ಶಿವಸೇನೆ ಬಣಗಳ ದಸರಾ ರ‍್ಯಾಲಿ ಮೇಲಾಟ : ಶಿಂಧೆಗೆ ಕಟ್ಟಪ್ಪ ಎಂದ ಠಾಕ್ರೆ
ನಾನು ಆಸ್ಪತ್ರೆಯಿಂದ ಹಿಂತಿರುಗುವುದಿಲ್ಲ ಎಂದು ಅವರು ಭಾವಿಸಿದ್ದರು...
Team Udayavani, Oct 6, 2022, 7:40 AM IST
ಮುಂಬಯಿ : ವಿಜಯ್ ದಶಮಿಯ ದಿನವಾದ ಬುಧವಾರ ನಡೆದ ಶಿವಸೇನೆಯ ಎರಡು ರ‍್ಯಾಲಿಗಳು ಬಣಗಳ ಪರಸ್ಪರ ವಾಕ್ ಸಮರಕ್ಕೆ ಕಾರಣವಾಗಿದ್ದು, ಮಹಾರಾಷ್ಟ್ರ ಮುಖ್ಯಮಂತ್ರಿ ಏಕ್ ನಾಥ್ ಶಿಂಧೆ ಅವರನ್ನು ಮಾಜಿ ಸಿಎಂ ಉದ್ಧವ್ ಠಾಕ್ರೆ ಅವರು ಕಟ್ಟಪ್ಪ ಎಂದು ಕರೆದಿದ್ದಾರೆ.
ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಶಿವಸೇನೆ (ಉದ್ಧವ್ ಠಾಕ್ರೆ ಬಣ) ‘ರಾವಣ ದಹನ’ ಕಾರ್ಯಕ್ರಮ ನಡೆಸಿತು.ಬೃಹತ್ ಕಾರ್ಯಕ್ರಮದಲ್ಲಿ ಮಾತನಾಡಿದ ಠಾಕ್ರೆ, ನಾನು ಆಸ್ಪತ್ರೆಗೆ ದಾಖಲಾದಾಗ ರಾಜ್ಯದ ಜವಬ್ದಾರಿ ಕೊಟ್ಟವರು ‘ಕಟ್ಟಪ್ಪ’ ಆಗಿ ನಮಗೆ ದ್ರೋಹ ಬಗೆದಿದ್ದಕ್ಕೆ ನನಗೆ ಬೇಸರ, ಸಿಟ್ಟು ಬರುತ್ತಿದೆ. ಆಸ್ಪತ್ರೆಯಿಂದ ಹಿಂತಿರುಗುವುದಿಲ್ಲ ಎಂದು ಅವರು ಭಾವಿಸಿದ್ದರು ಎಂದು ಕಿಡಿ ಕಾರಿದರು.
ನಮ್ಮ ವಾರ್ಷಿಕ ಸಂಪ್ರದಾಯದಂತೆ, ‘ರಾವಣ ದಹನ’ ಸಮಾರಂಭ ಇರುತ್ತದೆ, ಆದರೆ ಈ ವರ್ಷದ ರಾವಣ ವಿಭಿನ್ನವಾಗಿದೆ. ಕಾಲ ಬದಲಾದಂತೆ ರಾವಣನೂ ಬದಲಾಗುತ್ತಾನೆ…ಇಲ್ಲಿಯವರೆಗೆ 10 ತಲೆ ಇದ್ದವನು…ಈಗ ಅವನಿಗೆ ಎಷ್ಟು ತಲೆಗಳಿವೆ? ಅವರು 50 ಪಟ್ಟು ಹೆಚ್ಚು ದ್ರೋಹ ಮಾಡುತ್ತಿದ್ದಾರೆ. ನಾವು ಎಲ್ಲವನ್ನೂ ಕೊಟ್ಟವರು ನಮಗೆ ದ್ರೋಹ ಮಾಡಿದ್ದಾರೆ ಮತ್ತು ಏನನ್ನೂ ನೀಡದವರು ಎಲ್ಲರೂ ಒಟ್ಟಿಗೆ ಇದ್ದಾರೆ. ಈ ಸೇನೆ ಒಬ್ಬರಲ್ಲ ಇಬ್ಬರದ್ದಲ್ಲ ನಿಮ್ಮೆಲ್ಲರದ್ದು. ನೀವು ನನ್ನೊಂದಿಗೆ ಇರುವವರೆಗೂ ನಾನು ಪಕ್ಷದ ನಾಯಕನಾಗಿರುತ್ತೇನೆ ಎಂದು ಉದ್ಧವ್ ಠಾಕ್ರೆ ಹೇಳಿದರು.
ಶಿಂಧೆ ತಿರುಗೇಟು
ಮುಂಬೈನ ಬಿಕೆಸಿ ಮೈದಾನದಲ್ಲಿ ನಡೆದ ಸಮಾರ್ಭದಲ್ಲಿ ಮಾತನಾಡಿದ ಎಂ ಏಕನಾಥ್ ಶಿಂಧೆ, ಇದು ನಿಮ್ಮ ಖಾಸಗಿ ಲಿಮಿಟೆಡ್ ಕಂಪನಿಯಲ್ಲ. ಶಿವಸೇನೆಯು ಶಿವಸೈನಿಕರದ್ದು, ಅದಕ್ಕಾಗಿ ತಮ್ಮ ಬೆವರು ಹರಿಸಿದ್ದಾರೆ. ಪಾಲುದಾರಿಕೆ ಮಾಡಿ ಮಾರಾಟ ಮಾಡಿದ ನಿಮ್ಮಂತಹವರಿಗೆ ಅಲ್ಲ ಎಂದು ಸಿತಿರುಗೇಟು ನೀಡಿದ್ದಾರೆ.
ನನ್ನನ್ನು ‘ಕಟ್ಟಪ್ಪ’ ಎಂದು ಕರೆಯುತ್ತಾರೆ. ನಾನು ನಿಮಗೆ ಹೇಳಬಯಸುತ್ತೇನೆ, ‘ಕಟ್ಟಪ್ಪ’ ಕೂಡ ಸ್ವಾಭಿಮಾನ ಹೊಂದಿದ್ದನು, ನಿಮ್ಮಂತೆ ಡಬಲ್ ಸ್ಟಾಂಡರ್ಡ್ ಆಗಿರಲಿಲ್ಲ ಎಂದಿದ್ದಾರೆ.
ಬಾಳಾಸಾಹೇಬ್ ಠಾಕ್ರೆ ಅವರ ಪುತ್ರ ಜೈದೇವ್ ಠಾಕ್ರೆ ಅವರು ಸಿಎಂ ಶಿಂಧೆಗೆ ತಮ್ಮ ಬೆಂಬಲವನ್ನು ಸೂಚಿಸಿ “ಏಕನಾಥ್ ಶಿಂಧೆ ಅವರನ್ನು ಮಾತ್ರ ಬಿಡಬೇಡಿ. ಅವರು ರೈತರು ಮತ್ತು ಸಾಮಾನ್ಯರಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ನಿಮ್ಮ ಸಹೋದರ, ಸಂಬಂಧಿಕರು ಅಥವಾ ರಾಜ್ ಠಾಕ್ರೆ ಕೂಡ ನಿಮ್ಮೊಂದಿಗೆ ಇಲ್ಲ ಉದ್ಧವ್ ಜೀ, ನಿಮ್ಮ ಕುಟುಂಬವನ್ನು ಸಹ ಉಳಿಸಿಕೊಳ್ಳಲು ಸಾಧ್ಯವಾಗದಿದ್ದರೆ, ನೀವು ರಾಜ್ಯವನ್ನು ಹೇಗೆ ಉಳಿಸಿಕೊಳ್ಳುತ್ತೀರಿ? ಎಂದು ಶಿವಸೇನೆಯ ಶಿಂಧೆ ಬಣದ ನಾಯಕ ರಾಮದಾಸ್ ಕದಂ ಪ್ರಶ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ 9 ಗಂಟೆ ವಿಚಾರಣೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.