13 ಮಂದಿ ಪ್ರಯಾಣಿಕರಿದ್ದ ಐಎಎಫ್ ವಿಮಾನ ನಾಪತ್ತೆ
Team Udayavani, Jun 4, 2019, 6:00 AM IST
ಇಟಾನಗರ/ನವದೆಹಲಿ: ಭಾರತೀಯ ವಾಯುಪಡೆಗೆ ಸೇರಿದ್ದ ರಷ್ಯಾ ನಿರ್ಮಿತ ‘ಸಿ-130 ಜೆ’ ಮಾದರಿಯ ವಿಮಾನವೊಂದು ಸೋಮವಾರ ಪ್ರಯಾಣದ ಮಧ್ಯೆಯೇ ನಾಪತ್ತೆಯಾಗಿದ್ದು, ಅದರಲ್ಲಿದ್ದ 8 ಸಿಬ್ಬಂದಿ ಹಾಗೂ 5 ಪ್ರಯಾಣಿಕರ ಬಗ್ಗೆ ಆತಂಕ ಸೃಷ್ಟಿಯಾಗಿದೆ.
ಸೋಮವಾರ ರಾತ್ರಿಯ ವೇಳೆಗೆ ಬಂದ ವರದಿಗಳ ಪ್ರಕಾರ, ಕಣ್ಮರೆಯಾದ ವಿಮಾನಕ್ಕಾಗಿ ಹುಡುಕಾಟ ಮುಂದುವರಿದಿದ್ದು, ಭಾರತದ ಭೂ ಸೇನೆಯ ನೆರವನ್ನೂ ಪಡೆಯಲಾಗಿದೆ. ಈ ಹುಡುಕಾಟಕ್ಕಾಗಿ ವಾಯುಪಡೆ, ತನ್ನಲ್ಲಿದ್ದ ‘ಎಎನ್-32’, ‘ಎಂಐ-17’ ಹಾಗೂ ‘ಆ್ಯಂಟೋವ್ ಎಎನ್-32’ ವಿಮಾನಗಳನ್ನು ನಿಯೋಜಿಸಿದೆ.
ಸೋಮವಾರ ಮಧ್ಯಾಹ್ನ 12:27ರ ಸುಮಾರಿಗೆ ಅಸ್ಸಾಂನ ಜೋರ್ಹತ್ ಸೇನಾ ನೆಲೆಯಿಂದ ಅರುಣಾಚಲ ಪ್ರದೇಶದ ಶಿ-ಯೋಮಿ ಜಿಲ್ಲೆಯಲ್ಲಿನ ಮೆಂಚುಕಾ ನಿಲ್ದಾಣದ ಕಡೆಗೆ ವಿಮಾನ ಪ್ರಯಾಣ ಬೆಳೆಸಿತ್ತು. ಟೇಕ್ ಆಫ್ ಆದ 35 ನಿಮಿಷಗಳಲ್ಲಿ ಅಂದರೆ 1 ಗಂಟೆಗೆ ವಿಮಾನವು ನಿಯಂತ್ರಣ ಕೇಂದ್ರದಿಂದ ಸಂಪರ್ಕ ಕಡಿದು ಕೊಂಡಿತು. ವಿಮಾನ ಪತನಗೊಂಡಿರುವ ಬಗ್ಗೆ ಅನುಮಾನಗಳು ಎದ್ದಿದ್ದ ರಿಂದ ಅದು ಪ್ರಯಾಣಿಸಿದ್ದ ಮಾರ್ಗದಲ್ಲಿ ಶೋಧ ನಡೆದಿದೆ.
ಐಎಎಫ್ ಅಧಿಕಾರಿಗಳು ಸಂಪೂರ್ಣ ಮಾಹಿತಿ ನೀಡಿದ್ದಾರೆ. ವಿಮಾನದಲ್ಲಿದ್ದ ಪ್ರಯಾಣಿಕರ ಸುರಕ್ಷತೆಗಾಗಿ ಪ್ರಾರ್ಥಿಸುತ್ತಿದ್ದೇನೆ.
-ರಾಜನಾಥ್ ಸಿಂಗ್, ರಕ್ಷಣಾ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.