ಸೈಯದ್ ಅಲಿ ಶಾ ಗೀಲಾನಿಗೆ ತೀವ್ರ ಎದೆ ನೊವು; ಐಸಿಯುಗೆ ದಾಖಲು
Team Udayavani, Feb 2, 2017, 12:05 PM IST
ಶ್ರೀನಗರ : ಎಂಬತ್ತರ ಹರೆಯದ ಹಿರಿಯ ಹುರಿಯತ್ ನಾಯಕ ಸೈಯದ್ ಅಲಿ ಶಾ ಗೀಲಾನಿ ಅವರಿಗೆ ನಿನ್ನೆ ಬುಧವಾರ ತಡ ರಾತ್ರಿ ತೀವ್ರ ಎದೆ ನೋವು ಕಾಣಿಸಿಕೊಂಡ ಪ್ರಯುಕ್ತ ಅವರನ್ನು ಒಡನೆಯೇ ಶೇರ್ ಎ ಕಾಶ್ಮೀರ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸಸ್ (ಸ್ಕಿಮ್ಸ್)ಗೆ ಸೇರಿಸಲಾಗಿದೆ.
ಗೃಹ ಬಂಧನಲ್ಲಿ ಇರಿಸಲಾಗಿದ್ದ ಗೀಲಾನಿ ಅವರನ್ನು ಪೊಲೀಸ್ ಕಾವಲಿನಲ್ಲಿ ರಾತ್ರಿ ಸುಮಾರು 11.45ರ ಹೊತ್ತಿಗೆ ಆಸ್ಪತ್ರೆಗೆ ಸೇರಿಸಲಾಯಿತೆಂದು ಎಎನ್ಐ ವರದಿ ಮಾಡಿದೆ.
ನಸುಕಿನ 2.45ರ ಹೊತ್ತಿಗೆ ಗೀಲಾನಿ ಅವರನ್ನು ಸ್ಕಿಮ್ಸ್ನ ಐಸಿಯುಗೆ ಸೇರಿಸಲಾಗಿ ಅಲ್ಲಿ ಅವರನ್ನು ವಿವಿಧ ಬಗೆಯ ವೈದ್ಯಕೀಯ ಪರೀಕ್ಷೆಗೆ ಗುರಿಪಡಿಸಲಾಯಿತು. ಪರಿಣತರ ವೈದ್ಯರು ಗೀಲಾನಿ ಅವರ ದೇಹಾರೋಗ್ಯದ ಮೇಲೆ ತೀವ್ರ ನಿಗಾ ಇರಿಸಿದ್ದಾರೆ.
ಗೀಲಾನಿ ಅವರ ದೇಹಾರೋಗ್ಯ ಈಗ ಸ್ಥಿರವಾಗಿದ್ದು ಅವರು ಬೇಗನೆ ಗುಣಮುಖರಾಗುವಂತೆ ಪ್ರಾರ್ಥಿಸುವಂತೆ ಹುರಿಯತ್ ವಕ್ತಾರ ಜನರನ್ನು ಕೋರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೋಮ್ ವರ್ಕ್ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ
AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ ಕೇಜ್ರಿವಾಲ್ ಆಪ್ತ ಕೈಲಾಶ್ ಗೆಹ್ಲೋಟ್!
Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಸಾ*ವು
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
BGT 2024: ಐಪಿಎಲ್ ಹರಾಜಿನ ಕಾರಣಕ್ಕೆ ತಂಡ ತೊರೆದ ಆಸ್ಟ್ರೇಲಿಯಾದ ಸಹಾಯಕ ಕೋಚ್!
Manipal: ಆರ್ಯಭಟ ಪ್ರಶಸ್ತಿ ಪುರಸ್ಕೃತ, ಯಕ್ಷಗಾನ ಕಲಾವಿದ ಚೇರ್ಕಾಡಿ ಕಮಲಾಕ್ಷ ಪ್ರಭು ನಿಧನ
Hosanagar: ಶೈಕ್ಷಣಿಕ ಪ್ರವಾಸಕ್ಕೆ ತೆರಳುತ್ತಿದ್ದ ಬಸ್ ಅಪಘಾತ: 29 ಮಂದಿಗೆ ಗಾಯ
ಸವದತ್ತಿ:ರೈಲು ಮಾರ್ಗ- ಸವದತ್ತಿಗೇ ಜಾಸ್ತಿ ಲಾಭ! ಆರ್ಥಿಕ ಅಭಿವೃದ್ಧಿಗೆ ನೆರವು…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.