ಭಿಕ್ಷುಕರ ಗುರುತಿಸಿ, ಹಣ ಗೆಲ್ಲಿ
Team Udayavani, Jan 18, 2018, 9:32 AM IST
ಹೈದರಾಬಾದ್: “ನಿಮ್ಮ ಏರಿಯಾದಲ್ಲಿ ಭಿಕ್ಷುಕರು ಇದ್ದರೆ ಮಾಹಿತಿ ಕೊಡಿ. 500 ರೂ. ಬಹುಮಾನ ಗೆಲ್ಲಿ’. ಸ್ವಲ್ವ ನಿಲ್ಲಿ. ಇದು ಕರ್ನಾಟಕ ಅಥವಾ ಕೇಂದ್ರ ಸರಕಾರದ ಹೊಸ ಯೋಜನೆ ಅಲ್ಲ. ತೆಲಂಗಾಣದಲ್ಲಿರುವ ಕೆ.ಚಂದ್ರಶೇಖರ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಸರಕಾರ ಜಾರಿ ಮಾಡಿರುವ ಯೋ ಜನೆ. ಕಳೆದ ವರ್ಷ ಅದನ್ನು ಜಾರಿ ಮಾಡಲಾಗಿತ್ತು. ತೆಲಂ ಗಾಣ ರಾಜ್ಯ ಬಂದೀಖಾನೆ ಇಲಾಖೆ (ಟಿಎಸ್‌ಪಿಡಿ) ಭಿಕ್ಷುಕ ರಹಿತ ರಾಜ್ಯ ತೆಲಂಗಾಣ ಆಗಬೇಕು ಎಂಬ ಸದಭಿಲಾಷೆೆ ಯಿಂದ ರಾಜ್ಯಾದ್ಯಂತ ವಿಶೇಷವಾಗಿ ಹೈದರಾಬಾದ್‌ನಲ್ಲಿ ಅದನ್ನು ಅನುಷ್ಠಾನಗೊಳಿಸಿದೆ.
ಕುತೂಹಲಕಾರಿ ಅಂಶವೆಂದರೆ ಇದುವರೆಗೆ ಎಂಟು ಮಂದಿ ಭಿಕ್ಷುಕರು ಇದ್ದಾರೆ ಎಂದು ಗುರುತಿಸಿ ಬಹುಮಾನ ಪಡೆದು ಕೊಂಡಿ ದ್ದಾರೆ. 2017ರ ಅ.28ರಂದು ಭಿಕ್ಷುಕರಿಗಾಗಿ ಗೃಹವನ್ನು ಆರಂಭಿಸಲಾಗಿತ್ತು. ಹೈದರಾ ಬಾದ್‌ನಲ್ಲಿರುವ ಚಂಚಲಗುಡ ಮತ್ತು ಚೇರ್ಲಪಲ್ಲಿಯಲ್ಲಿ ಕ್ರಮವಾಗಿ ಪುರು ಷರಿಗೆ ಮತ್ತು ಮಹಿಳೆಯರಿಗೆ ಎರಡು ಮನೆ ಗಳನ್ನು ಆರಂಭಿಸಲಾಗಿದೆ ಎಂದು ಟಿಎಸ್‌ಪಿಡಿಯ ಇನ್ಸ್‌ಪೆಕ್ಟರ್ ಜನರಲ್ ಎ.ನರಸಿಂಹ ಹೇಳಿದ್ದಾರೆ.
ಯೋಜನೆ ಆರಂಭವಾದ ಮೂರು ತಿಂಗಳ ಅವಧಿಯಲ್ಲಿ ಎರಡು ಸಾವಿರ ಮಂದಿ ಯನ್ನು ಈ ಗೃಹಗಳಿಗೆ ದಾಖಲಿಸಲಾಗಿದೆ. ಈ ಪೈಕಿ 1,500 ಪುರುಷರು, 500 ಮಹಿಳೆಯರು. ಅವರ ಪೂರ್ವಾಪರ ವಿಚಾರಿಸಿ ಮತ್ತೂಮ್ಮೆ ಭಿಕ್ಷೆ ಬೇಡಲು ಬಂದರೆ ಜೈಲಿಗೆ ತಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ ಎಂದು ನರಸಿಂಹ ಹೇಳಿದ್ದಾರೆ. ಭಿಕ್ಷುಕರ ಫೋಟೋ, ಕೈಬೆರಳುಗಳ ಗುರುತನ್ನು ದಾಖಲಿಸಿ ಬಿಡುಗಡೆ ಮಾಡಲಾಗಿದೆ. ಕಳೆದ ಬಾರಿ ಅಮೆರಿಕ
ಅಧ್ಯಕ್ಷರ ಪುತ್ರಿ ಇವಾಂಕಾ ಟ್ರಂಪ್ ಭೇಟಿ ನೀಡಿದ್ದಾಗಲೂ ಭಿಕ್ಷುಕರನ್ನು ಬೇರೆಡೆ ಸ್ಥಳಾಂತರಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.