ತರಬೇತಿ ಅವಧಿಯಲ್ಲಿ ಸ್ನೇಹ; ವೈವಾಹಿಕ ಜೀವನದಲ್ಲಿ ಎಡವಿದ 2015ನೇ ಸಾಲಿನ IAS ಟಾಪರ್ಸ್

Team Udayavani, Nov 20, 2020, 10:09 PM IST

IAS Topper

ಮಣಿಪಾಲ: ಪರೀಕ್ಷೆಗಳ ಅಂಕಗಳು, ಶ್ರೇಣಿಗಳು ನೈಜ ಜೀವನದಲ್ಲಿ ಪ್ರಯೋಜನಕ್ಕೆ ಬರುವುದಿಲ್ಲ ಎಂಬ ಮಾತೊಂದು ಇದೆ. ಇದು ಹೌದು ಎಂಬುದಕ್ಕೆ ಹಲವು ನಿದರ್ಶನಗಳು ನಮ್ಮ ಮುಂದೆ ನಡೆಯುತ್ತಿರುತ್ತವೆ. ಇದೀಗ ಮತ್ತೊಂದು ಉದಾಹರಣೆ ಲಭಿಸಿದೆ. ಇದು ದೇಶ ಪ್ರತಿಷ್ಠಿತ ಹುದ್ದೆಯಾದ ಐಎಎಸ್‌ ಟಾಪ್‌ 2ರಲ್ಲಿ ಕಾಣಿಸಿಕೊಂಡು ಬಳಿಕ ದಂಪತಿಗಳಾಗಿದ್ದವರ ಕತೆ.

ಹೌದು. 2015ರಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅಗ್ರಸ್ಥಾನದಲ್ಲಿದ್ದ ಐಎಎಸ್ ಅಧಿಕಾರಿ ಟೀನಾ ದಾಬಿ ಮತ್ತು ಅವರ ಐಎಎಸ್ ಪತಿ ಅಥರ್ ಅಮೀರ್‌ ಖಾನ್ ವಿಚ್ಛೇದನಕ್ಕಾಗಿ ಜೈಪುರದ ಕುಟುಂಬ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಪರಸ್ಪರ ಒಪ್ಪಿಗೆಯಿಂದ ಈ ವಿಚ್ಛೇದನ ಪಡೆಯಲು ಇಬ್ಬರೂ ನಿರ್ಧರಿಸಿದ್ದಾರೆ. ಇವರು 2018 ರಲ್ಲಿ ವಿವಾಹವಾಗಿದ್ದರು. ಅಥರ್ ಕಾಶ್ಮೀರಿ ಕುಟುಂಬಕ್ಕೆ ಸೇರಿದರಾಗಿದ್ದಾರೆ.

ಟೀನಾ ಯುಪಿಎಸ್ಸಿಯ ಅಗ್ರಸ್ಥಾನ ಪಡೆದಾಗ ಅದೇ ವರ್ಷ ಅಥರ್ ಎರಡನೇ ಸ್ಥಾನದಲ್ಲಿದ್ದರು. ತರಬೇತಿಯ ಸಮಯದಲ್ಲಿ ಟೀನಾ ಮತ್ತು ಅಮೀರ್‌ ಅವರಲ್ಲಿ ಸ್ನೇಹ ಬೆಳೆದು ಮದುವೆಯಾಗಲು ನಿರ್ಧರಿಸಿದ್ದರು. ಇಬ್ಬರೂ ರಾಜಸ್ಥಾನ ಕೇಡರ್ ಅಧಿಕಾರಿಗಳಾಗಿದ್ದು ಜೈಪುರದಲ್ಲಿ ಹುದ್ದೆ ಪಡೆದಿದ್ದಾರೆ.

ಕೆಲವು ಸಮಯದ ಹಿಂದೆ ಟೀನಾ ತನ್ನ ಸಾಮಾಜಿಕ ಮಾಧ್ಯಮ ಖಾತೆಗಳಿಂದ ಖಾನ್ ಉಪನಾಮವನ್ನು ತನ್ನ ಹೆಸರಿನಿಂದ ತೆಗೆದುಹಾಕಿದ್ದಳು. ಇದರ ಬಳಿಕ ಅಥರ್ ಕೂಡ ಇನ್‌ಸ್ಟಾಗ್ರಾಂನಲ್ಲಿ ತನ್ನ ಪತ್ನಿ ಟೀನಾಳನ್ನು ಫಾಲೋ ಮಾಡುವುದನ್ನು ನಿಲ್ಲಿಸಿದ್ದರು. ಅಂದಿನಿಂದ ಅವರ ವಿವಾಹದ ಬಗ್ಗೆ ಊಹಾಪೋಹಗಳು ಕಾಣಿಸಿಕೊಳ್ಳಲು ಪ್ರಾರಂಭವಾಯಿತು. 2018ರಲ್ಲಿ ಮದುವೆಯಾದ ಇವರು ಭಾರೀ ಸುದ್ದಿಯಲ್ಲಿದ್ದರು. ಐಎಎಸ್‌ ಅಧಿಕಾರಿಗಳು ಅದರಲ್ಲೂ ಟಾಪ್‌ 2ರಲ್ಲಿ ಕಾಣಿಸಿಕೊಂಡ ಇಬ್ಬರು ಮದುವೆಯಾಗುವ ಮೂಲಕ ದೇಶಾದ್ಯಂತ ಉತ್ತಮ ಅಭಿಪ್ರಾಯ ವ್ಯಕ್ತವಾಗಿತ್ತು. ಈ ಐಎಎಸ್ ದಂಪತಿಯನ್ನು ಅನೇಕ ರಾಜಕಾರಣಿಗಳು ಅಭಿನಂದಿಸಿದ್ದರು.ಆದರೆ ಹಿಂದೂ ಮಹಾಸಭಾ ಈ ಮದುವೆಯನ್ನು ಲವ್ ಜಿಹಾದ್ ಎಂದು ಕರೆದಿತ್ತು.

ಟೀನಾ ದಾಬಿ ಅವರು ಮೂಲತಃ ಜೈಪುರದವರು. ಆದರೆ ಅವರು ಜನಿಸಿದ್ದು ಭೋಪಾಲ್‌ನಲ್ಲಿ.  ಕಾನ್ವೆಂಟ್‌ ಶಾಲೆಯಲ್ಲಿ ಓದುತ್ತಿರುವಾಗಿನಿಂದಲೂ ಟೀನಾ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡವಳು. ಆದರೆ ಅವಳು 7ನೇ ತರಗತಿಯಲ್ಲಿದ್ದಾಗ ಅವಳ ಇಡೀ ಕುಟುಂಬ ದಿಲ್ಲಿಗೆ ಸ್ಥಳಾಂತರಗೊಂಡಿತು. ಟೀನಾ ತಂದೆ ಜಸ್ವಂತ್ ದಾಬಿ ಮತ್ತು ತಾಯಿ ಹಿಮಾನಿ ಇಬ್ಬರೂ ಎಂಜಿನಿಯರ್‌ಗಳಾಗಿದ್ದಾರೆ. ಇಬ್ಬರೂ ಯುಪಿಎಸ್‌ಸಿ ಮತ್ತು ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಯುಪಿಎಸ್‌ಸಿಯಲ್ಲಿ ಆಯ್ಕೆಯಾದ ಅನಂತರ, ಟೀನಾ ಮತ್ತು ಅಥರ್ ಮುಸ್ಸೂರಿಯಲ್ಲಿ ಉದ್ಯೋಗದ ತರಬೇತಿ ಪಡೆಯುತ್ತಿದ್ದರು. ಇಲ್ಲಿ ಇವರಿಬ್ಬರ ಮಧ್ಯೆ ಆತ್ಮೀಯತೆ ಬೆಳೆದು ವಿವಾಹದಲ್ಲಿ ಅಂತ್ಯವಾಗಿತ್ತು. ವಿಶೇಷ ಎಂದರೆ ಮದುವೆಗೆ ಮೊದಲೇ ಟೀನಾ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಖಾನ್‌ ಜತೆ ಸಂಬಂಧದಲ್ಲಿ ಇರುವುದಾಗಿ ಬರೆದಿದ್ದಳು. ಆದರೆ ಈಗ ಇಬ್ಬರೂ ಜೀವನ ಪರೀಕ್ಷೆಯಲ್ಲಿ ವಿಫಲವಾಗಿದ್ದು ವಿಚ್ಛೇದನದ ಮೊರೆ ಹೋಗಿದ್ದಾರೆ.

View this post on Instagram

A post shared by Tina Dabi (@dabi_tina)

ಟಾಪ್ ನ್ಯೂಸ್

navaneth-Rana

Maharashtra: ಬಿಜೆಪಿ ನಾಯಕಿ ನವನೀತ್‌ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್‌ ದಾಖಲು

400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

1-erqrer

Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ

ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

1-reee

Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್

baby 2

Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp Image 2024-11-17 at 21.09.50

Chennai: ನಟಿ ಕಸ್ತೂರಿ ಶಂಕರ್‌ಗೆ ನ.29ರ ವರೆಗೆ ನ್ಯಾಯಾಂಗ ಬಂಧನ

navaneth-Rana

Maharashtra: ಬಿಜೆಪಿ ನಾಯಕಿ ನವನೀತ್‌ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್‌ ದಾಖಲು

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

1-reee

Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Brahmavar

Malpe: ಅಸ್ವಾಭಾವಿಕ ಸಾವು; ಪ್ರಕರಣ ದಾಖಲು

WhatsApp Image 2024-11-17 at 21.09.50

Chennai: ನಟಿ ಕಸ್ತೂರಿ ಶಂಕರ್‌ಗೆ ನ.29ರ ವರೆಗೆ ನ್ಯಾಯಾಂಗ ಬಂಧನ

ssa

Malpe: ನಿಲ್ಲಿಸಲಾಗಿದ್ದ ಬುಲೆಟ್‌ ಕಳವು

navaneth-Rana

Maharashtra: ಬಿಜೆಪಿ ನಾಯಕಿ ನವನೀತ್‌ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್‌ ದಾಖಲು

400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.