![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Apr 16, 2023, 10:22 AM IST
ಹೈದರಾಬಾದ್: ಮರದ ಡಿಪೋವೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಒಂದೇ ಕುಟುಂಬದ ಮೂವರು ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ಭಾನುವಾರ (ಏ.16 ರಂದು) ಮುಂಜಾನೆ ಹೈದರಾಬಾದ್ ನ ಕುಶೈಗುಡದಲ್ಲಿ ನಡೆದಿರುವುದು ವರದಿಯಾಗಿದೆ.
ಮೃತರನ್ನು ವಾರಂಗಲ್ ಮೂಲದವರರಾದ ಸುರೇಶ್, ಸುಮಾ ಮತ್ತು ಬಾಬು ಎಂದು ಗುರುತಿಸಲಾಗಿದೆ.
ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಟಿಂಬರ್ ಡಿಪೋದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ದಟ್ಟ ಹೊಗೆ ಕಾಣಿಸಿಕೊಂಡಿದೆ. ಹೊಗೆ ಪಕ್ಕದಲ್ಲೇ ಇರುವ ಬಿಲ್ಡಿಂಗ್ ಗೂ ವ್ಯಾಪಿಸಿದೆ. ಬಿಲ್ಡಿಂಗ್ ನ ಎರಡನೇ ಮಹಡಿಯಲ್ಲಿ ಕುಟುಂಬವೊಂದು ವಾಸಿಸುತ್ತಿದ್ದು ದಟ್ಟ ಹೊಗೆಯ ಕಾರಣ ಮೂವರಿಗೆ ಉಸಿರುಗಟ್ಟಲು ಶುರುವಾಗಿದೆ. ಈ ವೇಳೆ ಹೊಗೆಯ ನಡುವೆಯೇ ಮನೆಯಿಂದ ಹೊರಬರಲು ಯತ್ನಿಸಿದ ಮೂವರು ಒಂದನೇ ಮಹಡಿಗೆ ಬರುವ ವೇಳೆಗೆ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
ಬೆಂಕಿ ನಂದಿಸಿದ ಬಳಿಕ ಕುಟುಂಬ ಇರುವ ಬಗ್ಗೆ ತಿಳಿದ ಅಗ್ನಿಶಾಮಕ ಮತ್ತು ಡಿಆರ್‌ಎಫ್ ಸಿಬ್ಬಂದಿ ಕಟ್ಟಡದೊಳಗೆ ಧಾವಿಸಿದ್ದಾರೆ. ಈ ವೇಳೆ ಮೂವರು ಉಸಿರುಗಟ್ಟಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಕುಶೈಗುಡ ಎಸಿಪಿ ವೈ ವೆಂಕಟ್ ರೆಡ್ಡಿ ಹೇಳಿದ್ದಾರೆ.
Pariksha Pe Charcha: ಸಾರ್ಟ್‌ಫೋನ್‌ಗಿಂತಲೂ ನೀವು ಸಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
You seem to have an Ad Blocker on.
To continue reading, please turn it off or whitelist Udayavani.