![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Sep 20, 2022, 7:15 AM IST
ನವದೆಹಲಿ: ಭಾರತೀಯ ವಾಯುಪಡೆಯ ಶಸ್ತ್ರಾಗಾರದಲ್ಲಿ ಉಳಿದಿರುವ ಮಿಗ್-21 ಯದ್ಧ ವಿಮಾನಗಳ ಪೈಕಿ ಒಂದು ವಿಮಾನವು ಸೆ.30ರಂದು ಬಳಕೆಯಿಂದ ನಿವೃತ್ತಿಯಾಗುತ್ತಿದೆ.
2019ರ ಫೆಬ್ರವರಿಯಲ್ಲಿ ಗಡಿನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನದ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಲು ಈ ವಿಮಾನವನ್ನು ವಿಂಗ್ ಕಮಾಂಡರ್(ಸದ್ಯ ಗ್ರೂಪ್ ಕಮಾಂಡರ್) ಅಭಿನಂದನ್ ವರ್ಧಮಾನ್ ಬಳಸಿದ್ದರು. ಈ ಸಾಹಸಕ್ಕಾಗಿ ಅಭಿನಂದನ್ ಅವರಿಗೆ ವೀರ ಚಕ್ರ ಪ್ರದಾನ ಮಾಡಲಾಯಿತು.
ಅಲ್ಲದೇ ಈಗ ನಿವೃತ್ತಿಯಾಗುತ್ತಿರುವ ಮಿಗ್-21 ಯುದ್ಧ ವಿಮಾನವು ಪಾಕಿಸ್ತಾನ ವಿರುದ್ಧದ 1999ರ ಕಾರ್ಗಿಲ್ ಯುದ್ಧದ “ಅಪರೇಷನ್ ಸಫೇದ್ ಸಾಗರ್’ನ ಭಾಗವಾಗಿತ್ತು.
ಸದ್ಯ ಈ ವಿಮಾನವು “ಸ್ವಾರ್ಡ್ ಆಮ್ಸ್’ ಎಂದು ಕರೆಯಲ್ಪಡುವ ಶ್ರೀನಗರದ ನಂ.51 ಸ್ಕಾರ್ಡನ್‌ನ ಶಸ್ತ್ರಾಗಾರದಲ್ಲಿದೆ. 2025ರ ವೇಳೆಗೆ ಎಲ್ಲ ಹಳೆಯ ನಾಲ್ಕು ಮಿಗ್-21 ಯದ್ಧ ವಿಮಾನಗಳ ನಿವೃತ್ತಿಗೆ ಐಎಎಫ್ ಯೋಜಿಸಿದೆ.
ಮಿಗ್-21 ಸೋವಿಯತ್ ಕಾಲದ ಸಿಂಗಲ್ ಎಂಜಿನ್ ಯುದ್ಧ ವಿಮಾನವಾಗಿದೆ. ಇದು ನೆಲ ಮತ್ತು ಆಗಸ ಎರಡು ಕಡೆಯಲ್ಲೂ ಶತ್ರು ವಿಮಾನಗಳನ್ನು ಸದೆಬಡಿಯುವ ಸಾಮರ್ಥ್ಯ ಹೊಂದಿದೆ. ಇದು ಒಂದು ಕಾಲದಲ್ಲಿ ಭಾರತೀಯ ವಾಯು ಪಡೆಯ ಬೆನ್ನೆಲುಬಾಗಿತ್ತು. ಪ್ರಸ್ತುತ 70 ಮಿಗ್-21 ಮತ್ತು 50 ಮಿಗ್-29 ಯುದ್ಧ ವಿಮಾನಗಳನ್ನು ಐಎಎಫ್ ಹೊಂದಿದೆ.
ಇತ್ತೀಚೆಗೆ ಮಿಗ್-21 ವಿಮಾನಗಳ ಅಪಘಾತಗಳು ಹೆಚ್ಚಾಗಿ ಸಂಭವಿಸಿದ್ದು, ಅದರ ಸುರಕ್ಷತೆ ಮತ್ತು ವ್ಯಾಲಿಡಿಟಿ ಬಗ್ಗೆ ಪ್ರಶ್ನೆಗಳು ಮೂಡಿತ್ತು.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.