ಹ್ಯುಂಡೈ ವರ್ನಾಗೆ ಇಂಡಿಯನ್ ಕಾರ್ ಆಫ್ ದಿ ಈಯರ್ ಪ್ರಶಸ್ತಿ
Team Udayavani, Dec 16, 2017, 4:17 PM IST
ನವದೆಹಲಿ: ಪ್ರಮುಖ ಕಾರು ತಯಾರಕ ಸಂಸ್ಥೆ ಹ್ಯುಂಡೈ ಮೋಟರ್ ಇಂಡಿಯಾ ಲಿ., (ಎಚ್‌ಎಂಐಎಲ್)ನ ನೆಕ್ಸ್‌ಟ್ ಜೆನ್ ವರ್ನಾ “2018ರ ಇಂಡಿಯನ್ ಕಾರ್ ಆಫ್ ದಿ ಈಯರ್’ (ಐಸಿಒಟಿವೈ) ಪ್ರಶಸ್ತಿಗೆ ಭಾಜನವಾಗಿದೆ.
ಸತತವಾಗಿ 5 ಬಾರಿ ಐಸಿಒಟಿವೈ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡು ಸಾಧನೆ ಮೆರೆದಿರುವ ಹ್ಯುಂಡೈ ಸಂಸ್ಥೆ 2008, 2014, 2015, 2016 ಮತ್ತು 2018ರ ಪ್ರಶಸ್ತಿಯನ್ನು ಅನುಕ್ರಮವಾಗಿ ವರ್ನಾ, ಕ್ರೆಟಾ, ಎಲೈಟ್ ಐ20, ಗ್ರಾಂಡ್ ಐ10 ಹಾಗೂ ಐ10 ಕಾರುಗಳು ಪಡೆದಿವೆ.
ಗುರುವಾರ ದೆಹಲಿಯಲ್ಲಿ ಪ್ರಶಸ್ತಿ ಸೀಕರಿಸಿ ಮಾತನಾಡಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ವೈ.ಕೆ. ಕೂ, ಆಟೋಮೊಟಿವ್ ಕ್ಷೇತ್ರದ ಪ್ರತಿಷ್ಠಿತ ಐಸಿಒಟಿವೈ ಪ್ರಶಸ್ತಿಯನ್ನು ನಮ್ಮ ಸಂಸ್ಥೆಯ ಕಾರುಗಳು ಗೆಲ್ಲುತ್ತಿರುವುದು ಅತೀವ ಸಂತಸ ಹಾಗೂ ಗೌರವ ತಂದಿದೆ.
ಮೇಕ್ ಇನ್ ಇಂಡಿಯಾ ಯೋಜನೆಯಡಿ ಮೇಡ್ ಫಾರ್ ದಿ ವರ್ಲ್ಡ್ ಉತ್ಪನ್ನವಾಗಿ ನೆಕ್ಟ್ ಜೆನ್ ವರ್ನ ಹೊರಹೊಮ್ಮಿರುವುದು ಹಾಗೂ ಸೆಡಾನ್ ಕಾರುಗಳಲ್ಲಿ ತಂತ್ರಜ್ಞಾನ, ಗುಣಮಟ್ಟ ಜನರ ಮೆಚ್ಚುಗೆ ಗಳಿಸಿರುವುದು ಶ್ಲಾಘನೀಯ ಎಂದರು.
ಜೆಕೆ ಟೈರ್ ಮತ್ತು ಇಂಡಸ್ಟ್ರೀಸ್ ಲಿ., ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ರಘುಪತಿ ಸಿಂಘಾನಿಯ ಅವರು ಹ್ಯುಂಡೈ ವರ್ನದ ತಾಂತ್ರಿಕ, ವಿನ್ಯಾಸ, ಕಾಸ್ಟ್ ಎಫೆಕ್ಟಿವ್‌ನೆಸ್, ಸ್ಥಳೀಯ ಸ್ಥಿತಿಗತಿಗಳಿಗೆ ಹೊಂದಿಕೊಳ್ಳುವಿಕೆ ಗ್ರಾಹಕರಿಗೆ ಸಂತೃಪ್ತಿ ತಂದಿವೆ.
ಆದ್ದರಿಂದ ಐದು ಬಾರಿ ಬೇರೆ ಬೇರೆ ಸಂಸ್ಥೆಯ ಕಾರುಗಳು ಐಎಂಒಟಿವೈ ಪ್ರಶಸ್ತಿಗೆ ಭಾಜನವಾಗಿವೆ. ಅಲ್ಲದೆ, ಆಟೋಮೊಬೈಲ್ ಉದ್ಯಮದಲ್ಲಿ ಐಸಿಒಟಿವೈ ಹಾಗೂ ಇಂಡಿಯನ್ ಮೋಟರ್ ಆಫ್ ದಿ ಯಿಯರ್ (ಐಎಂಒಟಿವೈ) ಎರಡೂ ಸಮನಾರ್ಥವಾಗಿದ್ದು ವರ್ನ 2018ರ ಐಸಿಒಟಿವೈ ಪ್ರಶಸ್ತಿ ಪಡೆದಿರುವುದು ಸಂತಸ ತಂದಿದೆ ಎಂದರು.
ಈ ಸಂದರ್ಭದಲ್ಲಿ ಐಸಿಒಟಿವೈ ಸಂಸ್ಥಾಪಕ ಸದಸ್ಯ ಮತ್ತು ತೀರ್ಪುಗಾರರ ಮಂಡಳಿ ಅಧ್ಯಕ್ಷ ಬಾಬ್ ರುಪಾನಿ, ಆಟೋ ಟುಡೆ ಸಂಪಾದಕ ಯೋಗೆಂದ್ರ ಪ್ರತಾಪ್, ಹೆಚ್‌ಎಂಐಎಲ್ ಇಡಿ (ಮಾರಾಟ) ಎಸ್.ಜೆ. ಹ, ನಿರ್ದೇಶಕ (ಮಾರುಕಟ್ಟೆ) ರಾಕೇಶ್ ಶ್ರೀವಾಸ್ತವ ಹಾಗೂ ತೀರ್ಪುಗಾರರ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…
Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gold Scam; ವೈದ್ಯ ದಂಪತಿಗೂ ₹6.2 ಕೋಟಿ ವಂಚಿಸಿದ್ದ ಐಶ್ವರ್ಯ
Udupi: ವಾರಾಹಿ ನೀರು ನಗರಕ್ಕೆ ಇನ್ನೂ ಬಂದಿಲ್ಲ, ಅಗೆಯುವುದೂ ನಿಂತಿಲ್ಲ
Mangaluru: ಮಹಾಕಾಳಿಪಡ್ಪು ರೈಲ್ವೇ ಅಂಡರ್‌ಪಾಸ್; ಕುಂಟುತ್ತಿರುವ ಕಾಮಗಾರಿಗೆ ಬೇಕಿದೆ ವೇಗ
ಮುದ್ರಣ ಕಾಶಿಯಲ್ಲಿ ಕ್ಯಾಲೆಂಡರ್ ಮುದ್ರಣ ಭರಾಟೆ; ಕ್ಯಾಲೆಂಡರ್-ತೂಗು ಪಂಚಾಂಗಗಳಿಗೆ ಖ್ಯಾತಿ
Manmohan Singh: ನವಭಾರತದ ಚಾಣಕ್ಯ ಅಸ್ತಂಗತ: ದೇಶಕ್ಕೆ ತುಂಬಲಾರದ ನಷ್ಟ: ಯು.ಟಿ. ಖಾದರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.