Hybrid nanoparticles ಕ್ಯಾನ್ಸರ್ ನಾಶಕ್ಕೆ ಹೊಸ ಕ್ರಮ: ಐಐಎಸ್‌ಸಿ ಸಾಧನೆ
ಹೈಬ್ರಿಡ್ ನ್ಯಾನೋಪಾರ್ಟಿಕಲ್ಸ್ ಮೂಲಕ ಕ್ಯಾನ್ಸರ್ ಕೋಶ ಪತ್ತೆ, ನಾಶಕ್ಕೆ ನೆರವು
Team Udayavani, Sep 11, 2023, 7:50 PM IST
ನವದೆಹಲಿ: ಬೆಂಗಳೂರಿನ ಐಐಎಸ್ಸಿ (ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್) ಮಹತ್ವದ ಸಂಶೋಧನೆಯೊಂದನ್ನು ಮಾಡಿದೆ. ಎಲ್ಲ ಅಂದುಕೊಂಡಂತೆ ನಡೆದರೆ ಭವಿಷ್ಯದಲ್ಲಿ ಕ್ಯಾನ್ಸರ್‌ಗೆ ಅತ್ಯಂತ ಪರಿಣಾಮಕಾರಿ, ಸುಲಭ ಚಿಕಿತ್ಸೆ ಸಿಗಲಿದೆ. ಅಂತಹದ್ದೊಂದು ಪರಿಣಾಮಕಾರಿ ಕ್ಯಾನ್ಸರ್ ಕೋಶಗಳ ಪತ್ತೆ ಮತ್ತು ನಾಶ ಮಾಡುವ ಕ್ರಮ-ಹೈಬ್ರಿಡ್ ನ್ಯಾನೋಪಾರ್ಟಿಕಲ್ಸ್ ಅನ್ನುಐಐಎಸ್‌ಸಿ ಸಿದ್ಧಪಡಿಸಿದೆ.
ಹೈಬ್ರಿಡ್ ನ್ಯಾನೋಪಾರ್ಟಿಕಲ್ಸ್‌ನಲ್ಲಿ ಚಿನ್ನ ಮತ್ತು ತಾಮ್ರದ ಸಲ್ಫೆ„ಡ್ ಅನ್ನು ಅಡಕ ಮಾಡಲಾಗಿದೆ. ಕೇವಲ 8 ನ್ಯಾನೋಮೀಟರ್ ಗಾತ್ರದ ಈ ಕಣಗಳಿಗೆ ಸುಲಭವಾಗಿ ಕ್ಯಾನ್ಸರ್ ಕೋಶಗಳನ್ನು ಪತ್ತೆ ಮಾಡಿ, ನಾಶ ಮಾಡುವ ಸಾಮರ್ಥ್ಯವಿದೆ. ಈಗಾಗಲೇ ಇದನ್ನು ಗರ್ಭಕೋಶ ಮತ್ತು ಶ್ವಾಸಕೋಶದ ಕ್ಯಾನ್ಸರ್ ರೋಗದ ಮೇಲೆ ಪ್ರಾಯೋಗಿಕವಾಗಿ ಬಳಸಲಾಗಿದೆ. ಈ ಕುರಿತ ಮಾಹಿತಿ ಎಸಿಎಸ್ ಅಪ್ಲೆ„ಡ್ ನ್ಯಾನೋ ಮೆಟೀರಿಯಲ್ಸ್ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ.
ಹೇಗೆ ಕೆಲಸ ಮಾಡುತ್ತೆ?:
ಹೈಬ್ರಿಡ್ ನ್ಯಾನೋಪಾರ್ಟಿಕಲ್ಸ್‌ಗಳನ್ನು ಬೆಳಕಿಗೆ ಒಡ್ಡಿದಾಗ ಅವು ಉಷ್ಣವನ್ನು ಉತ್ಪತ್ತಿ ಮಾಡುತ್ತವೆ. ಹಾಗೆಯೇ ಬೆಳಕನ್ನು ಹೀರಿಕೊಂಡು ಶರೀರದ ಕೋಶಗಳೊಳಗೆ ಸರಾಗವಾಗಿ ಚಲಿಸುತ್ತವೆ. ಅದರಿಂದ ಎಲ್ಲಿ ಕ್ಯಾನ್ಸರ್ ಕೋಶಗಳಿವೆ ಎಂಬ ಚಿತ್ರಗಳು ಲಭ್ಯವಾಗುತ್ತವೆ. ಇದೇ ವೇಳೆ ಬೆಳಕನ್ನು ಹೀರಿಕೊಳ್ಳುವುದರಿಂದ ಉಂಟಾಗುವ ಉಷ್ಣಾಂಶ ಕೋಶಗಳನ್ನು ನಾಶ ಮಾಡುತ್ತವೆ.
ಈ ಹಿಂದೆಯೇ ಈ ಕ್ರಮವನ್ನು ಸಿದ್ಧಪಡಿಸಲಾಗಿತ್ತು. ಆಗಿನ ನ್ಯಾನೋಪಾರ್ಟಿಕಲ್ಸ್‌ಗಳ ಗಾತ್ರ ತುಸು ದೊಡ್ಡದಾಗಿತ್ತು. ಹೊಸತಾಗಿ ವಿಶೇಷ ತಂತ್ರಜ್ಞಾನ ಬಳಸಿ ಚಿನ್ನದ ಕಣಗಳ ಗಾತ್ರವನ್ನು ಅತಿಸೂಕ್ಷ¾ಗೊಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.