![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jan 1, 2023, 3:51 PM IST
ಮುಂಬಯಿ : ಕಳೆದ ವರ್ಷ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನಾಯಕತ್ವಕ್ಕೆ ಹೊಸ ಸೆಳವು ನೀಡಿದ್ದರು. 2023 ರಲ್ಲಿ ಈ ಪ್ರವೃತ್ತಿ ಮುಂದುವರಿದರೆ, ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ದೇಶವು ರಾಜಕೀಯ ಬದಲಾವಣೆಯನ್ನು ಕಾಣಬಹುದು ಎಂದು ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್ ಹೇಳಿದ್ದಾರೆ.
ಸೇನಾ ಮುಖವಾಣಿ ‘ಸಾಮ್ನಾ’ದಲ್ಲಿ ತಮ್ಮ ಸಾಪ್ತಾಹಿಕ ಅಂಕಣ ರೋಖ್‌ಥೋಕ್‌ನಲ್ಲಿ ರಾವುತ್, ”ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ “ದ್ವೇಷ ಮತ್ತು ವಿಭಜನೆಯ ಬೀಜಗಳನ್ನು ಬಿತ್ತಬಾರದು. ರಾಮ ಮಂದಿರ ವಿವಾದ ಇತ್ಯರ್ಥಗೊಂಡಿದ್ದು, ಈ ವಿಚಾರದಲ್ಲಿ ಮತ ಕೇಳಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
” ಹೊಸ ‘ಲವ್ ಜಿಹಾದ್’ ಕೋನವನ್ನು ಅನ್ವೇಷಿಸಲಾಗುತ್ತಿದೆ. ಲವ್ ಜಿಹಾದ್ ಎಂಬ ಅಸ್ತ್ರವನ್ನು ಚುನಾವಣೆ ಗೆಲ್ಲಲು ಮತ್ತು ಹಿಂದೂಗಳಲ್ಲಿ ಭಯ ಹುಟ್ಟಿಸಲು ಬಳಸಲಾಗುತ್ತಿದೆಯೇ?. ಕಳೆದ ತಿಂಗಳು ನಟಿ ತುನಿಶಾ ಶರ್ಮಾ ಪ್ರಕರಣ, ಶ್ರದ್ಧಾ ವಾಲ್ಕರ್ ಪ್ರಕರಣವನ್ನು ಉಲ್ಲೇಖಿಸಿದ ರಾವುತ್, ಇವು ಲವ್ ಜಿಹಾದ್ ಪ್ರಕರಣಗಳಲ್ಲ ಎಂದು ಪ್ರತಿಪಾದಿಸಿದರು, ಆದರೆ ಯಾವುದೇ ಸಮುದಾಯ ಅಥವಾ ಧರ್ಮದ ಯಾವುದೇ ಮಹಿಳೆ ದೌರ್ಜನ್ಯವನ್ನು ಎದುರಿಸಬಾರದು ಎಂದು ಸಮರ್ಥಿಸಿಕೊಂಡರು.
2023 ರಲ್ಲಿ ದೇಶವು ಭಯದಿಂದ ಮುಕ್ತವಾಗಲಿದೆ. ‘ನಡೆಯುತ್ತಿರುವುದು ಅಧಿಕಾರದ ರಾಜಕಾರಣ. ರಾಹುಲ್ ಗಾಂಧಿಯವರ ಯಾತ್ರೆ ಯಶಸ್ವಿಯಾಗಲಿ ಮತ್ತು ಅದರ ಉದ್ದೇಶವನ್ನು ಸಾಧಿಸಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.