ಬಾತ್ ರೂಮ್ ನಲ್ಲಿ ಬಳಸುವ 100 ರೂ. ಚಪ್ಪಲಿಗೆ 8,990 ರೂ ಬೆಲೆ: ನೆಟ್ಟಿಗರಿಂದ ಟ್ರೋಲ್
Team Udayavani, Oct 18, 2022, 6:12 PM IST
ನವದೆಹಲಿ: ಮಾರುಕಟ್ಟೆಯಲ್ಲಿ ದಿನಕ್ಕೆ ಸಾವಿರಾರು ಹೊಸ ಪ್ರಾಡಕ್ಟ್ ಗಳು ಬರುತ್ತವೆ. ಆನ್ಲೈನ್ ನಲ್ಲಿ ಫ್ಯಾಷನ್ ಸಂಬಂಧಿತ ಸಾಮಗ್ರಿ, ಟ್ರೆಂಡಿ ಬಟ್ಟೆ, ಚಪ್ಪಲಿ ಎಲ್ಲವನ್ನು ಖರೀದಿಸುತ್ತೇವೆ. ಕೆಲ ದಿನಗಳ ಹಿಂದೆ ಬಾಲೆನ್ಸಿಯಾಗ ಕಂಪೆನಿ ಲೇಸ್ ಪ್ಯಾಕ್ ನಂತಿರುವ ದುಬಾರಿ ಬ್ಯಾಗ್ ತಯಾರಿಸಿತ್ತು.
ಸಾಮಾನ್ಯವಾಗಿ ಒಂದು ಚಪ್ಪಲಿಗೆ ಎಷ್ಟಿರುತ್ತದೆ. ಮನೆಯೊಳಗೆ ಅಂದರೆ ಬಾತ್ ರೂಮ್ ಗೆ ಹಾಕಿಕೊಂಡು ಹೋಗುವ ಚಪ್ಪಲಿಗೆ ನಮ್ಮ ಸ್ಥಳೀಯ ಅಂಗಡಿಗಳಲ್ಲಿ 150 ರೂ. ಚೌಕಾಸಿ ಮಾಡಿ 100 ರೂ.ಗೆ ಕೊಳ್ಳುತ್ತೇವೆ ಅಷ್ಟೇ. ಅದು ಬಿಟ್ಟು ಒಂದು ಪೈಸೆಯೂ ಹೆಚ್ಚಿಗೆ ಕೊಡಲ್ಲ. ಆದರೆ ಇಲ್ಲೊಂದು ಸ್ಲಿಪ್ಪರ್ ಚಪ್ಪಲಿಗೆ ಅದು ಕೂಡ ಬಾತ್ ರೂಮ್ ಗೆ ಹಾಕಿಕೊಂಡು ಹೋಗುವ ಹಾಗಿನ ಚಪ್ಪಲಿ ಬೆಲೆ ನೋಡಿದರೆ ಒಮ್ಮೆ ಬೆಚ್ಚಿಬೀಳಬಹುದು.
ಖ್ಯಾತ ಬ್ರ್ಯಾಂಡ್ ಹ್ಯೂಗೋ ಬಾಸ್ ಸ್ಲಿಪ್ಪರ್ ಚಪ್ಪಲಿಯನ್ನು 8,990 ರೂ. ಮಾರುತ್ತಿದೆ. ತನ್ನ ಸೈಟ್ ನಲ್ಲಿ ನೀಲಿ ಬಣ್ಣದ ಚಪ್ಪಲಿಯನ್ನು ಹಾಕಿ ಅದರ ಬೆಲೆಯನ್ನು ಹಾಕಿದೆ. ಈ ಚಪ್ಪಲಿ ನಮ್ಮಲ್ಲಿ ಇದ್ದಿದ್ದರೆ ಅದನ್ನು ಬಾತ್ ರೂಮ್ ನಲ್ಲಿ ಹಾಕಿಕೊಂಡು ಹೋಗುತ್ತಿದ್ದೀವಿ. ಆದರೆ ಹ್ಯೂಗೋ ಬಾಸ್ ಇದನ್ನು ಬ್ರ್ಯಾಂಡ್ ಆಗಿ ಮಾರಾಟ ಮಾಡುತ್ತಿದೆ.
ಸ್ಲಿಪ್ಪರ್ ಚಪ್ಪಲಿಯ ಬೆಲೆಯನ್ನು ನೋಡಿ, ನೆಟ್ಟಿಗರು ನಾನಾ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ. ಟ್ವಿಟರ್ ಬಳಕೆದಾರರೊಬ್ಬರು ಇದು ಬಾತ್ ರೂಮ್ ನಲ್ಲಿ ಹಾಕುವ ಚಪ್ಪಲಿ ಎಂದಿದ್ದಾರೆ. ಮತ್ತೊಬ್ಬರು ಬಾತ್ ರೂಮ್ ನಲ್ಲಿ ಹಾಕುವ ಚಪ್ಪಲಿಗೂ ಒಂದು ದಿನ ಬಂತು ಎಂದು ಬರೆದುಕೊಂಡಿದ್ದಾರೆ. ನಾನು ಇದನ್ನು ನಮ್ಮ ಸಣ್ಣ ವಾರದ ಸಂತೆಯಲ್ಲಿ 50 ರೂ.ಗೆ ಖರೀದಿಸುತ್ತೇನೆ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.
It’s a bathroom slipper dude!!!! https://t.co/7ADKEHF7HY
— Dhivya Marunthiah (@DhivCM) October 17, 2022
Bathroom chappals getting their day in the sun ?? https://t.co/ERF8KpgFMc
— . (@TandooriCutlet) October 17, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.