂದಿರುವ ಈ ಮೀನುಗಳು ಇಲ್ಲಿ ನದಿಯಲ್ಲಿರುವ ಮೀನುಗಳನ್ನು ತಿಂದು ತಾವು ಜೀವಿಸುತ್ತವೆ. ಇದರಿಂದಾಗಿ ಇದುವರೆಗೂ ನದಿಗಳಲ್ಲಿರುವ ಎಷ್ಟು ಮೀನುಗಳನ್ನು ತಿಂದಿವೆ ಎಂಬುದು ಗಣತಿಯೇ ಇಲ್ಲ ಎಂಬಂತಾಗಿದೆ. ಇಂತಹ ಆಫ್ರಿಕಾ ಮೀನುಗಳನ್ನು ಹಿಡಿಯುವ ಅಗತ್ಯವಿದೆ ಎಂದು ಹಿರಿಯ ಸಂಶೋಧಕ ಡಾ. ಬಬನ್ ಜಂಗೋಲೆ ಅಭಿಪ್ರಾಯಪಟ್ಟಿದ್ದಾರೆ.
ಮೋಜಂಬಿಕ್ ತಿಲಾಪ್ಲಾ ಮತ್ತು ಆಫ್ರಿಕನ್ ಕಟ್ ಫಿಶ್‍ಗಳು ಗೋವಾದ ನದಿಗೆ ಬಂದಿವೆ. ಈ ಮೀನುಗಳು ಅಲ್ಲಿಂದ ಯಾವ ಕಾರಣಕ್ಕೆ ಬಂದವು ಎಂಬುದು ತಿಳಿದಿಲ್ಲ, ಆದರೆ ಇಲ್ಲಿ ನದಿಗಳ ಸಿಹಿ ನೀರಿಗೆ ಬಂದಿರುವ ಆ ಮೀನುಗಳು ನದಿಗಳಲ್ಲಿರುವ ಹಲವು ಪ್ರಜಾತಿಯ ಮೀನುಗಳನ್ನು ತಿಂದು ಖಾಲಿ ಮಾಡುತ್ತಿವೆ. ಮೀನುಗಾರಿಕಾ ಇಲಾಖೆಯು ಇಂತಹ ಮೀನುಗಳನ್ನು ಹಿಡಿಯಬೇಕು ಮತ್ತು ಕೋಳಿಗಳಿಗೆ ಅವರುಗಳನ್ನು ಆಹಾರವಾಗಿ ನೀಡಬೇಕು ಎಂದು ಸಂಶೋಧಕ ಡಾ. ಬಬನ್ ಜಂಗೋಲೆ ಅಭಿಪ್ರಾಯಪಟ್ಟಿದ್ದಾರೆ.
ಆಫ್ರಿಕಾದಿಂದ ಬಂದಿರುವ ಈ ರಾಕ್ಷಸ ಜಾತಿಯ ಮೀನುಗಳ ಪ್ರಜನನ ಶಕ್ತಿ ಕೂಡ ಹೆಚ್ಚಾಗಿದೆ. ಇದರಿಂದಾಗಿ ಮುಂದಿನ ವರ್ಷದ ವೇಳೆಗೆ ಗೋವಾದ ನದಿಗಳಲ್ಲಿ ಈ ಆತಂಕಕಾರಿ ಮೀನುಗಳ ಸಂಖ್ಯೆ ಭಾರಿ ಹೆಚ್ಚಾಗಿ ಇಲ್ಲಿರುವ ಎಲ್ಲ ಮೀನುಗಳನ್ನು ತಿಂದು ಖಾಲಿ ಮಾಡುವ ಸಾಧ್ಯತೆಯೂ ಇದೆ. ಜೂನ್ 1 ರಿಂದ ರಾಜ್ಯದಲ್ಲಿ 61 ದಿನಗಳ ಕಾಲ ಮೀನುಗಾರಿಕೆಗೆ ನಿರ್ಬಂಧ ಹೇರಲಾಗುತ್ತದೆ. ಈ ಸಂದರ್ಭದಲ್ಲಿ ಮೀನುಗಾರಿಕಾ ಇಲಾಖೆಯು ದಕ್ಷಿಣ ಆಫ್ರಿಕಾದಿಂದ ಬಂದ ಇಂತಹ ಜಾತಿಯ ಮೀನುಗಳನ್ನು ಹಿಡಿಯಬೇಕು ಅಂದಾಗ ಮಾತ್ರ ಸ್ಥಳೀಯ ಸಿಹಿ ನೀರಿನ ಮೀನುಗಳು ಬದುಕುಳಿಯಲು ಸಾಧ್ಯ ಎಂದು ಡಾ. ಬಬನ್ ಜಂಗೋಲೆ ಅಭಿಪ್ರಾಯಪಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
India-Afghanistan: ಆಫ್ಘನ್ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?
Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ
Panaji: ವಿದೇಶಿ ಪ್ರವಾಸಿಗರ ಕಳೆದುಕೊಂಡ ಗೋವಾ: ಆರ್ಥಿಕ ಅಪಾಯದ ಭೀತಿ!
MUST WATCH
ಹೊಸ ಸೇರ್ಪಡೆ
Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ
Rakesh Adiga: ನಾನು ಮಿಡಲ್ ಕ್ಲಾಸ್ ಹುಡುಗ ಮರ್ಯಾದೆ ಉಳಿಸಿ!
Thekkatte: ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿದೆ ಗೋ ಕಳವು ಪ್ರಕರಣ
Bengaluru: 19 ಕಡೆ ಫ್ಲಿಪ್ ಕಾರ್ಟ್, ಅಮೆಜಾನ್ ವ್ಯಾಪಾರಸ್ಥರಿಗೆ ಇ.ಡಿ. ದಾಳಿ ಬಿಸಿ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.