![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Sep 25, 2024, 12:30 PM IST
ಹೊಸದಿಲ್ಲಿ: ರದ್ದುಗೊಂಡಿರುವ ವಿವಾದಿತ 3 ಕೃಷಿ ಕಾಯ್ದೆಗಳನ್ನು ಸರಕಾರ ವಾಪಸ್ ತರಬೇಕೆಂದು ಆಗ್ರಹಿಸಿದ್ದ ಸಂಸದೆ ಕಂಗನಾ ರಣಾವತ್ ಅವರು ವ್ಯಾಪಕ ವಿರೋಧ ವ್ಯಕ್ತವಾದ ಬಳಿಕ ಬುಧವಾರ(ಸೆ25) ಹೇಳಿಕೆ ಹಿಂಪಡೆದುಕೊಂಡಿದ್ದಾರೆ.
ಎಕ್ಸ್ ನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಕಂಗನಾ “ಕಳೆದ ಕೆಲ ದಿನಗಳಲ್ಲಿ ಮಾಧ್ಯಮಗಳು ಕೃಷಿ ಕಾಯ್ದೆಗಳ ಬಗ್ಗೆ ನನಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದವು. ಕೃಷಿ ಕಾಯ್ದೆಗಳ ಕಾನೂನನ್ನು ಮರಳಿ ತರುವಂತೆ ರೈತರು ಪ್ರಧಾನಿ ಮೋದಿಯವರಿಗೆ ಮನವಿ ಮಾಡಬೇಕೆಂದು ನಾನು ಸಲಹೆ ನೀಡಿದ್ದೇನೆ. ನನ್ನ ಹೇಳಿಕೆಯಿಂದ ಅನೇಕ ಜನರು ನಿರಾಶೆಗೊಂಡಿದ್ದಾರೆ. ರೈತರ ಕಾನೂನನ್ನು ಪ್ರಸ್ತಾಪಿಸಿದಾಗ, ನಮ್ಮಲ್ಲಿ ಅನೇಕರು ಅದನ್ನು ಬೆಂಬಲಿಸಿದರು ಆದರೆ ನಮ್ಮ ಪ್ರಧಾನ ಮಂತ್ರಿಗಳು ಅದನ್ನು ಬಹಳ ಸೂಕ್ಷ್ಮವಾಗಿ ಮತ್ತು ಸಹಾನುಭೂತಿಯಿಂದ ಹಿಂತೆಗೆದುಕೊಂಡರು ಮತ್ತು ಅವರ ಮಾತುಗಳ ಘನತೆಯನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ” ಎಂದು ಹೇಳಿದ್ದಾರೆ.
ನಾನು ಕೇವಲ ಕಲಾವಿದೆಯಲ್ಲ. ಬಿಜೆಪಿ ಕಾರ್ಯಕರ್ತೆ.ಪಕ್ಷದ ನಿಲುವು ನನ್ನ ಅಭಿಪ್ರಾಯವಾಗಬೇಕು.ಹಾಗಾಗಿ ನನ್ನ ಮಾತುಗಳು ಮತ್ತು ನನ್ನ ಆಲೋಚನೆಗಳಿಂದ ನಾನು ಯಾರನ್ನಾದರೂ ನೋವುಂಟು ಮಾಡಿದರೆ, ನಾನು ಕ್ಷಮೆಯಾಚಿಸುತ್ತೇನೆ ಮತ್ತು ನನ್ನ ಮಾತುಗಳನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೇನೆ” ಎಂದು ಹೇಳಿದ್ದಾರೆ.
ಪದೇ ಪದೇ ಹೇಳಿಕೆಗಳ ಮೂಲಕ ಸುದ್ದಿಯಾಗಿ ಬಿಜೆಪಿಗೆ ಮುಜುಗರವುಂಟು ಮಾಡುತ್ತಿರುವ ಕಂಗನಾ ರಣಾವತ್ ಗೆ ಬಿಜೆಪಿ ಉನ್ನತ ನಾಯಕತ್ವ ಕಠಿನ ಎಚ್ಚರಿಕೆ ನೀಡಿದೆ ಎಂದು ವರದಿಯಾಗಿದೆ.
Do listen to this, I stand with my party regarding Farmers Law. Jai Hind 🇮🇳 pic.twitter.com/wMcc88nlK2
— Kangana Ranaut (@KanganaTeam) September 25, 2024
Pariksha Pe Charcha: ಸಾರ್ಟ್‌ಫೋನ್‌ಗಿಂತಲೂ ನೀವು ಸಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
You seem to have an Ad Blocker on.
To continue reading, please turn it off or whitelist Udayavani.