ನನ್ನನ್ನು ಭಯೋತ್ಪಾದಕನಂತೆ ನೋಡಲಾಗುತ್ತಿದೆ: ಕಣ್ಣೀರಿಟ್ಟ ಎಸ್‌ಪಿ ನಾಯಕ ಆಜಂ ಖಾನ್
Team Udayavani, Apr 20, 2019, 11:06 AM IST
ರಾಮಪುರ, ಉತ್ತರ ಪ್ರದೇಶ : ‘ಸರಕಾರವು ನನ್ನನ್ನು ಭಯೋತ್ಪಾದಕನಂತೆ ಕಾಣುತ್ತಿದೆ. ನನ್ನ ಬೆಂಬಲಿಗರು ಮತ್ತು ಸಹವರ್ತಿಗಳ ವಿರುದ್ಧ ಆಡಳಿತೆಯು ಭಾರೀ ಕಾರ್ಯಾಚರಣೆಯನ್ನೇ ಕೈಗೊಂಡಿದೆ’ ಎಂದು ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್ ಕಣ್ಣೀರಿಡುತ್ತಾ ಭಾವನಾತ್ಮಕವಾಗಿ ಹೇಳಿದ್ದಾರೆ.
ರಾಮಪುರದಲ್ಲಿ ನಿನ್ನೆ ಶುಕ್ರವಾರ ರಾಲಿಯಲ್ಲಿ ಮಾತನಾಡುತ್ತಿದ್ದ ಆಜಂ ಖಾನ್, ‘ನನ್ನನ್ನು ರಾಷ್ಟ್ರ ವಿರೋಧಿ ಅಥವಾ ರಾಷ್ಟ್ರ ದ್ರೋಹಿ ಎಂಬಂತೆ ನೋಡಲಾಗುತ್ತಿದೆ. ಈ ಜಗತ್ತಿನ ಅತೀ ದೊಡ್ಡ ಭಯೋತ್ಪಾದಕ ನಾನೇ ಎಂಬ ರೀತಿಯಲ್ಲಿ ನನ್ನನ್ನು ಕಾಣಲಾಗುತ್ತಿದೆ. ಒಂದೊಮ್ಮೆ ಆಡಳಿತೆಯ ಅಧಿಕಾರದ ಮಿತಿಗೆ ಒಳಪಡುತ್ತಿದ್ದರೆ ಅದು ನನ್ನನ್ನು ಬಹಿರಂಗವಾಗಿ ಗುಂಡಿಕ್ಕಿ ಸಾಯಿಸುತ್ತಿತ್ತೇನೋ’ ಎಂದು ಹೇಳಿದರು.
‘ಮತದಾನಕ್ಕೆ ಕೇವಲ ಮೂರು ದಿನಗಳಿರುವಾಗ ಚುನಾವಣಾ ಆಯೋಗ ನನ್ನ ಮೇಲೆ ಪ್ರಚಾರ ನಿಷೇಧವನ್ನು ಹೇರಿರುವುದನ್ನು ಕಂಡರೆ ಅವರ ಉದ್ದೇಶ ಏನು ಎಂಬುದು ಸ್ಪಷ್ಟವಾಗುತ್ತಿದೆ. ಈ ನಿಷೇಧದ ವೇಳೆ ನಾನು ಎಲ್ಲಿಗೂ ಹೋಗುವಂತಿಲ್ಲ; ಯಾರನ್ನೂ ಭೇಟಿಯಾಗುವಂತಿಲ್ಲ, ಯಾವುದೇ ರಾಲಿಯಲ್ಲಿ ಪಾಲ್ಗೊಳ್ಳುವಂತಿಲ್ಲ ಮತ್ತು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುವಂತಿಲ್ಲ’ ಎಂದು ಆಜಂ ಖಾನ್ ಹೇಳಿದರು.
‘ನನ್ನ ಕ್ಷೇತ್ರವಾಗಿರುವ ರಾಮಪುರವನ್ನು ಆಡಳಿತೆಯು ಬಹುತೇಕ ಕಂಟೋನ್ಮೆಂಟ್ ಆಗಿ ಪರಿವರ್ತಿಸಿದೆ’ ಎಂದು ಖಾನ್ ಆರೋಪಿಸಿದರು.
ಕಳೆದ ಎಪ್ರಿಲ್ 15ರಂದು ಆಜಂ ಖಾನ್ ಅವರು ರಾಮಪುರ ಕ್ಷೇತ್ರದಲ್ಲಿನ ತನ್ನ ಎದುರಾಳಿ ಬಿಜೆಪಿ ಅಭ್ಯರ್ಥಿ ನಟಿ ಜಯಪ್ರದಾ ವಿರುದ್ಧ ತೀರ ಲೈಂಗಿಕ ಅವಹೇಳನಕಾರಿ ಮಾತುಗಳನ್ನು ಆಡಿ ನಿಷೇಧಕ್ಕೆ ಗುರಿಯಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Boxing Day Test: ನೀಗಲಿ ಭಾರತದ ಬ್ಯಾಟಿಂಗ್ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್
Covid: ಎನ್-95 ಮಾಸ್ಕ್ ಅವ್ಯವಹಾರ: ಆತುರದ ಕ್ರಮ ಕೈಗೊಳ್ಳದಂತೆ ಸೂಚನೆ
Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ
Koteshwar: ಬೀಜಾಡಿಯ ಯೋಧ ಅನೂಪ್ ಪೂಜಾರಿ ಮೃತ್ಯು
Name Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಪ್ರತಾಪ್ ಸಿಂಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.