ಪೂರ್ವ ಲಡಾಖ್‌ನ ಕಾರ್ಯಾಚರಣೆ ಐಎಎಫ್ ಕ್ಷಮತೆಗೆ ಸಾಕ್ಷಿ
89ನೇ ಸಂಸ್ಥಾಪನ ದಿನಾಚರಣೆಯಲ್ಲಿ ಐಎಎಫ್ ಮುಖ್ಯಸ್ಥ ಚೌಧರಿ ಹೇಳಿಕೆ
Team Udayavani, Oct 9, 2021, 7:00 AM IST
ಹಿಂಡನ್: ಪೂರ್ವ ಲಡಾಖ್‌ನಲ್ಲಿ ಕಳೆದ ವರ್ಷ ಸೃಷ್ಟಿಯಾಗಿದ್ದ ಪರಿಸ್ಥಿತಿಗೆ ಕ್ಷಿಪ್ರವಾಗಿ ಸ್ಪಂದಿಸಿದ ಭಾರತೀಯ ವಾಯುಪಡೆ (ಐಎಎಫ್)ಯ ಕಾರ್ಯಾಚರಣೆಗಳು, ಐಎಎಫ್ ಯುದ್ಧಕ್ಕೆ ಸದಾ ಸಿದ್ಧವಿರುವ ಚುರುಕುತನ ಹಾಗೂ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿರುವ ವಾಯುಪಡೆಯ ಶಕ್ತಿ – ಕ್ಷಮತೆಗೆ ಸೂಕ್ತ ಉದಾಹರಣೆಯಾಗಿದೆ ಎಂದು ವಾಯುಪಡೆಯ ಮುಖ್ಯಸ್ಥ ವಿ.ಆರ್. ಚೌಧರಿ ತಿಳಿಸಿದ್ದಾರೆ.
ಐಎಎಫ್ 89ನೇ ಸಂಸ್ಥಾಪನ ದಿನಾಚರಣೆ ಅಂಗವಾಗಿ, ಉತ್ತರ ಪ್ರದೇಶದ ಹಿಂಡನ್ ವಾಯುನೆಲೆಯಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು. ಭಾರತೀಯ ವಾಯುಪಡೆಯ ಕ್ಷಮತೆ ಮತ್ತಷ್ಟು ಹೆಚ್ಚಾಗಬೇಕು. ಇದಕ್ಕಾಗಿ ಐಎಎಫ್ ಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲ ಹಿರಿಯ ಅಧಿಕಾರಿಗಳು, ತಮ್ಮ ಕಿರಿಯ ಅಧಿಕಾರಿಗಳ ಕರ್ತವ್ಯ ಪರತೆಯನ್ನು ಪೋಷಿಸುವ ಹಾಗೂ ಅವರ ಅಂತಃಶಕ್ತಿಯನ್ನು ಹೆಚ್ಚಿಸಲೂ ತಮ್ಮ ಗಮನ ಹರಿಸಬೇಕು ಎಂದರು.
ಗೌರವ: ಪೂರ್ವ ಲಡಾಖ್‌ನಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ವಾಯುಪಡೆಯ ಮೂರು ಸ್ಕ್ವಾಡ್ರಾನ್‌ಗಳಿಗೆ ವಾಯುಪಡೆಯ ಮುಖ್ಯಸ್ಥರಿಂದ ನೀಡಲಾಗುವ ಯೂನಿಟ್ ಸೈಟೇಶನ್ ಗೌರವ ನೀಡಲಾಯಿತು. ಮಿಗ್-29 ವಿಮಾನಗಳನ್ನು ಹೊಂದಿರುವ ಐಎಎಫ್ ನಂ. 47 ಸ್ಕ್ವಾಡ್ರಾನ್, 116 ಹೆಲಿಕಾಪ್ಟರ್ ಯೂನಿಟ್ ಹಾಗೂ “2255 ಸ್ಕ್ವಾಡ್ರನ್’ಗಳಿಗೆ ಈ ಗೌರವ ಸಿಕ್ಕಿದೆ.
ಮೋದಿ ಶುಭಾಶಯ
ವಾಯುಪಡೆಯ ಸಂಸ್ಥಾಪನ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಸಲ್ಲಿಸಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, “”ಭಾರತೀಯ ವಾಯುಪಡೆಯು ಧೈರ್ಯ, ಶ್ರದ್ಧೆ ಹಾಗೂ ವೃತ್ತಿಪರತೆಯ ಪ್ರತೀಕವಾಗಿದೆ. ಅತ್ಯಂಕ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ದೇಶದ ಸುರಕ್ಷತೆಗಾಗಿ ಚಾಣಾಕ್ಷ ಸೇವೆಯನ್ನು ಮಾಡಿರುವ ಈ ಪಡೆ, ಈ ಮೂಲಕ ತನ್ನ ಹೆಗ್ಗುರುತನ್ನು ಸ್ಥಾಪಿಸಿದೆ” ಎಂದಿದ್ದಾರೆ.
ಇದನ್ನೂ ಓದಿ:ಉಪ ಚುನಾವಣೆ: ಎರಡೂ ಕ್ಷೇತ್ರಗಳಲ್ಲಿ 37 ಅಭ್ಯರ್ಥಿಗಳಿಂದ 57 ನಾಮಪತ್ರ ಸಲ್ಲಿಕೆ
ಹಿಂಡನ್‌ನಲ್ಲೂ ಪ್ರದರ್ಶನ
ಲೇಹ್‌ನಲ್ಲಿ ಗಾಂಧಿ ಜಯಂತಿ ದಿನದಂದು ಅನಾವರಣಗೊಳಿಸಿದ್ದ 1 ಸಾವಿರ ಕೆ.ಜಿ. ತೂಕದ ಖಾದಿ ಧ್ವಜವನ್ನು ಶುಕ್ರವಾರ ಐಎಎಫ್ ದಿನದಂದು ಮತ್ತೆ ಪ್ರದರ್ಶಿಸಲಾಗಿದೆ. ಅದು 225 ಅಡಿ ಉದ್ದ, 150 ಅಡಿ ಅಗಲ ಇದೆ. ಐಎಎಫ್ 75 ವಿಮಾನಗಳು ಆ ಧ್ವಜದ ಸುತ್ತ ಗೌರವಪೂರ್ವಕ ಹಾರಾಟ ನಡೆಸಿದವು. ಭದ್ರವಾದ ಲೋಹದ ಸ್ತಂಭದ ಮೂಲಕ ರಾಷ್ಟ್ರಧ್ವಜ ಹಾರಿಸಲಾಗಿತ್ತು. ಅದರ ಪಕ್ಕದಲ್ಲಿಯೇ ಪ್ರಧಾನಿ ಮೋದಿಯವರ ಭಾವಚಿತ್ರವನ್ನೂ ಹಾಕಲಾಗಿತ್ತು ಮತ್ತು ವಿಶ್ವದ ಅತ್ಯಂತ ದೊಡ್ಡ ಖಾಕಿ ರಾಷ್ಟ್ರ ಧ್ವಜ ಎಂದು ಬರೆಯಲಾಗಿತ್ತು. ಅದನ್ನು ಲೇಹ್‌ನಿಂದ ಹಿಂಡನ್‌ಗೆ ತರಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM Modi: ಇಂದಿನಿಂದ ಮೋದಿ ಕುವೈತ್ ಭೇಟಿ…: 43 ವರ್ಷಗಳ ಬಳಿಕ ಭಾರತದ ಪ್ರಧಾನಿ ಭೇಟಿ
Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!
Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ ಸಂಪುಟ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
ಡಿ. 26: ಶಬರಿಮಲೆಯಲ್ಲಿ ಮಂಡಲ ಪೂಜೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
PM Modi: ಇಂದಿನಿಂದ ಮೋದಿ ಕುವೈತ್ ಭೇಟಿ…: 43 ವರ್ಷಗಳ ಬಳಿಕ ಭಾರತದ ಪ್ರಧಾನಿ ಭೇಟಿ
UI Movie Review: ಫೋಕಸ್ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!
Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್ ವಾಹನ
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.