Sex Racket: ಸ್ವಘೋಷಿತ ದೇವಮಾನವ ಬಾಬಾ ದಾಸ್ ಅರೆಸ್ಟ್
Team Udayavani, Sep 28, 2017, 4:08 PM IST
ಲಕ್ನೋ : ಹದಿಹರೆಯದ ಹುಡುಗಿಯೊಬ್ಬಳನ್ನು ಎಂಟು ತಿಂಗಳ ಕಾಲ ಕೂಡಿ ಹಾಕಿ ಆಕೆಯ ಮೇಲೆ ಪದೇ ಪದೇ ಅತ್ಯಾಚಾರ ನಡೆಸಿದ ಹಾಗೂ ಸೆಕ್ಸ್ ಜಾಲ ನಡೆಸುತ್ತಿದ್ದ ಆರೋಪದ ಮೇಲೆ ಉತ್ತರ ಪ್ರದೇಶದ ಸ್ವಘೋಷಿತ ದೇವ ಮಾನವ, ಬಾಬಾ ಸಿಯಾ ರಾಮ್ ದಾಸ್ ನನ್ನು ಪೊಲೀಸರು ಬಂಧಿಸಿದ್ದಾರೆ.
”ಬಾಬಾನ ಇತರ ಕೆಲವು ಅನುಯಾಯಿಗಳು ಕೂಡ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ” ಎಂದು ಸಂತ್ರಸ್ತೆ ದೂರಿದ್ದಾಳೆ. ಬಾಬಾ ದಾಸ್ ರಾಜಕಾರಣಿಗಳಿಗೆ ಹುಡುಗಿಯರನ್ನು ಪೂರೈಸುತ್ತಿದ್ದ ಎಂದೂ ಆಕೆ ಹೇಳಿದ್ದಾಳೆ.
ಪೊಲೀಸರು ಹೇಳುವ ಪ್ರಕಾರ ರೇಪ್ ಸಂತ್ರಸ್ತೆ 18ರ ಹುಡುಗಿಯನ್ನು ಆಕೆಯ ಸಂಬಂಧಿಕರು 50,000 ರೂ.ಗೆ ಬಾಬಾನ ಭಕ್ತೆಯೊಬ್ಬರಿಗೆ ಮಾರಿದ್ದರು. ಆಕೆಯನ್ನು ಮೊದಲು ಲಕ್ನೋಗೆ ಒಯ್ಯಲಾಗಿ ಬಳಿಕ ಮಿಶ್ರಿಕ್ ನಲ್ಲಿನ ಬಾಬಾನ ಆಶ್ರಮಕ್ಕೆ ಒಪ್ಪಿಸಲಾಯಿತು. ಅಲ್ಲಿ ಬಾಬಾ ಸಿಯಾರಾಮ್ ದಾಸ್ ಆಕೆಯ ಮೇಲೆ ಪದೇ ಪದೇ ಅತ್ಯಾಚಾರ ನಡೆಸಿದ್ದಾನೆ.
ಮಿಶ್ರಿಕ್ ಆಶ್ರಮದಲ್ಲಿ ಬಾಬಾ ಸಿಯಾರಾಮ್ ದಾಸ್ ಬಾಲಕಿಯ ಮೇಲೆ ಎಸಗಿದ ಅತ್ಯಾಚಾರದ ವಿಡಿಯೋ ಕೂಡ ಮಾಡಿಕೊಂಡಿದ್ದ. ಅತ್ಯಾಚಾರದ ಬಗ್ಗೆ ಯಾರಿಗಾದರೂ ಹೇಳಿದರೆ ಗಂಭೀರ ಪರಿಣಾಮ ಎದುರಿಸಬೇಕಾದೀತು ಎಂದು ಬಾಲಕಿಗೆ ಜೀವ ಬೆದರಿಕೆ ಹಾಕಿದ್ದ.
ಮಿಶ್ರಿಖ್ ಆಶ್ರಮದಿಂದ ರೇಪ್ ಸಂತ್ರಸ್ತೆಯನ್ನು ಆಗ್ರಾದಲ್ಲಿ ಆಶ್ರಮಕ್ಕೆ ಒಯ್ಯಲಾಗಿ ಅಲ್ಲಿ ಬಾಬಾ ದಾಸ್‌ನ ಕೆಲವು ಭಕ್ತರು ಹುಡುಗಿಯ ಮೇಲೆ ಎಂಟು ತಿಂಗಳ ಪ್ರತೀ ರಾತ್ರಿ ಎಂಬಂತೆ ಅತ್ಯಾಚಾರ ನಡೆಸಿದರು ಎಂದು ಪೊಲೀಸರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.