ಇದು ಪಬ್ಲಿಕ್ ಹೋಟೆಲ್!
Team Udayavani, Mar 6, 2018, 8:15 AM IST
ಅಲಪ್ಪುಳ: ಕೇರಳದಲ್ಲಿ 30 ವರ್ಷ ವಯಸ್ಸಿನ ಆದಿವಾಸಿ ವ್ಯಕ್ತಿ ಹಸಿವು ತಾಳಲಾರದೆ ಅಂಗಡಿಯಲ್ಲಿ ಆಹಾರ ವಸ್ತು ಕದ್ದಿದ್ದಕ್ಕಾಗಿ ಆತನನ್ನು ಥಳಿಸಿ ಕೊಂದಿದ್ದ ಘಟನೆಯು, ದೇಶದಲ್ಲಿ ತಾಂಡವವಾಡುತ್ತಿರುವ ಹಸಿವಿನ ಭೀಕರತೆಯ ಜೊತೆಗೆ ಜನರ ಅಮಾನವೀಯತೆಯನ್ನೂ ಪ್ರದರ್ಶಿಸಿತ್ತು. ಇದೀಗ ಇದೇ ರಾಜ್ಯದ ಅಳಪ್ಪುಳದಲ್ಲಿ, ಹಸಿವು ಮಧು ಅಷ್ಟೇ ಅಲ್ಲ ಹಲವರ ಪ್ರಾಣಗಳನ್ನು ಸದ್ದಿಲ್ಲದೇ ಬಲಿ ಪಡೆಯುತ್ತಿದ್ದು, ಜನರು ಹಸಿವಿನಿಂದ ಕಂಗೆಡಬಾರದು ಎಂಬ ಕಾರಣದಿಂದ ಜನ ತಾವೇ ಸ್ವಇಚ್ಛೆಯಿಂದ ಕೇರಳವನ್ನು ಹಸಿವು ಮುಕ್ತ ರಾಜ್ಯವನ್ನಾಗಿ ಮಾಡುವ ಯೋಜನೆ ಕೈಗೆತ್ತಿಕೊಂಡಿದ್ದಾರೆ.
ಇದಕ್ಕಾಗಿ ಅವರು ರೆಸ್ಟೊರೆಂಟ್‌ವೊಂದನ್ನು ಆರಂಭಿಸಿದ್ದಾರೆ. ಇದರ ಹೆಸರು “ಜನಕೀಯ ಭಕ್ಷಣಶಾಲಾ’. ಈ ಯೋಜನೆಯ ರೂವಾರಿ ಸ್ನೇಹಜನಲಂ ಎಂಬ ಸಿಪಿಎಂ ಸಹಭಾಗಿತ್ವದ ಎನ್‌ಜಿಒ. ಇದಕ್ಕೆ ಬೆಂಬಲವಾಗಿ ನಿಂತಿರುವವರು ಸ್ಥಳೀಯ ಶಾಸಕ, ಹಣಕಾಸು ಸಚಿವ ಥಾಮಸ್ ಐಸಾಕ್. ಈ ಹೋಟೆಲ್‌ಗಳಲ್ಲಿ ಹಣ ಪಡೆಯಲು ಕೌಂಟರ್‌ಗಳು ಇಲ್ಲ. ಕೌಂಟರ್ ಜಾಗದಲ್ಲಿ ಹುಂಡಿಗಳನ್ನು ಇರಿಸಲಾಗಿದೆ. ಜನರು ತಮ್ಮ ಮನಸ್ಸಿಗೆ ತಿಳಿದಷ್ಟು ಹಣವನ್ನು ಈ ಹುಂಡಿಗಳಲ್ಲಿ ಹಾಕಬಹುದು. ಈ ಹೋಟೆಲ್ ದಿನವೊಂದಕ್ಕೆ 2,000 ಜನರಿಗೆ ಅಡುಗೆ ತಯಾರಿಸಿ, ವಿತರಿಸುವ ಸಾಮರ್ಥ್ಯ ಹೊಂದಿದೆ. ಇದನ್ನು 11.25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದಕ್ಕೆ ಕೇರಳ ರಾಜ್ಯ ಹಣಕಾಸು ನಿಗಮವು ಆರ್ಥಿಕ ನೆರವು ನೀಡಿದೆ. ಈ ಹೋಟೆಲ್ ಹಿಂಭಾಗದಲ್ಲಿ 2.5 ಎಕರೆ ವಿಸ್ತೀಣ ಪ್ರದೇಶದಲ್ಲಿ ಸಾವಯವ ತರಕಾರಿ ತೋಟವನ್ನೂ ಆರಂಭಿಸಲಾಗಿದೆ. ಇಲ್ಲಿ ಜನರು ತರಕಾರಿಗಳನ್ನೂ ಕೊಳ್ಳಬಹುದು ಎಂದು ಸಂಸ್ಥೆ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Dr. Manmohan Singh; ನಾಳೆ ನಿಗಮಬೋಧ್ ಘಾಟ್ ಚಿತಾಗಾರದಲ್ಲಿ ಮಾಜಿ ಪ್ರಧಾನಿ ಅಂತ್ಯಕ್ರಿಯೆ
Video: ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ನ್ಯೂಸ್ ಆ್ಯಂಕರ್.!
Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ
New Delhi: ಸಂಸತ್ತಿನ ಬಳಿ ಬೆಂಕಿ ಹಚ್ಚಿಕೊಂಡಿದ್ದ ಯುವಕ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Kasaragod Crime News: ಅವಳಿ ಪಾಸ್‌ಪೋರ್ಟ್; ಕೇಸು ದಾಖಲು
Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.