ಶೀಘ್ರ ಬರಲಿದೆ ಕೊಳಚೆ ನೀರಿನಿಂದ ಓಡುವ ಕಾರು!
ಫರೀದಾಬಾದ್‌ನ ತೈಲ ಸಂಶೋಧನ ಕೇಂದ್ರದ ಸಾಧನೆ
Team Udayavani, Dec 4, 2021, 7:10 AM IST
ಹೊಸದಿಲ್ಲಿ: ಚರಂಡಿ ಮತ್ತು ಕೊಳಚೆ ನೀರಿನಿಂದ ಓಡುವಂಥ ಕಾರುಗಳು ಬಂದರೆ ಹೇಗಿರುತ್ತದೆ. ಅತ್ಯುತ್ತಮ ಚಿಂತನೆ ಅಲ್ಲವೇ? ಹಾಗಾದರೆ ಪೆಟ್ರೋಲ್/ ಡೀಸೆಲ್‌ನ ಅಗತ್ಯವೂ ಇರಲಾರದು. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರಿಗೆ ವಿನೂತನ ಆಲೋಚನೆ ಹೊಳೆದಿದೆ.
ಹರಿಯಾಣದ ಫರೀದಾಬಾದ್‌ನ ತೈಲ ಸಂಶೋಧನ ಸಂಸ್ಥೆ ತ್ಯಾಜ್ಯದಿಂದಲೇ ಸಿದ್ಧಪಡಿಸಿರುವ ಇಂಧನ ಅಥವಾ ಹಸುರು ಜಲಜನಕದ ಮೂಲಕ ಸಂಚರಿಸಬಲ್ಲ ಕಾರನ್ನು ಪ್ರಯೋಗಾರ್ಥವಾಗಿ ತಯಾರಿಸಿದೆ. ಅದನ್ನು ತಾನು ಖರೀದಿ ಸಿರುವುದಾಗಿ ಹೇಳಿರುವ ಗಡ್ಕರಿ, ತಾನೇ ಅದನ್ನು ಚಲಾಯಿಸಿ ಪರ್ಯಾಯ ಇಂಧನದಿಂದಲೂ ಕಾರು ಚಲಿಸಲು ಸಾಧ್ಯ ವಿದೆ ಎಂಬುದನ್ನು ಶೀಘ್ರದಲ್ಲೇ ಸಾಬೀತು ಮಾಡುವುದಾಗಿ ಪ್ರಕಟಿಸಿದ್ದಾರೆ.
ಹೊಸದಿಲ್ಲಿಯಲ್ಲಿ ಆಯೋಜಿಸಲಾಗಿದ್ದ ಆರ್ಥಿಕ ಒಗ್ಗೂಡುವಿಕೆಗೆ ಸಂಬಂಧಿಸಿದ ಆರನೇ ಸಮ್ಮೇಳನದಲ್ಲಿ ಭಾಗ ವಹಿಸಿದ ಸಂದರ್ಭದಲ್ಲಿ ಕೇಂದ್ರ ಸಚಿವರು ಈ ಮಾತುಗಳನ್ನಾಡಿದ್ದಾರೆ.
ಇದನ್ನೂ ಓದಿ:ದಶಕದ ಬೆಳವಣಿಗೆ ಕಂಡ ಸೇವಾ ಕ್ಷೇತ್ರ: ಪಿಎಂಐ
ಬಸ್, ಲಾರಿ, ಟ್ರಕ್ ಚಾಲನೆಯೂ ಸಾಧ್ಯ
ಹಸುರು ಜಲಜನಕದಿಂದ ದೇಶದ ಸಾರಿಗೆ ವ್ಯವಸ್ಥೆ ನಿರ್ವಹಣೆ ಯಾಗುವಂಥ ಹೊಸ ವ್ಯವಸ್ಥೆ ಜಾರಿಗೊಳಿಸಲು ಆಸಕ್ತಿ ಹೊಂದಿರುವುದಾಗಿ ಗಡ್ಕರಿ ತಿಳಿಸಿದ್ದಾರೆ. ತ್ಯಾಜ್ಯ ದಿಂದ ಮೌಲ್ಯಯುತ ಇಂಧನ ತಯಾರಿಸುವ ಪರಿಕಲ್ಪನೆಯಡಿ, ಕೊಳಚೆ ನೀರನ್ನು ಬಳಸಿ ಹಸುರು ಜಲಜನಕವನ್ನು (ಗ್ರೀನ್ ಹೈಡ್ರೋಜನ್) ತಯಾರಿಸುವ ಹೊಸ ಪರಿಕಲ್ಪನೆ ವಿಶ್ವದ ನಾನಾ ರಾಷ್ಟ್ರಗಳಲ್ಲಿ ಈಗಾಗಲೇ ಚಾಲ್ತಿಯಲ್ಲಿದೆ. ಪ್ರತೀ ನಗರಗಳಲ್ಲಿ ಉತ್ಪಾದನೆಯಾಗುವ ಕೊಳಚೆ ನೀರು ಅಥವಾ ಮಳೆಯ ರಾಡಿ ನೀರನ್ನು ಬಳಸಿ ಹಸುರು ಜಲಜನಕವನ್ನು ಉತ್ಪಾದಿಸಬಹುದಾಗಿದೆ. ಅದರ ಮೂಲಕ ಬಸ್, ಲಾರಿ, ಟ್ರಕ್ ಹಾಗೂ ಕಾರುಗಳನ್ನು ಚಲಾಯಿಸುವಂಥ ವ್ಯವಸ್ಥೆ ಜಾರಿಗೊಳಿಸುವ ಯೋಜನೆಯನ್ನು ಹೊಂದಿದ್ದೇನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Tragedy: ರೈಲು ಹಳಿ ಮೇಲೆ ಕೂತು PUBG ಆಡುತ್ತಿದ್ದ ಮೂವರು ಯುವಕರ ದೇಹ ಛಿದ್ರ ಛಿದ್ರ…
Fog: ಉತ್ತರ ಭಾರತದಲ್ಲಿ ದಟ್ಟ ಮಂಜು, ಶೂನ್ಯ ಗೋಚರತೆ: ವಿಮಾನ, ರೈಲು ಸಂಚಾರದ ಮೇಲೆ ಪರಿಣಾಮ
Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.