ನಾನು ಅವನಲ್ಲ, ಅವಳು; ನನ್ನ ಮದುವೆ ಅಸಿಂಧುಗೊಳಿಸಿ!
Team Udayavani, Apr 4, 2017, 3:45 AM IST
ಮುಂಬಯಿ : ಆತ 31 ವರ್ಷದ ಉದ್ಯಮಿ. ತಾನು 11 ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗಿಯನ್ನು ಕಳೆದ ವರ್ಷವಷ್ಟೇ ಮದುವೆಯಾಗಿದ್ದ. ಇದೀಗ ತನ್ನ ಮದುವೆಯನ್ನೇ ಅಸಿಂಧುಗೊಳಿಸಬೇಕು ಎಂದು ಕೋರಿ ಕೋರ್ಟ್ ಮೆಟ್ಟಿಲೇರಿದ್ದಾನೆ!
ಅಚ್ಚರಿಯಾಯಿತೇ? ಆಗಲೇಬೇಕು. ಏಕೆಂದರೆ, ಆತ ನ್ಯಾಯಾಲಯದಲ್ಲಿ ವಿಚಿತ್ರವಾದ ಮುಂದಿಟ್ಟಿದ್ದಾನೆ. ಭಾರತ ಕಂಡ ಅಪರೂಪದಲ್ಲಿ ಅಪರೂಪ ಎಂಬಂಥ ಪ್ರಕರಣವಿದು. “ನಾನು ಜನಿಸಿದ್ದೇ ಹೆಣ್ಣಾಗಿ. ಮದುವೆಗೆ ಒಂದು ವರ್ಷ ಮುನ್ನ ಲಿಂಗ ಪರಿವರ್ತನೆ ಮಾಡಿಸಿ ಕೊಂಡಿದ್ದೆ. ಆದರೆ, ಅದು ಯಶಸ್ವಿಯಾದಂತೆ ಕಾಣುತ್ತಿಲ್ಲ. ತನಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ನನ್ನ ಮದುವೆಯನ್ನು ಅಸಿಂಧು ಎಂದು ಘೋಷಿಸಿ’ ಎಂದು ಆತ ಕೋರಿದ್ದಾನೆ.
ಪ್ರೀತಿಗಾಗಿ ಲಿಂಗ ಪರಿವರ್ತನೆ: ಹೆಣ್ಣಾಗಿಯೇ ಹುಟ್ಟಿದ್ದರೂ, “ತಾನು ಹೆಣ್ಣಿನ ಶರೀರದಲ್ಲಿ ಸೇರಿಕೊಂಡಿರುವ ಗಂಡು’ ಎಂದೇ ಭಾವಿಸಿಕೊಂಡು ಬೆಳೆದಿದ್ದ ಆತ. ಜತೆಗೆ 11 ವರ್ಷಗಳ ಕಾಲ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆಕೆಯೂ ಈತನನ್ನು ತನ್ನ ಬಾಯ್ ಫ್ರೆಂಡ್ ಎಂದೇ ಹೆತ್ತವರಿಗೆ ಪರಿಚಯಿಸಿದ್ದಳು. ನಂತರ, ಲಿಂಗ ಪರಿವರ್ತನೆ ಮಾಡಿಸಿ ಮದುವೆಯಾಗಲೂ ಒಪ್ಪಿದ್ದಳು. ಅಂತೆಯೇ ಶಸ್ತ್ರಚಿಕಿತ್ಸೆಯ ಒಪ್ಪಿಗೆ ಪತ್ರಕ್ಕೆ ಆಕೆಯೇ ಸಹಿ ಹಾಕಿದ್ದಳು. ಬಳಿಕ ವಿವಾಹ ವಾಗಿದ್ದಳು. ಆದರೆ, ಮದುವೆಯಾದ ಬಳಿಕವೂ ಪುರುಷನಂತಾಗದ್ದೇ ಈ ಎಲ್ಲ ಗೊಂದಲಕ್ಕೆ ಕಾರಣ ಎಂದಿದ್ದಾನೆ ಅರ್ಜಿದಾರ.
ಈಗ ಒಬ್ಬ ಹೆಣ್ಣು ಮತ್ತು ಗಂಡಾಗಿ ಲಿಂಗಬದಲಿಸಿದ ಹೆಣ್ಣಿನ ವಿವಾಹ ಸಿಂಧುವಾಗುತ್ತದೆಯೇ ಎಂಬುದನ್ನು ನ್ಯಾಯಾಲಯವೇ ತೀರ್ಮಾನಿಸಬೇಕು.
ಮತ್ತೂಂದು ವಿಶೇಷವೆಂದರೆ, ಅತ್ತ ಪತ್ನಿಯೂ ಕೋರ್ಟ್ ಮೆಟ್ಟಿಲೇರಿದ್ದಾಳೆ. ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಪತಿ ಮತ್ತು ಆತನ ಮನೆಯವರ ವಿರುದ್ಧ ದೂರು ದಾಖಲಿಸಿರುವ ಆಕೆ, ನನಗೆ ಎಲ್ಲರೂ ಹಿಂಸೆ ನೀಡುತ್ತಾರೆ ಎಂದಿದ್ದಾಳೆ. “ಪತಿಯಿಂದ ವಿಚ್ಛೇದನ ಕೊಡಿಸಿ, ಮಾಸಿಕ 1 ಲಕ್ಷ ರೂ. ಜೀವನಾಂಶ ಮತ್ತು ವಾಸಕ್ಕೊಂದು ಮನೆ ನಿರ್ಮಿಸಿಕೊಡುವಂತೆ ಸೂಚಿಸಿ’ ಎಂದು ಮನವಿ ಮಾಡಿಕೊಂಡಿದ್ದಾಳೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ED Summons: ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ ಇಡಿ ಸಮನ್ಸ್
Telangana ಪೊಲೀಸರ ಎನ್* ಕೌಂಟರ್ – ಕಮಾಂಡರ್ ಸೇರಿ ಏಳು ನಕ್ಸಲೀಯರ ಹ*ತ್ಯೆ
Noida: ಹಾಲಿಡೇ ಪ್ಯಾಕೇಜ್ ದಂಧೆಯ ನಕಲಿ ಕಾಲ್ ಸೆಂಟರ್‌ಗೆ ಪೊಲೀಸ್ ದಾಳಿ; 32 ಜನರ ಬಂಧನ
Digital Arrest; ತನಿಖೆ ನೆಪದಲ್ಲಿ ಯುವತಿಯನ್ನು ವಿವ*ಸ್ತ್ರಗೊಳಿಸಿ 1.7 ಲಕ್ಷ ರೂ. ವಂಚನೆ!
Aligarh: ಹೃದಯಾಘಾತದಿಂದ ಸಾವನ್ನಪ್ಪಿದ 14 ವರ್ಷದ ಬಾಲಕ!
MUST WATCH
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಹೊಸ ಸೇರ್ಪಡೆ
Bengaluru: ಚಕ್ರ ವಾಹನಗಳು, ಮನೆ ಕಳ್ಳತನ: ಮೂವರು ಆರೋಪಿಗಳ ಬಂಧನ
Bellary; ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಆರ್.ಅಶೋಕ್
Belagavi: ವಕ್ಫ್ ಹೋರಾಟ ಮಾಡುವುದು ತಪ್ಪಾ..: ವಿಜಯೇಂದ್ರ ದೂರಿನ ಬಗ್ಗೆ ಯತ್ನಾಳ್ ಮಾತು
Koppala: ತೊಗರಿ ಬೆಳೆ ಕಟಾವಿಗೆ ಬಂತು ಯಂತ್ರ; 14 ಕ್ವಿಂಟಲ್ ಸಾಮರ್ಥ್ಯದ ಕಂಟೇನರ್
ED Summons: ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ ಇಡಿ ಸಮನ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.