50 ಕೋಟಿಗಿಂತ ಹೆಚ್ಚಿನ ಸಾಲಕ್ಕೆ ಆಡಿಟ್
Team Udayavani, May 1, 2018, 8:36 AM IST
ಹೊಸದಿಲ್ಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ 13 ಸಾವಿರ ಕೋಟಿ ರೂ. ವಂಚನೆ ಉಂಟಾದ ಬಳಿಕ ಸರಕಾರಿ ಸ್ವಾಮ್ಯದ ಬ್ಯಾಂಕ್ಗಳಲ್ಲಿನ ಅನುತ್ಪಾದಕ ಆಸ್ತಿ (ಎನ್ಪಿಎ) ನಿಯಂತ್ರಣಕ್ಕೆ ಕೇಂದ್ರ ಸರಕಾರ ಕ್ರಮ ಕೈಗೊಂಡಿದೆ. 50 ಕೋಟಿ ರೂ.ಗಳಿಗಿಂತ ಹೆಚ್ಚಿನ ಮೊತ್ತದ ಸಾಲ ಪಡೆದುಕೊಂಡಿರುವ ಖಾತೆಗಳ ಮೇಲೆ ಹೆಚ್ಚಿನ ನಿಗಾ ಇಟ್ಟು, ಕರಾರುವಾಕ್ಕಾಗಿ ಪರಿಶೋಧನೆ (ಫೊರೆನ್ಸಿಕ್ ಆಡಿಟ್) ನಡೆಸಲು ಕೇಂದ್ರ ಹಣಕಾಸು ಇಲಾಖೆ ಸೂಚಿಸಿದ್ದು, ಅದರಂತೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳು ಆಡಿಟಿಂಗ್ ಆರಂಭಿಸಿವೆ.
ಸಾಲ ಖಾತೆಗಳ ಫೋರೆನ್ಸಿಕ್ ಆಡಿಟ್ ಪೂರ್ತಿಗೊಂಡ ಬಳಿಕ ಬ್ಯಾಂಕ್ಗಳು ಅವುಗಳು ಅನುತ್ಪಾದಕ ಆಸ್ತಿಯಾಗಿ (ಎನ್ಪಿಎ) ಬದಲಾವಣೆಗೊಳ್ಳಲಿಯೋ ಎಂಬ ಬಗೆಗಿನ ವರದಿಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲಿವೆ. ಪರಿಶೀಲನೆ ವೇಳೆ ವಂಚನೆ ಪತ್ತೆಯಾದರೆ, ಬ್ಯಾಂಕ್ಗಳ ಮುಖ್ಯ ಜಾಗೃತ ದಳದ ಜತೆ ಚರ್ಚಿಸಿ ಸಿಬಿಐಗೆ ಮಾಹಿತಿ ನೀಡಬೇಕಿದೆ.
ಏನಿದು ಫೊರೆನ್ಸಿಕ್ ಆಡಿಟ್?: ನಿಗದಿತ ವ್ಯಕ್ತಿ, ಕಂಪನಿಯ ಹಣಕಾಸು ವಹಿವಾಟಿನ ಬಗ್ಗೆ ಪರಿಶೀಲನೆ ನಡೆಸುವುದೇ ಫೊರೆನ್ಸಿಕ್ ಆಡಿಟ್. ಇದರಿಂದ ವಂಚನೆ ಪತ್ತೆ ಸಾಧ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.