ಭಾರತೀಯ ವಾಯುಪಡೆಗೆ ‘ಚಿನೂಕ್’ ಬಲ
ಏಕಕಾಲದಲ್ಲಿ 23,000 ಕಿಲೋ ಸಾಮರ್ಥ್ಯದ ಭಾರವನ್ನು ಹೊತ್ತೂಯ್ಯಬಲ್ಲ ಸಾಮರ್ಥ್ಯ ಈ ಹೆಲಿಕಾಫ್ಟರ್ ಗಿದೆ...
Team Udayavani, Mar 25, 2019, 10:14 AM IST
ಚಂಢೀಗಢ: ಯಾವುದೇ ಪ್ರತಿಕೂಲ ಸನ್ನಿವೇಶಗಳಲ್ಲೂ ಸೈನಿಕರನ್ನು ಮತ್ತು ಸೇನಾ ಸಾಮಾಗ್ರಿಗಳನ್ನು ನಿರ್ಧಿಷ್ಟ ಪ್ರದೇಶಕ್ಕೆ ಹೊತ್ತೂಯ್ಯಬಲ್ಲ ಸಾಮರ್ಥ್ಯವಿರುವ ಅತ್ಯಾಧುನಿಕ ಚಿನೂಕ್ ಹೆಲಿಕಾಫ್ಟರ್ ಗಳು ಇದೀಗ ಭಾರತೀಯ ವಾಯುಸೇನೆಯ ಬತ್ತಳಿಕೆಗೆ ಸೇರ್ಪಡೆಯಾಗಿದೆ. ಇದರಿಂದಾಗಿ ಸಿಯಾಚಿನ್ ಸೇರಿದಂತೆ ದುರ್ಗಮ ಗಡಿಭಾಗಗಳಿಗೆ ಇನ್ನು ಸೈನಿಕರ ರವಾನೆ ಮತ್ತು ಸೇನಾ ಸಾಮಾಗ್ರಿಗಳ ಸಾಗಾಣಿಕೆ ಸುಲಭವಾಗಲಿದೆ.
ಅಧಿಕ ಭಾರದ ಸಾಮಾಗ್ರಿಗಳನ್ನು ಹೊತ್ತೂಯ್ಯಬಲ್ಲ ಸಾಮರ್ಥ್ಯವಿರುವ ಇಂತಹ ನಾಲ್ಕು ಚಿನೂಕ್ ಹೆಲಿಕಾಫ್ಟರ್ ಗಳನ್ನು ಸೋಮವಾರದಂದು ವಾಯಪಡೆಗೆ ಸೇರ್ಪಡೆಗೊಳಿಸಲಾಯಿತು. ವಾಯು ಸೇನಾ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಬಿ.ಎಸ್. ಧನೋವಾ ಅವರು ಚಂಢಿಗಢದಲ್ಲಿ ಚಿನೂಕ್ ಹೆಲಿಕಾಫ್ಟರ್ ಗಳನ್ನು ವಾಯುಸೇನೆಗೆ ಔಪಚಾರಿಕವಾಗಿ ಸೇರ್ಪಡೆಗೊಳಿಸಿದರು.
Air Chief Marshal BS Dhanoa: Chinook helicopter can carry out military operations, not only in day but during night too; another unit will be created for the East in Dinjan (Assam). Induction of Chinook will be a game changer the way Rafale is going to be in the fighter fleet. pic.twitter.com/TxJgJt8h5P
— ANI (@ANI) March 25, 2019
2015ರಲ್ಲಿ ಭಾರತವು 15 ಚಿನೂಕ್ ಹೆಲಿಕಾಪ್ಟರ್ ಗಳಿಗಾಗಿ ಅಮೆರಿಕಾದ ಜೊತೆ 1.5 ಬಿಲಿಯನ್ ಡಾಲರ್ ಮೊತ್ತದ ಒಪ್ಪಂದಕ್ಕೆ ಸಹಿ ಮಾಡಿತ್ತು. ಈ ಒಪ್ಪಂದದ ಪ್ರಕಾರ ಮೊದಲ ಕಂತಿನ ನಾಲ್ಕು ಹೆಲಿಕಾಫ್ಟರ್ ಗಳು ಅಮೆರಿಕಾದಿಂದ ಗುಜರಾತ್ ನ ಮುಂದ್ರಾ ಬಂದರಿನ ಮೂಲಕ ಹಡಗಿನಲ್ಲಿ ಭಾರತಕ್ಕೆ ಆಗಮಿಸಿದ್ದವು, ಬಳಿಕ ಅಲ್ಲಿಂದ ಅವುಗಳನ್ನು ಚಂಡೀಗಢಕ್ಕೆ ರವಾನಿಸಲಾಗಿತ್ತು. ಈ ಮೂಲಕ ಚಿನೂಕ್ ಹೆಲಿಕಾಫ್ಟರ್ ಗಳನ್ನು ಬಳಸುತ್ತಿರುವ 19ನೇ ರಾಷ್ಟ್ರವಾಗಿ ಭಾರತ ಗುರುತಿಸಿಕೊಂಡಂತಾಗಿದೆ. ಒಂದು ಬಾರಿಗೆ 23,000 ಕಿಲೋ ಸಾಮರ್ಥ್ಯದ ಭಾರವನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಈ ಹೆಲಿಕಾಫ್ಟರ್ ಗಿದೆ ಮತ್ತಿದರ ಗರಿಷ್ಠ ವೇಗ ಗಂಟೆಗೆ 302 ಕಿಲೋಮೀಟರ್ ಗಳಾಗಿದೆ.
ಸೇನಾ ಸಾಮಾಗ್ರಿಗಳನ್ನು ರವಾನಿಸಲು ಮಾತ್ರವೇ ಅಲ್ಲಿದೆ ಚಿನೂಕ್ ಹೆಲಿಕಾಫ್ಟರ್ ಗಳನ್ನು ಮಿಲಿಟರಿ ಕಾರ್ಯಾಚರಣೆ ಸಂದರ್ಭದಲ್ಲಿ ಹಾಗೂ ವಿಕೋಪ ಪರಿಹಾರ ಕಾರ್ಯಾಚರಣೆ ಸಂದರ್ಭದಲ್ಲೂ ಬಳಸಬಹುದಾಗಿರುತ್ತದೆ. ಹೀಗೆ ಬಹುಪಯೋಗಿ ಮಾದರಿಯ ಚಿನೂಕ್ ಹೆಲಿಕಾಪ್ಟರ್ ಗಳ ಸೇರ್ಪಡೆಯಿಂದಾಗಿ ಭಾರತೀಯ ವಾಯುಪಡೆಗೆ ವಿಶೇಷ ಬಲ ಬಂದಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
MUST WATCH
ಹೊಸ ಸೇರ್ಪಡೆ
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.