ತನ್ನದೇ ಹೆಲಿಕಾಪ್ಟರ್ ಹೊಡೆದುರುಳಿಸಿದ ಪ್ರಕರಣ!; ಐಎಎಫ್ ಅಧಿಕಾರಿಗಳ ವಿರುದ್ಧ ದೋಷಾರೋಪ
Team Udayavani, Aug 23, 2019, 5:56 PM IST
ಹೊಸದಿಲ್ಲಿ: ಬಾಲಾಕೋಟ್ ದಾಳಿಯ ಬಳಿಕ ಫೆ.27ರಂದು ಪಾಕಿಸ್ಥಾನ ವಿರುದ್ಧ ವಾಯುಪಡೆ ಸಮರ ಕ್ಷಣದಲ್ಲಿರುವಾಗಲೇ ವಾಯುಪಡೆಗೆ ಸೇರಿದ ಮಿ-17 ಹೆಲಿಕಾಪ್ಟರನ್ನು ಕ್ಷಿಪಣಿ ಬಳಸಿ ತಾವೇ ಹೊಡೆದುರುಳಿಸಿದ ಪ್ರಕರಣಕ್ಕೀಗ ಜೀವಬಂದಿದೆ.
ಪ್ರಕರಣದಲ್ಲಿ ಐವರು ವಾಯುಪಡೆ ಅಧಿಕಾರಿಗಳನ್ನು ತಪ್ಪಿತಸ್ಥರು ಎಂದು ಹೇಳಲಾಗಿದೆ. ತನಿಖೆಯಲ್ಲಿ ಈ ವಿಚಾರ ಗೊತ್ತಾಗಿದ್ದು, ತನಿಖೆಯ ಕುರಿತ ವಿವರಗಳನ್ನು ವಾಯುಪಡೆ ಮುಖ್ಯ ಕಚೇರಿಗೆ ಕಳಿಸಲಾಗಿದೆ ಎಂದು ವಾಯುಪಡೆ ಮೂಲಗಳು ಹೇಳಿವೆ.
ಹೈ ಅಲರ್ಟ್ ಇರುವ ವೇಳೆ ಇಸ್ರೇಲ್ ನಿರ್ಮಿತ ಕ್ಷಿಪಣಿ ದಾಳಿಗೆ ಅನುಮತಿ ನೀಡಿದ್ದರಿಂದ ಅದು ವಾಯುಪಡೆಯ ಹೆಲಿಕಾಪ್ಟರನ್ನು ಜಮ್ಮು ಮತ್ತು ಕಾಶ್ಮೀರದ ಬದ್ಗಾಮ್‌ನಲ್ಲಿ ಹೊಡೆದುರುಳಿಸಿತ್ತು. ಇದರಿಂದ ವಾಯುಪಡೆಯ 6 ಮಂದಿ ಅಧಿಕಾರಿಗಳು ಮೃತಪಟ್ಟಿದ್ದರು. ವೆಸ್ಟರ್ನ್ ಏರ್ ಕಮಾಂಡ್‌ಗೆ ಸೇರಿದ್ದ ಹೆಲಿಕಾಪ್ಟರ್ ಇದಾಗಿದ್ದು, ಹಾರಾಟ ಆರಂಭಿಸಿದ 10 ನಿಮಿಷದಲ್ಲಿ ಕ್ಷಿಪಣಿ ದಾಳಿಗೆ ಒಳಗಾಗಿತ್ತು. ತನ್ನದೇ ಹೆಲಿಕಾಪ್ಟರ್ ಹೊಡೆದುರುಳಿಸಿ, ಜೀವಹಾನಿಯಾಗಿದ್ದರಿಂದ ವಾಯುಪಡೆ ತಲೆತಗ್ಗಿಸುವಂತಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ, ಏನು ಮಾರ್ಗಸೂಚಿ ಇಳಿದೆ ಮಾಹಿತಿ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
MUST WATCH
ಹೊಸ ಸೇರ್ಪಡೆ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ, ಏನು ಮಾರ್ಗಸೂಚಿ ಇಳಿದೆ ಮಾಹಿತಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.