ನಾನು ಯಾವಾಗಲೂ ದೇವಸ್ಥಾನಗಳಿಗೆ ಹೋಗಲು ಬಯಸುತ್ತೇನೆ : ಪ್ರಧಾನಿ ಮೋದಿ
Team Udayavani, Mar 27, 2021, 2:38 PM IST
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸದ್ಯ ಬಾಂಗ್ಲಾದೇಶದ ಪ್ರವಾಸದಲ್ಲಿದ್ದಾರೆ. ಇದೇ ವೇಳೆ ಒರಕಂಡಿಯಲ್ಲಿರುವ ಮಟುವಾ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ಪ್ರದೇಶವು ಮಟುವಾ ಜನಾಂಗಕ್ಕೆ ಬಹಳ ಪ್ರಮುಖವಾದ ಸ್ಥಳ. ಇದು ಮಟುವಾ ಜನಾಂಗದ ಧಾರ್ಮಿಕ ಗುರು ಮತ್ತು ಹಿಂದು ಆಧ್ಯಾತ್ಮಿಕ ಗುರು ಹರಿಚಂದ್ ಠಾಕೂರ್ ಜನ್ಮ ಸ್ಥಳವಾಗಿದೆ.
ದೇವಸ್ಥಾನಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದ ಮೋದಿ, ನಾನು ಯಾವಾಗಲೂ ದೇವಾಲಯಗಳಿಗೆ ಹೋಗುವುದಕ್ಕೆ ಬಯಸುತ್ತೇನೆ ಎಂದಿದ್ದಾರೆ. 2015ರಲ್ಲಿ ನಾನು ಬಾಂಗ್ಲಾದೇಶಕ್ಕೆ ಬಂದಾಗ ಮಟುವಾ ದೇವಾಲಯಕ್ಕೆ ಹೋಗಬೇಕೆಂದು ಬಯಸಿದ್ದೆ. ಅದು ಇಂದು ನನಸಾಗಿದೆ ಎಂದಿದ್ದಾರೆ. ಇಲ್ಲಿನ ಒರಕಂಡಿ ಪ್ರದೇಶದಲ್ಲಿ ನೂರಾರು ಹಿಂದೂ ಮಟುವಾ ಸಮುದಾಯದವರಿದ್ದಾರೆ, ಅದರಲ್ಲಿ ಹೆಚ್ಚಿನವರು ಪಶ್ಚಿಮ ಬಂಗಾಳದ ನಿವಾಸಿಗಳು ಇದ್ದಾರೆ ಎಂದು ಮೋದಿ ಹೇಳಿದ್ದಾರೆ.
ಇಂದು ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಮೊದಲ ಹಂತದ ಚುನಾವಣೆ ಪ್ರಾರಂಭವಾಗಿದ್ದು, ಇದೇ ಹಿನ್ನೆಲೆಯಲ್ಲಿಯೇ ಬಾಂಗ್ಲಾದೇಶದ ಮಟುವಾ ಸಮುದಾಯವನ್ನು ಭೇಟಿ ಮಾಡಿರುವ ಮೋದಿ, ಮತ ಸೆಳೆಯುವ ತಂತ್ರ ಇದ್ದರೂ ಇರಬಹುದು ಎಂದು ರಾಜಕೀಯ ತಜ್ಙರು ಅಭಿಪ್ರಾಯ ಪಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.