![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Jun 4, 2022, 11:54 AM IST
ಹೈದರಾಬಾದ್: ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ಎರಡನೇ ಶಂಕಿತನನ್ನು ಶನಿವಾರ ಬಂಧಿಸಿದ್ದಾರೆ. ಒಬ್ಬ ಆರೋಪಿಯನ್ನು ಶುಕ್ರವಾರ ಬಂಧಿಸಲಾಗಿದ್ದು ಬಂಧಿತರ ಸಂಖ್ಯೆ ಮೂರಕ್ಕೇರಿದೆ. ಆರೋಪಿಗಳನ್ನು ಸದುದ್ದೀನ್ ಮಲಿಕ್, ಸಾದುದ್ದೀನ್ ಮಲಿಕ್ ಮತ್ತು ಒಮರ್ ಖಾನ್ ಎಂದು ಗುರುತಿಸಲಾಗಿದ್ದು, ಮೂವರು ಅಪ್ರಾಪ್ತ ವಯಸ್ಕರಾಗಿದ್ದಾರೆ.
ಪಾರ್ಟಿಗಾಗಿ ಕ್ಲಬ್‌ಗೆ ಹೋಗಿದ್ದ 17 ವರ್ಷದ ಹುಡುಗಿಯನ್ನು ಮೇ 28, ಶನಿವಾರದಂದು ಕಾರಿನೊಳಗೆ ಐದು ಜನರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಲಾಗಿದೆ. ಆರಂಭದಲ್ಲಿ ಈ ಕೃತ್ಯವು ಓರ್ವ ಶಾಸಕನಿಗೆ ಸೇರಿದ ಕೆಂಪು ಮರ್ಸಿಡಿಸ್‌ನೊಳಗೆ ನಡೆದಿದೆ ಎಂದು ಹೇಳಲಾಗಿತ್ತು. ಆದರೆ ಇನ್ನೊಂದು ವಾಹನ ಇನ್ನೋವಾದಲ್ಲಿ ಕೃತ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಗಿದ್ದೇನು?
ಮೇ 28 ರಂದು 17 ವರ್ಷದ ಯುವತಿ ಹೈದರಾಬಾದ್‌ನ ಪಬ್ ಗೆ ಹೋಗಿದ್ದಳು. ಅಲ್ಲಿ ಹುಡುಗನೊಬ್ಬನನ್ನು ಅವಳು ಭೇಟಿಯಾಗಿದ್ದು, ಆತ ಆಕೆಯನ್ನು ಮನೆಗೆ ಬಿಡುವುದಾಗಿ ಭರವಸೆ ನೀಡಿದ್ದ. ನಂತರ ಅವಳು ಅವನ ಮತ್ತು ಅವನ ಸ್ನೇಹಿತರೊಂದಿಗೆ ಕ್ಲಬ್ ತೊರೆದಿದ್ದಳು. ಆಕೆಯನ್ನು ಕರೆದುಕೊಂಡು ಬಂದ ಐವರು ಆರೋಪಿಗಳು ಜುಬಿಲಿ ಹಿಲ್ಸ್ ನಲ್ಲಿ ಕಾರು ನಿಲ್ಲಿಸಿ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು.
ಇದನ್ನೂ ಓದಿ:ಕ್ಷಮಾ ಸ್ವಯಂ ವಿವಾಹಕ್ಕೆ ಅಡ್ಡಿ: ದೇವಸ್ಥಾನದಲ್ಲಿ ವಿವಾಹಕ್ಕೆ ಅವಕಾಶವಿಲ್ಲವೆಂದ ಬಿಜೆಪಿ
ಬಾಲಕಿಯ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಐವರು ಆರೋಪಿಗಳ ಪೈಕಿ ಮೂವರು ಅಪ್ರಾಪ್ತರು. ಅಕ್ರಮ ಎಸಗಿದ ಇನ್ನೋವಾ ಕಾರು ಸರ್ಕಾರಿ ಸಂಸ್ಥೆಯ ಪ್ರಮುಖ ಸ್ಥಾನದಲ್ಲಿರುವ ಟಿಆರ್‌ಎಸ್ ಮುಖಂಡರದ್ದಾಗಿದೆ. ಅಪ್ರಾಪ್ತ ವಯಸ್ಸಿನ ಆತನ ಮಗನನ್ನು ಬಂಧಿಸುವ ಪ್ರಯತ್ನ ನಡೆಯುತ್ತಿದೆ. ಮತ್ತೊಬ್ಬ ಅಪ್ರಾಪ್ತ ಆರೋಪಿ ಜಿಎಚ್‌ಎಂಸಿ ಕಾರ್ಪೊರೇಟರ್ ಪುತ್ರ ಎನ್ನಲಾಗಿದೆ.
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.